CCL 2025 ; ಪಂಜಾಬ್ ತಂಡವನ್ನು ಬೇಟೆಯಾಡಿದ ಬೆಂಗಾಲ್ ಟೈಗರ್ಸ್..!
ನಿನ್ನೆ ಚೆನ್ನೈ ವಿರುದ್ಧ ಮೊದಲ ಪಂದ್ಯದಲ್ಲಿ ರೋಚಕ ಗೆಲುವನ್ನು ಕಂಡ ಕಳೆದ ಬಾರಿಯ ಚಾಂಪಿಯನ್ ಬೆಂಗಾಲ್ ಟೈಗರ್ಸ್ ಇಂದು ಪಂಜಾಬ್ ವಿರುದ್ಧ ಕಣಕ್ಕಿಳಿದಿತ್ತು. ಬೆಂಗಾಲ್ ಟೈಗರ್ಸ್ ವಿರುದ್ದ ಟಾಸ್ ಗೆದ್ದ ಪಂಜಾಬ್ ಬ್ಯಾಟಿಂಗ್ ಆಯ್ದುಕೊಂಡಿತು.
ಆರಂಭದಿಂದಲೂ ಬೆಂಗಾಲ್ ಬೌಲರ್ಸ್‌ಗಳ ಬೆವರಿಳಿಸಿದ ಪಂಜಾಬ್ ಬ್ಯಾಟ್ಸಮನ್‌ಗಳು ಹತ್ತು ಓವರ್‌ನಲ್ಲಿ ಹನ್ನೊಂದು ಫೋರ್ ಮತ್ತು ಏಳು ಸಿಕ್ಸರ್‌ಗಳನ್ನು ಬಾರಿಸಿದರು. 05 ವಿಕೆಟ್ ಕಳೆದುಕೊಂಡು 111 ಸ್ಕೋರ್ ಗಳಿಸಿದರು. ರಾಹುಲ್ 26 ರನ್ ಗಳಿಸಿದರೆ ಪಂಜಾಬ್‌ನ ನಾಯಕ ಹಾರ್ಡಿ ಸಂಧು 40 ರನ್ ಗಳಿಸಿದರು.

ಪಂಜಾಬ್ ನೀಡಿದ 111 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಬೆಂಗಾಲ್ ಉತ್ತಮ ಆರಂಭವನ್ನು ಮಾಡಿತು. ಕೇವಲ ಎರಡು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ಕೊನೆಯ ಎರಡು ಎಸೆತದಲ್ಲಿ ರಾಹುಲ್ ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಸ್ಕೋರ್ ಲೆವಲ್ ಮಾಡುವಲ್ಲಿ ಯಶಸ್ವಿಯಾದರು. ಇನ್ನು ಬೆಂಗಾಲ್ ಪರ ಮೊದಲ ಮ್ಯಾಚ್‌ನಲ್ಲಿ ಆಕ್ರಮಣಕಾರಿ ಆಟವನ್ನು ಆಡಿದ ಜಾಮಿ 38 ಎಸೆತಗಳಲ್ಲಿ 65 ರನ್ ಗಳಿಸಿದರೆ ಬೆಂಗಾಲ್ ತಂಡದ ನಾಯಕ ಜಿಶ್ಶು ಸೇನ್‌ಗುಪ್ತಾ 22 ರನ್‌ಗಳನ್ನು ಹೊಡೆದು ಅಜೇಯರಾಗಿ ಉಳಿದರು.
ಮೊದಲ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದ ಪಂಜಾಬ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಮುಗ್ಗರಿಸಿತು. 5 ಓವರ್‌ಗಳಲ್ಲಿ 38ರನ್ ಮಾತ್ರ ಗಳಿಸಿ ತನ್ನ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಆದರೂ ಛಲ ಬಿಡದ ಕ್ಯಾಪ್ಟನ್ ಹಾರ್ಡಿ ಸಂಧು
ನಾಯಕನಾಗಿ ಜವಾಬ್ಧಾರಿಯುತ ಆಟವನ್ನು ಆಡಿದ್ದು 21 ಬಾಲ್‌ಗೆ 42ರನ್‌ಗಳನ್ನು ಗಳಿಸಿದರು. ಇವರನ್ನು ಹೊರತು ಪಡಿಸಿದರೆ ಪಂಜಾಬ್‌ನ ಬೇರೆ ಯಾರು ಕೂಡ ಬೆಂಗಾಲ್ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ. ಕೊನೆ ಕೊನೆಯಲ್ಲಿ ಬಂದ ಪಂಜಾಬ್ ತಂಡದ ಬೌಲರ್ ದಾಖೇಶ್ 12 ರನ್ ಪೇರಿಸಿದರು. ಬೆಂಗಾಲ್ ಟೈಗರ್ಸ್ ಪರ ಸತ್ಯದೀಪ್, ರತನ್ ದೀಪ್, ಮತ್ತು ರಾಹುಲ್ ತಲಾ 2 ವಿಕೆಟ್ ಕಬಳಿಸಿದರು. ಉದಯ್ 1 ವಿಕೆಟ್ ಪಡೆದರು.
ಮೊದಲ ಇನಿಂಗ್ಸ್‌ನಲ್ಲಿ 111 ರನ್ ಗಳಿಸಿದ್ದ ಪಂಜಾಬ್ ಎರಡನೇ ಇನಿಂಗ್ಸ್‌ನಲ್ಲಿ 82ರನ್‌ಗಳನ್ನು ಮಾತ್ರ ಗಳಿಸಿತು. 83ರನ್ ಗಳ ಗುರಿಯನ್ನು ಬೆನ್ನಟ್ಟಿದ ಬೆಂಗಾಲ್ ಕೇವಲ 2 ವಿಕೆಟ್ ಕಳೆದುಕೊಂಡು 84 ರನ್‌ಗಳ ಗುರಿಯನ್ನು ತಲುಪಿತು. ಈ ಮೂಲಕ ಸಿಸಿಎಲ್‌ನಲ್ಲಿನ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿತು. ಮೊದಲ ಇನಿಂಗ್ಸ್‌ನಲ್ಲಿ 65 ರನ್‌ಗಳನ್ನು ಗಳಿಸಿದ್ದ ಜಾಮಿ ಎರಡನೇ ಇನಿಂಗ್ಸ್‌ನಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದರೆ, ಇವರ ಜೊತೆ ಕ್ರೀಸ್‌ನಲ್ಲಿದ್ದ ಯುಸೂಫ್ 21 ರನ್ ಗಳಿಸಿದರು. ಈ ಬಾರಿ ಇನಿಂಗ್ಸ್ ಆರಂಭಿಸಿದ ರಾಹುಲ್ ಮಿಂಚಿನ ವೇಗದಲ್ಲಿ 22 ರನ್ ಗಳಿಸುವ ಮೂಲಕ ಬೆಂಗಾಲ್ ಟೈಗರ್ಸ್ ಗೆಲುವಿನ ಹಾದಿಯನ್ನು ಸುಗಮವಾಗಿಸಿದರು.


Click it and Unblock the Notifications











