ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಎಫ್‌ಐಆರ್, ಇಡಿ ಇಂದ ನೋಟಿಸ್

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಕುಣಿಕೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಕೊರಳಿಗೆ ಸ್ವಲ್ಪ-ಸ್ವಲ್ಪವಾಗಿ ಬಿಗಿಯಾಗುತ್ತಿರುವಂತೆ ತೋರುತ್ತಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ ಮೊದಲನೇಯದಾಗಿ ರಿಯಾ ಚಕ್ರವರ್ತಿ ವಿರುದ್ಧ ಪ್ರಕರಣ ದಾಖಲಿಸಿದೆ. ರಿಯಾ ಚಕ್ರವರ್ತಿಯೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು, ಇದೀಗ ಸಿಬಿಐ ರಿಯಾ ವಿರುದ್ಧವೇ ಎಫ್‌ಐಆರ್ ದಾಖಲಿಸಿದೆ.

ಮತ್ತೊಂದು ಕಡೆಯಿಂದ ಜಾರಿ ನಿರ್ದೇಶನಾಲಯ (ಇಡಿ) ಸಹ ರಿಯಾ ಗೆ ನೋಟಿಸ್ ಕಳುಹಿಸಿದ್ದು, ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಬಿಹಾರ ಪೊಲೀಸರ ದೂರು ಆಧರಿಸಿ ಎಫ್‌ಐಆರ್

ಬಿಹಾರ ಪೊಲೀಸರ ದೂರು ಆಧರಿಸಿ ಎಫ್‌ಐಆರ್

ಬಿಹಾರ ಪೊಲೀಸರ ಮನವಿ ಆಧರಿಸಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು. ಬಿಹಾರ ಪೊಲೀಸರ ದೂರನ್ನು ಆಧರಿಸಿಯೇ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬದವರ ವಿರುದ್ಧ ದೂರು ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಸಿಬಿಐನ ವಿಶೇಷ ತಂಡದಿಂದ ತನಿಖೆ

ಸಿಬಿಐನ ವಿಶೇಷ ತಂಡದಿಂದ ತನಿಖೆ

ವಿಜಯ್ ಮಲ್ಯ ಪ್ರಕರಣ, ಆಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ (ಎಸ್‌ಐಟಿ) ವೇ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನೂ ಸಹ ತನಿಖೆ ಮಾಡಲಿದೆ.

ಇಡಿ ಸಹ ಸಮನ್ಸ್ ನೀಡಿದೆ

ಇಡಿ ಸಹ ಸಮನ್ಸ್ ನೀಡಿದೆ

ಸುಶಾಂತ್ ಖಾತೆಯಿಂದ ಕೋಟ್ಯಂತರ ಮೊತ್ತದ ಹಣ ರಿಯಾ ಖಾತೆಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿ ಆಧರಿಸಿ ಪ್ರಕರಣದಲ್ಲಿ ಆಸಕ್ತಿ ತೋರಿರುವ ಜಾರಿ ನಿರ್ದೇಶನಾಲಯ ಸಹ ರಿಯಾ ಗೆ ನೊಟೀಸ್ ಜಾರಿ ಮಾಡಿದ್ದು, ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

ತನಿಖಾಧಿಕಾರಿಗೆ ಕ್ವಾರಂಟೈನ್

ತನಿಖಾಧಿಕಾರಿಗೆ ಕ್ವಾರಂಟೈನ್

ಸುಶಾಂತ್ ಪ್ರಕರಣದ ವಿಚಾರಣೆಗೆಂದು ಮುಂಬೈಗೆ ಬಂದ ಐಪಿಎಸ್ ವಿನಯ್ ತಿವಾರಿಯನ್ನು ಮುಂಬೈ ಮಹಾನಗರ ಪಾಲಿಕೆಯವರು ಹೋಂ ಕ್ವಾರಂಟೈನ್‌ಗೆ ಹಾಕಿದ್ದಾರೆ. ಇದನ್ನು ವಿನಯ್ತಿವಾರಿ ತೀವ್ರವಾಗಿ ಖಂಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನನ್ನು ಕ್ವಾರಂಟೈನ್‌ಗೆ ಹಾಕಲಾಗಿದೆ ಎಂದಿದ್ದಾರೆ.

More from Filmibeat

English summary
CBI filled FIR against Rhea Chakraborthy on Sushant Singh case. CBI took over the case for investigation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X