For Quick Alerts
  ALLOW NOTIFICATIONS  
  For Daily Alerts

  ನಟ ವಿವೇಕ್ ಒಬೆರಾಯ್ ಮನೆ ಮೇಲೆ ಬೆಂಗಳೂರು ಪೊಲೀಸರು ದಾಳಿ

  |

  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರ ಮುಂಬೈ ನಿವಾಸದ ಮೇಲೆ ಬೆಂಗಳೂರು ಪೊಲೀಸರು ಗುರುವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ.

  ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆದಿತ್ಯ ಆಳ್ವಾ ಅವರನ್ನು ಹುಡುಕುತ್ತಿರುವ ಪೊಲೀಸರು, ವಿವೇಕ್ ಒಬೆರಾಯ್ ಮನೆಯಲ್ಲಿ ಅಡಗಿರಬಹುದು ಎಂಬ ಅನುಮಾನದ ಮೇಲೆ ದಾಳಿ ನಡೆಸಿ ಶೋಧ ಮಾಡಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ವಿವೇಕ್ ಒಬೆರಾಯ್ ಅವರ ಮನೆಯಲ್ಲಿ ಶೋಧ ಮಾಡಿದ ಸಿಸಿಬಿ ಪೊಲೀಸರು ನಂತರ ತೆರಳಿದರು ಎಂದು ವರದಿಯಾಗಿದೆ.

  'ಸಿನಿಮಾ ಕ್ಷೇತ್ರದಲ್ಲಿ ಶೇಕಡಾ 2-3ರಷ್ಟು ಡ್ರಗ್ಸ್ ದಂಧೆ ಇರಬಹುದು''ಸಿನಿಮಾ ಕ್ಷೇತ್ರದಲ್ಲಿ ಶೇಕಡಾ 2-3ರಷ್ಟು ಡ್ರಗ್ಸ್ ದಂಧೆ ಇರಬಹುದು'

  ಕರ್ನಾಟಕದ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವಾ ಅವರ ಮಗಳನ್ನು ವಿವೇಕ್ ಒಬೆರಾಯ್ ವಿವಾಹವಾಗಿದ್ದಾರೆ. ವಿವೇಕ್ ಒಬೆರಾಯ್ ಪತ್ನಿಯ ಸಹೋದರ ಆದಿತ್ಯ ಆಳ್ವಾ ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಬೇಕಾಗಿದ್ದಾರೆ.

  ಈ ಕುರಿತು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದು, ಆದಿತ್ಯ ಆಳ್ವಾ ಅವರು ಮುಂಬೈನಲ್ಲಿ ವಿವೇಕ್ ಒಬೆರಾಯ್ ನಿವಾಸದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ನ್ಯಾಯಾಲಯದ ಅನುಮತಿ ಪಡೆದು ದಾಳಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  ಎನ್‌ಡಿಪಿಎಸ್ ಕೋರ್ಟ್‌ ಮುಂದೆ ಮೂರು ಕೋರಿಕೆಯಿಟ್ಟ ನಟಿ ರಾಗಿಣಿಎನ್‌ಡಿಪಿಎಸ್ ಕೋರ್ಟ್‌ ಮುಂದೆ ಮೂರು ಕೋರಿಕೆಯಿಟ್ಟ ನಟಿ ರಾಗಿಣಿ

  ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದಾರೆ. ನಟಿ ಸಂಜನಾ, ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

  English summary
  Sandalwood Drug Case: CCB of Bengaluru raided actor Vivek Oberoi’s house in Mumbai to look for his brother-in-law aditya alva who is allegedly involved in a drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X