twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಪ್ರಾರಂಭಿಸಿದ ಸಿಬಿಐ

    |

    ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಪ್ರಾರಂಭಿಸಿದೆ. ಆಗಸ್ಟ್ 21ರಿಂದ ಸಿಬಿಐ ತನಿಖೆ ಪ್ರಾರಂಭವಾಗಿದ್ದು, ಮೊದಲ ದಿನ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ವರದಿಯನ್ನು ಮುಂಬೈ ಪೊಲೀಸರಿಂದ ಸಂಗ್ರಹಿಸಿದೆ.

    ಸುಶಾಂತ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ತನಿಖೆಗೆ ಸಮ್ಮತಿಸಿದ ಬೆನ್ನಲೇ ಅಧಿಕಾರಿಗಳ ವಿಶೇಷ ತಂಡ ಮುಂಬೈಗೆ ಆಗಮಿಸಿದೆ. ಸುಶಾಂತ್ ಸಿಂಗ್ ಮನೆಯ ಸಿಬ್ಬಂದಿಯನ್ನು ವಿಚಾರಣೆ ಮಾಡಿರುವ ಸಿಬಿಐ, ಬಳಿಕ ಪೊಲೀಸರನ್ನು ಭೇಟಿಯಾಗಿ ಮರಣೋತ್ತರ ವರದಿ ಸೇರಿದಂತೆ ಪ್ರಕರಣದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

    ಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ: ಅಕ್ಷಯ್, ಕಂಗನಾ ಸೇರಿದ್ದಂತೆ ಕಲಾವಿದರ ಪ್ರತಿಕ್ರಿಯೆ ಹೀಗಿದೆಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ: ಅಕ್ಷಯ್, ಕಂಗನಾ ಸೇರಿದ್ದಂತೆ ಕಲಾವಿದರ ಪ್ರತಿಕ್ರಿಯೆ ಹೀಗಿದೆ

    ಸಾಂತಾಕ್ರೂಜ್ ಪ್ರದೇಶದಲ್ಲಿರುವ ಐಎಎಫ್ ನ ಅತಿಥಿಗೃಹದಲ್ಲಿ ಅಧಿಕಾರಿಗಳ ತಂಡ ವಾಸ್ತವ್ಯ ಹೂಡಿದೆ. ಪ್ರಮುಖ ಸಾಕ್ಷಿಗಳ ಪೈಕಿ ಸುಶಾಂತ್ ಸಿಂಗ್ ಮನೆಯ ಬಾಣಸಿಗನನ್ನು ಅತಿಥಿಗೃಹಕ್ಕೆ ಕರೆಸಿಕೊಂಡಿರುವ ಅಧಿಕಾರಿಗಳು, ವಿಚಾರಣೆ ನಡೆಸಿದ್ದಾರೆ. ಇನ್ನೂ ಎರಡನೇ ತಂಡ ಬಾಂದ್ರಾ ಪೋಲೀಸ್ ಠಾಣೆ ಬಳಿಯ ಉಪ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿತು.

    CBI Starts Probe In Sushant Singh Rajput Death Case

    ಸಿಬಿಐನ ವಿಧಿವಿಜ್ಞಾನ ತಜ್ಞರು, ಸೆಂಟ್ರಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಸಿ ಎಫ್ ಎಸ್ ಎಲ್) ಸಹ ಇಂದು ಸುಶಾಂತ್ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ. 34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.

    English summary
    CBI starts probe in Sushant singh Rajput death case. CBI questions sushant singh's staff members.
    Friday, August 21, 2020, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X