ಸುಶಾಂತ್ ಸಿಂಗ್ ಕೇಸ್: ಅಡುಗೆ ಕೆಲಸದವನಿಗೆ 11 ಪ್ರಶ್ನೆ, ಸಿಬಿಐಗೂ ಕಾಡಿದೆ ಆ ಅನುಮಾನ?
ಸುಪ್ರೀಂಕೋರ್ಟ್ ಆದೇಶದಂತೆ ಸಿಬಿಐ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಆರಂಭಿಸಿದೆ. ಈಗಾಗಲೇ ಮುಂಬೈ ತಲುಪಿರುವ ಸಿಬಿಐ ಅಧಿಕಾರಿಗಳು ಸುಶಾಂತ್ ಮನೆಯ ಅಡುಗೆ ಕೆಲಸದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
Recommended Video
ಸುಮಾರು ಮೂರು ಗಂಟೆಗಳ ಕಾಲ ಅಡುಗೆ ಭಟ್ಟ ನೀರಜ್ ವಿಚಾರಣೆ ಮಾಡಿರುವ ಸಿಬಿಐ ಹಲವು ಪ್ರಶ್ನೆಗಳನ್ನು ಕೇಳಿದೆ. ಸುಶಾಂತ್ ಪ್ರಕರಣದಲ್ಲಿ ಸಿಬಿಐಗೂ ಕೆಲವು ನಿರ್ದಿಷ್ಟ ಅನುಮಾನಗಳಿವೆ ಎನ್ನುವುದಕ್ಕೆ ಅವರು ಕೇಳಿದ್ದಾರೆ ಎನ್ನಲಾದ ಪ್ರಶ್ನೆಗಳೇ ಸಾಕ್ಷಿ. ಅಡುಗೆ ಕೆಲಸದವನ ಬಳಿ ಸಿಬಿಐ ಕೇಳಿದ ಪ್ರಶ್ನೆಗಳು ಯಾವುದು? ಮುಂದೆ ಓದಿ....

ಸಿಬಿಐ ಕೇಳಿರುವ ಪ್ರಮುಖ ಪ್ರಶ್ನೆಗಳು
- ಜೂನ್ 13 ರಂದು ಏನು ನಡೆಯಿತು?
- ರೂಂನಲ್ಲಿ ಯಾರೆಲ್ಲ ಇದ್ದರು?
- ಸುಶಾಂತ್ ಸಿಂಗ್ ರಜಪೂತ್ ಇತರ ಫ್ಲಾಟ್‌ಮೇಟ್‌ಗಳೊಂದಿಗೆ ಎಷ್ಟು ಸಮಯ ಇದ್ದರು?
- ಸುಶಾಂತ್ ಸಿಂಗ್ ರಜಪೂತ್ ಅವರ ಮನಸ್ಥಿತಿ ಹೇಗಿತ್ತು?
- ಆ ರಾತ್ರಿ ಸುಶಾಂತ್ ಸಿಂಗ್ ರಜಪೂತ್ ಊಟ ಮಾಡಿದ್ರಾ?
- ಸುಶಾಂತ್ ಎಷ್ಟೊತ್ತಿಗೆ ಮಲಗಲು ಹೋದರು?

ಮೊದಲು ಶವ ನೋಡಿದ್ದು ಯಾರು?
- ಜೂನ್ 14ರ ಬೆಳಿಗ್ಗೆ ಶವವನ್ನು ಯಾರು ನೋಡಿದ್ದು?
- ಶವವನ್ನು ಕೆಳಗೆ ಇಳಿಸಿದವರು ಯಾರು?
- ದೇಹವನ್ನು ಕೆಳಗೆ ಇಳಿಸಲೂ ಯಾರಾದರೂ ಸೂಚಿಸಿದರಾ?
- ಪೊಲೀಸ್ ಕಂಟ್ರೋಲ್ ರೂಂಗೆ ಯಾರು ಫೋನ್ ಮಾಡಿದ್ದು? ಯಾವಾಗ ಮಾಡಲಾಯಿತು?
- ಕಳೆದ ಆರು ತಿಂಗಳಲ್ಲಿ ಸುಶಾಂತ್ ಅವರ ಫ್ಲ್ಯಾಟ್‌ನಲ್ಲಿ ಯಾರೆಲ್ಲ ಉಳಿದಿದ್ದರು?

ಘಟನೆ ಮರುಸೃಷ್ಟಿ ಸಾಧ್ಯತೆ
ಸುಶಾಂತ್ ಸಾವಿನ ತನಿಖೆಗಾಗಿ ಸಿಬಿಐ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ (ಆಗಸ್ಟ್ 20) ಮುಂಬೈಗೆ ತಲುಪಿದೆ. ಜೂನ್ 14 ರಂದು ಏನಾಯಿತು ಎಂಬುದರ ಪ್ರಕಾರ ಎಸ್‌ಐಟಿ ಇಂದು (ಆಗಸ್ಟ್ 21) ಅಪರಾಧದ ಸ್ಥಳದಲ್ಲಿ ಮರುಸೃಷ್ಟಿಸಿರುವ ಸಾಧ್ಯತೆಯಿದೆ. ನಂತರ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಇದುವರೆಗೆ ನಡೆಸಿದ ತನಿಖೆಯ ವಿವರಗಳನ್ನು ಪಡೆಯಲಿದ್ದಾರೆ.

ಸಿಬಿಐಗೆ ಅನುಮಾನ?
- ಜೂನ್ 14ರ ಬೆಳಗ್ಗೆ ಸುಶಾಂತ್ ಸಿಂಗ್ ರಜಪೂತ್ ಜ್ಯೂಸ್ ಕುಡಿದಿರುವ ಗ್ಲಾಸ್ ಬಗ್ಗೆ ವರದಿಯಲ್ಲಿ ಏಕೆ ಉಲ್ಲೇಖಿಸಲಾಗಿಲ್ಲ?
- ಸಾವಿನ ಸಮಯವನ್ನು ವರದಿಯಲ್ಲಿ ಏಕೆ ಉಲ್ಲೇಖ ಮಾಡಿಲ್ಲ?
- ನೇಣು ಹಾಕಿಕೊಳ್ಳಲು ಯಾವ ವಸ್ತುವನ್ನು ಬಳಸಲಾಯಿತು ಎಂಬುದರ ಬಗ್ಗೆಯೂ ಉತ್ತರವಿಲ್ಲ.
ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉತ್ತರ ಸಿಗದ ಪ್ರಮುಖ ಮೂರು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಆ ಆಧಾರದ ಮೇಲೆ ತನಿಖೆ ಶುರು ಮಾಡಿದೆ ಎಂದು ಹೇಳಲಾಗಿದೆ.


Click it and Unblock the Notifications











