ದೀಪಿಕಾ ಬಿಕಿನಿ ಮೇಲೆ CBFC ಕಣ್ಣು!: ಹೃತಿಕ್ 'ಫೈಟರ್'ಗೆ ಬಿಸಿ ಮುಟ್ಟಿಸಿದ ಸೆನ್ಸಾರ್

ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಫೈಟರ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ದೇಶಭಕ್ತಿ ಸಾರುವ ಈ ಚಿತ್ರವನ್ನು ಗಣರಾಜ್ಯೋತ್ಸವ ಸಂಭ್ರಮದಲ್ಲೇ ತೆರೆಗೆ ತರಲಾಗುತ್ತಿದೆ. ಸಿದ್ದಾರ್ಥ್ ಆನಂದ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ರಿಲೀಸ್ ಡೇಟ್ ಹತ್ತಿರವಾದಂತೆ 'ಫೈಟರ್' ಸೆನ್ಸಾರ್ ಕೆಲಸಗಳನ್ನು ಪೂರೈಸಿದೆ. ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕುವಂತೆ ಸೂಚಿಸಿ ಚಿತ್ರಕ್ಕೆ ಸಿಬಿಎಫ್‌ಸಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಮುಖ್ಯವಾಗಿ ಚಿತ್ರದಲ್ಲಿರುವ ಹಸಿಬಿಸಿ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಹೇಳಲಾಗಿದೆ. ಇದೇ ವಿಚಾರ ಈಗ ಬಾಲಿವುಡ್‌ನಲ್ಲಿ ಭಾರೀ ಸುದ್ದಿ ಆಗುತ್ತಿದೆ. ಚಿತ್ರದ ಟೀಸರ್‌ನಲ್ಲಿ ಸಹ ದೀಪಿಕಾ ಬಿಕಿನಿ ಸನ್ನಿವೇಶಗಳು ಎಲ್ಲರ ಹುಬ್ಬೇರಿಸಿತ್ತು.

CBFC asks to remove bold scenes from Hrithik Roshan, Deepika Padukones fighter

'ಫೈಟರ್' ಹೇಳಿಕೇಳಿ ದೇಶಭಕ್ತಿ ಸಾರುವ ಸಿನಿಮಾ. ಹಾಗಾಗಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ನಿರೀಕ್ಷೆ ಮಾಡಲಾಗಿತ್ತು. ಸಿಬಿಎಫ್‌ಸಿ ಮಾತ್ರ ಷರತ್ತು ಅನ್ವಯ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಅನ್ಯ ಮಾರ್ಗವಿಲ್ಲದೇ ಚಿತ್ರತಂಡ ಇದನ್ನು ಒಪ್ಪಿಕೊಳ್ಳಬೇಕಾಗಿದೆ. ಇನ್ನು ಚಿತ್ರದ ಒಟ್ಟು ಕಾಲಾವಧಿ 166 ನಿಮಿಷ ಎನ್ನುವುದು ರಿವೀಲ್ ಆಗಿದೆ.

ಇತ್ತೀಚೆಗಷ್ಟೇ 'ಫೈಟರ್' ಚಿತ್ರದ ಸೆನ್ಸಾರ್ ಕಾರ್ಯ ಮುಗಿದಿದೆ. ಆದರೆ, ಸೆನ್ಸಾರ್ ಸಮಯದಲ್ಲಿ ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿಯ ಸದಸ್ಯರು ಸಲಹೆ ನೀಡಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ಮತ್ತು ದೀಪಿಕಾ ನಡುವೆ ಸಾಕಷ್ಟು ಬೋಲ್ಡ್ ದೃಶ್ಯಗಳಿವೆ. ಇವುಗಳನ್ನು ಕತ್ತರಿಸಲು ಚಿತ್ರತಂಡಕ್ಕೆ ಸೂಚಿಸಲಾಗಿದೆ. ಕೆಲವು ಪದಗಳನ್ನು ಮ್ಯೂಟ್ ಮಾಡಲು ಸಹ ಹೇಳಲಾಗಿದೆ.

