ಆಯುಷ್ಮಾನ್ ಖುರಾನ ಜೊತೆ ರಶ್ಮಿಕಾ ಮಂದಣ್ಣ ಲಿಪ್ ಲಾಕ್, 'ಥಮ್ಮ'ಗೆ ಎಲ್ಲೆಲ್ಲಿ ಕತ್ತರಿ ? ರನ್ ಟೈಮ್ ಎಷ್ಟು ?
ಕನ್ನಡದಿಂದ ಕಣ್ಮರೆಯಾದ ರಶ್ಮಿಕಾ ಮಂದಣ್ಣ ಆ ನಂತರ ತೆಲುಗು ಚಿತ್ರರಂಗದಲ್ಲಿ ಬಿಡಾರ ಹೂಡಿದ್ದರು. ಅಲ್ಲಿ ಹೆಸರು .. ಹಣ .. ಕೀರ್ತಿ ಸಂಪಾದನೆ ಮಾಡಿ ಸದ್ಯ ಬಾಲಿವುಡ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ .. ಆಂಧ್ರದಲ್ಲಿ ಸಿಕ್ಕ ಗೆಲುವು ಮುಂಬೈನಲ್ಲಿ ಇವರಿಗೆ ಸಿಕ್ತಿಲ್ಲ. ರಶ್ಮಿಕಾ ಅಭಿನಯದ ಯಾವ
ಹಿಂದಿ ಚಿತ್ರ ಕೂಡ ಗೆದ್ದಿಲ್ಲ.
ನಿಜಾ.. ''ಆನಿಮಲ್'' ಮತ್ತು ''ಛಾವಾ'' ಗೆದ್ದಿವೆ. ಆದರೆ.. ಗೆಲುವಲ್ಲಿ ರಶ್ಮಿಕಾ ಮಂದಣ್ಣಗೆ ಸಿಗಬೇಕಿದ್ದ ಪಾಲು ಸಿಗಲಿಲ್ಲ. ಈ ಹಿನ್ನೆಲೆ.. ಎಲ್ಲರ ಕಣ್ಣೀಗ ಇದೇ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ''ಥಮ್ಮ'' ಮೇಲೆ ಇದೆ. ''ಥಮ್ಮ'' ರಶ್ಮಿಕಾಗೆ ಬೇಕಿರುವ ಬಹುದೊಡ್ಡ ಗೆಲುವು ನೀಡುತ್ತೆ ಈ ಚಿತ್ರದಲ್ಲಿನ ರಶ್ಮಿಕಾ ಮಂದಣ್ಣ ಅವರ ಅಭಿನಯ ಎಲ್ಲರ ಗಮನ ಸೆಳೆಯುತ್ತೆ ಎನ್ನುವ ವಿಶ್ವಾಸ ಹಲವರಲ್ಲಿದೆ.

ಈ ನಂಬಿಕೆ ನಿಜವಾಗುತ್ತಾ ..? ಹುಸಿಯಾಗುತ್ತಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ ''ಥಮ್ಮ'' ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೆಟ್ ಪಡೆದು ಪಾಸಾಗಿದೆ. ಚಿತ್ರದ ದ್ವೀತಿಯಾರ್ಧದಲ್ಲಿರುವ ಲಿಪ್ ಲಾಕ್ ದೃಶ್ಯವನ್ನು ಕೇವಲ 5 ಸೆಕೆಂಡ್ ಮಾತ್ರ ಬಳಸುವಂತೆ ಸೆನ್ಸಾರ್ ಮಂಡಳಿ ಹೇಳಿದ್ದು ರಕ್ತ ಕುಡಿಯುವ ದೃಶ್ಯದ ಸೌಂಡ್ ಕಡಿಮೆ ಮಾಡುವಂತೆ ಸೂಚಿಸಿದೆ.
ಇನ್ನೂ ಚಿತ್ರದಲ್ಲಿ ಆಜಾದಿ ದೂಂಗಾ ಸಂಭಾಷಣೆಯನ್ನು ಅಯ್ಯಾಶಿ ಕರತಾ ಹೂ ಎಂದು ಬದಲಿಸುವಂತೆ ಕೂಡ ಸೆನ್ಸಾರ್ ಮಂಡಳಿ ಸೂಚನೆ ನೀಡಿದ್ದು ಎರಡು ಗಂಟೆ ಮೂವತ್ತು ನಿಮಿಷಗಳ ಅವಧಿಯನ್ನು ಈ ಚಿತ್ರ ಹೊಂದಿದೆ.
