ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿರ್ದೇಶಕನ ಬಂಧನ: ಇಬ್ಬರು ಹೆಣ್ಣುಮಕ್ಕಳ ರಕ್ಷಣೆ

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿರ್ದೇಶಕನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ 32 ವರ್ಷದ ನವೀನ್ ಕುಮಾರ್ ಪ್ರೇಮ್ ಲಾಲ್ ಆರ್ಯ ಎಂದು ಗುರುತಿಸಲಾಗಿದೆ. ನವೀನ್ ಕುಮಾರ್ ಬಾಲಿವುಡ್ ನಲ್ಲಿ ಕಾಸ್ಟಿಂಗ್ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ.

ನವೀನ್, ಜ್ಯೂನಿಯರ್ ಆರ್ಟಿಸ್ಟ್, ಮಾಡೆಲ್ ಗಳು ಸೇರಿದಂತೆ 18 ರಿಂದ 25 ವರ್ಷದ ಹೆಣ್ಣುಮಕ್ಕಳನ್ನು ಈ ದಂಧೆಯಲ್ಲಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರ್ ಹೇಳಿದ್ದಾರೆ. ನವೀನ್ ಬಂಧನದ ಸಮಯದಲ್ಲಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಇನ್ನು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಬಂಧಿತ ನವೀನ್ ಕಳೆದ 5 ವರ್ಷಗಳಿಂದ ಈ ದಂಧೆ ಮಾಡುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ನಿರ್ದೇಶಕ ನವೀನ್ ಗೆ ಸ್ನೇಹಿತರಾಗಿದ್ದ ಅಜಯ್ ಶರ್ಮಾ ಮತ್ತು ವಿಜಯ್ ಇಬ್ಬರು ಸಹಾಯ ಮಾಡುತ್ತಿದ್ದಾರಂತೆ. ಇಬ್ಬರನ್ನು ಪೊಲೀಸರು ಹುಡುಕುತಿದ್ದು ಸದ್ಯ ಇಬ್ಬರು ತಲೆಮರೆಸಿಕೊಂಡಿದ್ದಾರಂತೆ. ಇವರು ಒಬ್ಬಳು ಹೆಣ್ಣುಮಗಳ ತಲೆಗೆ 60.000 ಕಟ್ಟುತ್ತಿದ್ದರಂತೆ.

Casting Director Naveen Kumar Arrested For Running Prostitution Racket

ಕಳೆದ ಕೆಲವು ದಿನಗಳಿಂದ ಪೊಲೀಸರು ನವೀನ್ ಗೆ ಬಲೆ ಬೀಸಿದ್ದರು. ಅನಾಮಿಕ ವ್ಯಕ್ತಿ ಓರ್ವ ನೀಡಿದ ಸುಳಿವಿನ ಆಧಾರದ ಮೇಲೆ ನವೀನ್ ಕುಮಾರ್ ಬಂಧಿಸಲು ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಪ್ರಿತಿಕ್ರಿಯೆ ನೀಡಿರುವ ಮುಂಬೈ ಪೊಲೀಸರು " ನಮ್ಮೊಂದಿಗೆ ಕೈಜೋಡಿಸಿದ ವ್ಯಕ್ತಿಯೊರ್ವ ನವೀನ್ ಕುಮಾರ್ ಅವರನ್ನು ಸಂಪರ್ಕಿಸಿ, ಚಿತ್ರರಂಗದಲ್ಲಿ ಕೆಲಸ ಮಾಡುವ ಆರ್ಟಿಸ್ಟ್ ಮತ್ತು ಮಾಡೆಲ್ ಗಳನ್ನು ಕಳುಹಿಸುವಂತೆ ಕೇಳಿಕೊಂಡನು. ಇದಕ್ಕೆ ಒಪ್ಪಿದ ನವೀನ್ 60,000 ರೂಪಾಯಿಗೆ ಬೇಡಿಕೆ ಇಟ್ಟನು. ಜೊತೆಗೆ ಹೋಟೆಲ್ ಬುಕ್ ಮಾಡಲು ಹಣ ಕೇಳಿದನು. ನಂತರ ಬಂಧಿತ ನವೀನ್ ಕುಮಾರ್ ಒಪ್ಪಿಕೊಂಡಂತೆ ಇಬ್ಬರು ಹುಡುಗಿಯ ಜೊತೆ ಆಗಮಿಸಿದಾಗ ಆತನನ್ನು ಬಂಧಿಸಿದೆವು" ಎಂದು ಹೇಳಿದ್ದಾರೆ.

ನವೀನ್ ಜೊತೆಗಿದ್ದ ಇಬ್ಬರು ಹುಡುಗಿಯರನ್ನು ವಿಚಾರಣೆ ಮಾಡಿದಾಗ ದೇಹಲಿ ಮೂಲದವರು, ಕಳೆದ ಕೆಲವು ವರ್ಷಗಳಿಂದ ಈ ದಂಧೆಯಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ. ಇಬ್ಬರಿಂದ ಹೇಳಿಕೆ ಪಡೆದು ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

English summary
Bollywood casting Director naveen Kumar Arrested for running prostitution racket in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X