CBFC asks to remove bold scenes from Hrithik Roshan, Deepika Padukones fighter

ಲೈಂಗಿಕವಾಗಿ ಪ್ರಚೋದಿಸುವಂತಹ ಕೆಲವು ದೃಶ್ಯಗಳನ್ನು ಕತ್ತರಿಸಲಾಗಿದೆ. ಈ 8 ಸೆಕೆಂಡುಗಳ ಬೋಲ್ಡ್ ದೃಶ್ಯಗಳ ಜೊತೆಗೆ ಟಿವಿ ಸುದ್ದಿ ಓದುವ ದೃಶ್ಯದಲ್ಲಿನ 25 ಸೆಕೆಂಡುಗಳ ಆಡಿಯೊವನ್ನು ತೆಗೆಸಲಾಗಿದೆ. ಈ ದೃಶ್ಯಗಳನ್ನು ಕಟ್ ಮಾಡಿದ ನಂತರ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದ್ದಾರೆ. ಸೆನ್ಸಾರ್ ಪ್ರಮಾಣ ಪತ್ರದ ಪ್ರಕಾರ ಚಿತ್ರದ ಅವಧಿ 166 ನಿಮಿಷಗಳು. ಅಂದರೆ ರನ್ ಟೈಮ್ 2 ಗಂಟೆ 46 ನಿಮಿಷ ಎನ್ನುವುದು ಗೊತ್ತಾಗಿದೆ.

ಕಳೆದ ವರ್ಷ ಬಂದ 'ಪಠಾಣ್' ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿತ್ತು. ಚಿತ್ರದಲ್ಲಿ ದೀಪಿಕಾ ಬಿಕಿನಿ ದೃಶ್ಯಗಳು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಕೆಲ ದೃಶ್ಯಗಳಿಗೆ ಕತ್ತರಿ ಬಿದ್ದಿತ್ತು. ಅಂದಹಾಗೆ 'ಪಠಾಣ್' ಚಿತ್ರವನ್ನು ಸಹ ಸಿದ್ದಾರ್ಥ್ ಆನಂದ್ ಕಟ್ಟಿಕೊಟ್ಟಿದ್ದರು.

ಈಗಾಗಲೇ 'ಫೈಟರ್' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಮುಗಿ ಬೀಳುತ್ತಿದ್ದಾರೆ. 'ಫೈಟರ್' ಮೊದಲ ದಿನ 86,516 ಮುಂಗಡ ಬುಕ್ಕಿಂಗ್ ಆಗಿ ರೂ. 2.84 ಕೋಟಿ. ಇದರಲ್ಲಿ 2ಡಿ ಹಿಂದಿ ಆವೃತ್ತಿ 33,624 ಟಿಕೆಟ್‌ಗಳು, 3ಡಿ ಹಿಂದಿ ಆವೃತ್ತಿ 46,790 ಟಿಕೆಟ್‌ಗಳು, ಐಮ್ಯಾಕ್ಸ್ 3ಡಿ ಆಕ್ಷನ್ 4,881 ಟಿಕೆಟ್‌ಗಳು, 4ಡಿಎಕ್ಸ್ 3ಡಿ ಫಾರ್ಮ್ಯಾಟ್ 1,221 ಟಿಕೆಟ್‌ಗಳು ಮಾರಾಟವಾಗಿವೆ.

ದೆಹಲಿಯಲ್ಲಿ ರೂ. 67.39 ಲಕ್ಷ, ಮಹಾರಾಷ್ಟ್ರದಲ್ಲಿ ರೂ. 75.02 ಲಕ್ಷ, ತೆಲಂಗಾಣದಲ್ಲಿ ರೂ. 40.73 ಲಕ್ಷ ಮತ್ತು ಕರ್ನಾಟಕದಲ್ಲಿ 43.54 ಲಕ್ಷ ರೂ.ಗಳನ್ನು ಮೊದಲ ದಿನ ಮುಂಗಡ ಬುಕ್ಕಿಂಗ್ ಮೂಲಕ ಸಂಗ್ರಹಿಸಲಾಗಿದೆ. ಮುಂಗಡ ಬುಕ್ಕಿಂಗ್ ರೂಪದಲ್ಲಿ ಭಾರಿ ಕಲೆಕ್ಷನ್ ನಿರೀಕ್ಷೆಯಲ್ಲಿದೆ ಚಿತ್ರತಂಡ. ಭಾರತದ ಮೊದಲ ವೈಮಾನಿಕ ಸಾಹಸ ಸಿನಿಮಾ 'ಫೈಟರ್. ಇನ್ನು ಚಿತ್ರದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್ ಕೂಡ ನಟಿಸಿದ್ದಾರೆ.

ಇನ್ನು ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಿದ್ದಾರ್ಥ್ ಆನಂದ್ ನಡುವೆ ಕಿರಿಕ್ ಆಗಿದೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಇದೇ ಕಾರಣಕ್ಕೆ ಆಕೆ ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿ ಆಗುತ್ತಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ನಿರ್ದೇಶಕರು ಪ್ರತಿಕ್ರಿಯಿಸಿ ಅದೆಲ್ಲಾ ಕೇವಲ ಗಾಸಿಪ್ ಎಂದಿದ್ದಾರೆ.

More from Filmibeat

English summary
bollywood fighter faces cuts by CBFC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X