ಅಂದ್ಹಾಗೇ ''ಥಮ್ಮ'' ನಿರ್ಮಾಣ ಸಂಸ್ಥೆಯಾದ ಮ್ಯಾಡಾಕ್‌ನ ಹಾರರ್ ಯುನಿರ್ವಸಗಳಲ್ಲಿ ಒಂದು. ಈ ಹಿಂದೆ '' ಸ್ತ್ರೀ''.. ''ಸ್ತ್ರೀ-2''.. ''ಮುಂಜ್ಯಾ''.. ''ಭೇಡಿಯಾ''.. ಚಿತ್ರಕ್ಕೂ ಈ''ಥಮ್ಮ''ಗೂ ಸಂಬಂಧ ಇದೆ. ಈ ಹಿನ್ನೆಲೆ ಈ ಚಿತ್ರದಲ್ಲಿ ವರುಣ್ ಧವನ್.. ಶ್ರದ್ಧಾ ಕಪೂರ್ ಸೇರಿ ಹಲವರು ಅತಿಥಿ ಪಾತ್ರವನ್ನು ನಿರ್ವಹಿಸಿರುವ ಸಾಧ್ಯತೆ ಇದೆ.
ಇನ್ನು ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ "ಥಮ್ಮ'' ಇಲ್ಲಿಯವರೆಗೆ ಮ್ಯಾಡಾಕ್ ಸಂಸ್ಥೆ ನಿರ್ಮಾಣ ಮಾಡಿರುವ ಹಾರರ್ ಥ್ರಿಲ್ಲರ್ ಚಿತ್ರಗಳಲ್ಲಿಯೇ ಅತ್ಯಂತ ದುಬಾರಿ ಚಿತ್ರ. ಚಿತ್ರದ ಕಥೆ ಮತ್ತು ನಾಯಕ ಆಯುಷ್ಮಾನ್ ಖುರಾನ, ನಾಯಕಿ ರಶ್ಮಿಕಾ ಮಂದಣ್ಣ ಅವರನ್ನು ನಂಬಿ ಚಿತ್ರದ ನಿರ್ಮಾಪಕ ದಿನೇಶ್ ವಿಜ್ಜನ್ ಈ ಚಿತ್ರಕ್ಕೆ 125 ಕೋಟಿ ಬಂಡವಾಳ ಹೂಡಿದ್ದಾರೆ. ಪ್ರಚಾರಕ್ಕೆ ಇಲ್ಲಿಯವರೆಗೆ 20 ಕೋಟಿ ಹಣ ಸುರಿದಿದ್ದಾರೆ.

ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೆಟ್ ಪಡೆದಿರುವ ''ಥಮ್ಮ'' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, 7335 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಇನ್ನು ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣಗೆ ಆಂಧ್ರದಲ್ಲಿ ಭಾರೀ ಬೇಡಿಕೆ ಇದೆ. ಈ ಹಿನ್ನೆಲೆ ಈ ಚಿತ್ರವನ್ನು ಹಿಂದಿ ಜೊತೆಯಲ್ಲಿ ತೆಲುಗಿನಲ್ಲಿ ಕೂಡ ಚಿತ್ರತಂಡ ಬಿಡುಗಡೆ ಮಾಡುತ್ತಿದೆ.
ಬೆಂಗಳೂರಿನಲ್ಲಿ ಕೂಡ ಇಂದಿನಿಂದ ( ಅಕ್ಟೋಬರ್ 18 ) ಚಿತ್ರದ ಟಿಕೆಟ್‌ಗಳನ್ನು ಮಾರಲು ಚಿತ್ರಮಂದಿರದವರು ಶುರು ಮಾಡಿದ್ದು ಈಗಾಗಲೇ 25ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ''ಥಮ್ಮ''ಗೆ ಜಾಗ ನೀಡಲಾಗಿದೆ. ಒಂದೊಂದು ಮಲ್ಟಿಪ್ಲೆಕ್ಸ್‌ನಲ್ಲಿಯೂ ಐದರಿಂದ ಆರು ಪ್ರದರ್ಶನಗಳನ್ನು ಚಿತ್ರ ಕಾಣಲಿದೆ. ಗರುಡಾ ಮಾಲ್ ಮತ್ತು ಭಾರತೀಯ ಮಾಲ್‌ನಲ್ಲಿ ಈಗಾಗಲೇ ಟಿಕೆಟ್‌ಗಳು ವೇಗವಾಗಿ ಬಿಕರಿಯಾಗುತ್ತಿವೆ.
ಇನ್ನುಳಿದಂತೆ ಸದ್ಯ ''ಕಾಂತಾರ-ಚಾಪ್ಟರ್ 1'' ಅಲೆ ಇದೆ. ಈ ಅಲೆಯ ಎದುರು ರಶ್ಮಿಕಾ ಮಂದಣ್ಣ ಮತ್ತು ಆಯುಷ್ಮಾನ್ ಖುರಾನ ಅವರ ''ಥಮ್ಮ'' ನಿಲ್ಲುತ್ತಾ..? ''ಕಾಂತಾರ-ಚಾಪ್ಟರ್ 1''ಗೆ ಸ್ಪರ್ಧೆಯೊಡ್ಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











