ಹೃತಿಕ್ ಜೊತೆ ಆತ್ಮೀಯತೆ ; ದ್ವೇಷದ ಅಗ್ನಿಯಲ್ಲಿ ಸುಡುತ್ತಿದ್ದ ಬಾಯ್‌ಫ್ರೆಂಡ್ - ಬ್ರೇಕಪ್ ಬಗ್ಗೆ ಮಾತನಾಡಿದ ಮೃಣಾಲ್
ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ಹೀಗಾಗಿಯೇ ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ಆದರೆ ಕೆಲ ಒಮ್ಮೆ ಇದೇ ಪ್ರೀತಿಯ ವಿಷಯದಲ್ಲಿ ಮನುಷ್ಯ ಎಡವುತ್ತಾನೆ. ಸಿಕ್ಕ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಇದಕ್ಕೆ ಹತ್ತು ಹಲವು ಕಾರಣಗಳಿವೆಯಾದರೂ ಆ ಪೈಕಿ ಅಸೂಯೆ ಕೂಡ ಒಂದು.
ಹೌದು, ಎಲ್ಲರಿಗೆ ಗೊತ್ತಿರುವಂತೆ ತಿಳಿವಳಿಕೆ, ನಂಬಿಕೆ, ಸಕಾರಾತ್ಮಕ ಭಾವನೆಯೇ ಪ್ರೀತಿಯ ಅಡಿಪಾಯ. ಆದರೆ ಒಮ್ಮೊಮ್ಮೆ ಈ ಸಂಬಂಧದಲ್ಲಿ ನುಸುಳುವ ಅಸೂಯೆ ಅಡಿಪಾಯವನ್ನೇ ಬುಡಮೇಲಾಗಿಸುತ್ತೆ. ನಿಜಾ ಸಂಬಂಧ ಅಂದ ಮೇಲೆ ಅಸೂಯೆ ಸಾಮಾನ್ಯ. ಆದರೆ ಅದು ಮೀರಿದಾಗ ಹಲವು ವರ್ಷಗಳ ಸಂಬಂಧ ಮುರಿದು ಬೀಳುತ್ತೆ. ಮನದಲ್ಲಿದ್ದ ಪ್ರೀತಿ ಮಣ್ಣು ಪಾಲಾಗುತ್ತೆ. ಉದಾಹರಣೆಗೆ ಮೃಣಾಲ್ ಠಾಕೂರ್ ಅವರ ಪ್ರೇಮಕಥೆಯನ್ನೇ ತೆಗೆದುಕೊಳ್ಳಿ.

ಹೌದು, ಮೃಣಾಲ್ ಠಾಕೂರ್... ಹುಟ್ಟಿದ್ದು ಮಹಾರಾಷ್ಟ್ರದಲ್ಲಿ ಆದರೂ, ದಕ್ಷಿಣದೆಲ್ಲೆಡೆ ಅಭಿಮಾನಿ ಬಳಗವನ್ನ ಹೊಂದಿರುವ ಚೆಲುವೆ. ''ಸೀತಾ ರಾಮಂ'' .. ''ಹಾಯ್ ನನ್ನಾ'' .. ''ಫ್ಯಾಮಿಲಿ ಸ್ಟಾರ್'' .. ಹೀಗೆ ಒಂದಾದ ಮೇಲೊಂದು ತೆಲುಗು ಸಿನಿಮಾಗಳ ಮೂಲಕ ಜನ ಮನ ಗೆದ್ದ ಮೃಣಾಲ್ ಸದ್ಯ ತಮ್ಮ ಮೂಲ ಸ್ಥಳಕ್ಕೆ ಮರಳಿದ್ದಾರೆ. ಒಂದರ ಹಿಂದೆ ಒಂದರಂತೆ ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ಧಾರೆ. ಆ ಪೈಕಿ ಇವರ ''ದೋ ದಿವಾನೆ ಶೆಹರ್ ಮೇ'' ಚಿತ್ರ ಇದೇ ಫೆಬ್ರವರಿ 20ರಂದು ಬಿಡುಗಡೆಯಾಗಲಿದೆ.
ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಮೃಣಾಲ್ ಸದ್ಯ ತಮ್ಮ ಮತ್ತೊಂದು ಪ್ರೇಮ ಕಥೆ ಮತ್ತು ವ್ಯಥೆಯನ್ನು ಹಂಚಿಕೊಂಡಿದ್ದಾರೆ. ಹೃತಿಕ್ ರೋಷನ್ ಜೊತೆಗಿನ ನನ್ನ ಆತ್ಮೀಯತೆಯಿಂದ ಆತನ ನಿದ್ದೆಗೆ ಕೊಳ್ಳಿ ಬಿದ್ದಿತ್ತು ಎಂದಿದ್ದಾರೆ.
ಈ ಕುರಿತು ''ರೌನಕ್ ರಜನಿ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೃಣಾಲ್ ಠಾಕೂರ್, ನನ್ನ ಮಾಜಿ ಬಾಯ್‌ಫ್ರೆಂಡ್, ಇಲ್ಲಿಯವನಾಗಿರಲಿಲ್ಲ. ಬದಲಿಗೆ ವಿದೇಶಿಗ ಆಗಿದ್ದ ಎಂದು ಹೇಳಿದ್ದಾರೆ. 2018ರಲ್ಲಿ ನಾನು ಹೃತಿಕ್ ರೋಷನ್ ಜೊತೆ ''ಸೂಪರ್ 30'' ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದ್ದೆ, ಈ ಸಮಯದಲ್ಲಿ ನನ್ನ ಬಾಯ್‌ಫ್ರೆಂಡ್‌ಗೆ ಅಸುರಕ್ಷತೆ ಮತ್ತು ಅಭದ್ರತೆಯ ಭಾವನೆ ಕಾಡಲು ಶುರುವಾಗಿತ್ತು ಎಂದು ಹೇಳಿದ್ದಾರೆ.
ಹೃತಿಕ್ ರೋಷನ್ ಅವರಂತಹ ಸುಂದರ ಹೀರೋ ಜೊತೆ ಸುತ್ತಾಡುತ್ತಿದ್ದಿದ್ದು, ಶೂಟಿಂಗ್ ಮಾಡುತ್ತಿದ್ದು ಕಂಡು ಅವನು ದ್ವೇಷದ ಅಗ್ನಿಯಲ್ಲಿ ಸುಡುತ್ತಿದ್ದ ಎಂದು ಹೇಳಿರುವ ಮೃಣಾಲ್ ಠಾಕೂರ್, ಹೃತಿಕ್ ರೋಷನ್ ಅವರಂತೆಯೇ ಮಸ್ತುಕಟ್ಟಾಗಿ ಕಾಣಲು ಆತ ಜಿಮ್‌ನಲ್ಲಿ ವರ್ಕೌಟ್ ಮಾಡಲು ಶುರು ಮಾಡಿದ್ದ ಎಂದು ಹೇಳಿದ್ದಾರೆ. ಜಿಮ್‌ನಲ್ಲಿ ಬೆವರು ಸುರಿಸಿ 15-17 ಕೆಜಿ ತೂಕ ಇಳಿಸಿಕೊಂಡ ಎಂದು ಹೇಳಿದ್ದಾರೆ.

ಮುಂದುವರೆದು ಅವನ ಬದಲಾವಣೆ ಕಂಡು ನನಗೆ ಆಶ್ಚರ್ಯವಾಯ್ತು ಎಂದು ಹೇಳಿರುವ ಮೃಣಾಲ್ ಠಾಕೂರ್, ಕೆಲ ದಿನಗಳ ನಂತರ ಅವನು ಏಕಾಏಕಿ ಜಿಮ್ ಹೋಗುವುದನ್ನು ನಿಲ್ಲಿಸಿದ, ಇಷ್ಟೇ ಅಲ್ಲ ಆ ನಂತರ ಸರಿಯಾಗಿ ತಿಂದು ಮತ್ತೆ 20 ಕೆಜೆ ತೂಕ ಹೆಚ್ಚಿಸಿಕೊಂಡ ಎಂದು ಹೇಳಿದ್ದಾರೆ. ಕೇಳಿದರೆ ಸುಸ್ತಾಗಿದೆ ಎನ್ನುತ್ತಿದ್ದ ಎಂದು ಹೇಳಿರುವ ಮೃಣಾಲ್ ನಾನು ಅವನ ಬಳಿ ತೂಕ ಇಳಿಸಿಕೋ ಎಂದು ಯಾವತ್ತು ಹೇಳಿರಲಿಲ್ಲ, ತೂಕ ಹೆಚ್ಚು ಮಾಡ್ಕೋ ಅಂತಾನೂ ಹೇಳಿರಲಿಲ್ಲ ಎಂದು ಹೇಳಿದ್ದಾರೆ. ನಾನು ಬೇರೆಯವರ ಜೊತೆ ಸುತ್ತಾಡುವುದು ಕಂಡು ಅವನಿಗೆ ತುಂಬಾ ಅಸೂಯೆ ಆಗುತ್ತಿತ್ತು ಎಂದಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ''ರಣವೀರ್ ಅಲಾಹಾಬಾದಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಮೃಣಾಲ್, ಈ ಸಂದರ್ಶನದಲ್ಲಿ ತಮ್ಮ ಇನ್ನೊಂದು ಲವ್ ಮತ್ತು ಬ್ರೇಕಪ್ ಕಥೆಯನ್ನು ಹೇಳಿದ್ದರು. ನಾನು ನಟಿಯಾಗಿದ್ದಕ್ಕೆ ನನ್ನ ಪ್ರೇಮ ಸಂಬಂಧ ಮುರಿದು ಬಿತ್ತು ಎಂದು ಹೇಳಿದ್ದ ಮೃಣಾಲ್ ಆ ಸಂಬಂಧ ಕೊನೆಯಾದ ನಂತರ ನನಗೆ ನೆಮ್ಮದಿ ಸಿಕ್ತು ಎಂದಿದ್ದರು. ನಮ್ಮ ಇಬ್ಬರ ಆಚಾರ ವಿಚಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದವು ಎಂದು ಹೇಳಿದ್ದ ಮೃಣಾಲ್ ನಿನ್ನದು ತುಂಬಾನೇ ಆತುರದ ವ್ಯಕ್ತಿತ್ವ, ನಾನು ನಿನ್ನನ್ನೂ ಸಹಿಸಲಾರೆ ಎಂದು ಆತ ನನಗೆ ಹೇಳಿದ್ದ ಎಂದು ಹೇಳಿದ್ದರು. ನಿನ್ನ ಸಹವಾಸ ಸಾಕು ಎಂದು ಬಿಟ್ಟು ಹೋದ ಎಂದು ಹೇಳಿದ್ದರು.


Click it and Unblock the Notifications











