CCL 2025 : ಮುಂಬೈ ಹೀರೋಸ್ ತಂಡವನ್ನು ಮಣಿಸಿದ ಭೋಜ್‌ಪುರಿ ದಬಾಂಗ್ಸ್...!

ಮುಂಬೈ ಹೀರೋಸ್ ಮತ್ತು ಭೋಜ್‌ಪುರಿ ದಬಾಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭೋಜಪುರಿ ದಬಾಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮುಂಬೈ ತಂಡವನ್ನು ಸಾಖೀಬ್ ಸಲೀಂ ಮುನ್ನಡೆಸಿದರೆ ಭೋಜಪುರಿ ತಂಡವನ್ನು ಮನೋಜ್ ತಿವಾರಿ ಮುನ್ನಡೆಸಿದರು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಮುಂಬೈ ಹೀರೋಸ್ ತಂಡ ಮೊದಲ ಐದು ಓವರ್‌ನಲ್ಲಿ ಅರವತ್ತು ರನ್ ಗಳಿಸಿತ್ತು. ತಂಡದ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಸಾಖೀಬ್ 17 ಎಸೆತದಲ್ಲಿ 35 ರನ್ ಗಳಿಸಿದರು. ಆದರೆ ಆ ನಂತರ ಭೋಜಪುರಿ ದಬಾಂಗ್ಸ್‌ನ ಬೌಲರ್‌ಗಳು ಸಂಪೂರ್ಣ ಪಂದ್ಯದ ದಿಕ್ಕನ್ನೇ ಬದಲಿಸಿದರು. ರಾಜೀವ್ ಔಟ್ ಆದ ನಂತರ ಆಡಲು ಬಂದಿದ್ದ ಶರದ್ ಖೇಲ್ಕೇರ್ 5 ರನ್‌ಗೆ ವಿಕೆಟ್ ಚೆಲ್ಲಿದರು.

CCL 2025 Bhojpuri Dabanggs Dominate Mumbai Heroes to Secure First Victor

ಆ ನಂತರ ಬಂದ ಸಿದ್ಧಾರ್ಥ್ ಮೊದಲನೇ ಬಾಲ್‌ನಲ್ಲಿ ಪೆಟ್ಟು ಮಾಡಿಕೊಂಡು ಮೈದಾನದಿಂದ ಹೊರ ನಡೆದರು. ಮುಂಬೈ ತಂಡದ ದುರಾದೃಷ್ಟಕ್ಕೆ 34 ರನ್ ಗಳಿಸಿದ್ದ ನಾಯಕ ಸಾಖೀಬ್ ಎಲ್ ಬಿ ಡಬ್ಲೂ ಬಲೆಗೆ ಬಿದ್ದರು. ಕ್ಯಾಪ್ಟನ್ ಔಟ್ ಆದ ನಂತರ ಬಂದ ನವದೀಪ್ ಕೂಡ ಬಂದಷ್ಟೇ ವೇಗವಾಗಿ ಪೆವಲಿಯನ್ ಸೇರಿದರು. ದರೆ ಈ ಸಮಯದಲ್ಲಿ ಗಾಯಗೊಂಡು ಪೆವಲಿಯನ್ ಸೇರಿದ್ದ ಸಿದ್ಧಾಂಥ್ ಮತ್ತೆ ಮೈದಾನಕ್ಕೆ ಮರಳಿದರು. ಮತ್ತೆ ಪಂದ್ಯವನ್ನು ಭೋಜ್‌ಪುರಿಯಿಂದ ಕಿತ್ತುಕೊಂಡರು. 3 ಫೋರ್ 3 ಸಿಕ್ಸರ್ ಚಚ್ಚಿದ ಸಿದ್ಧಾಂಥ್ ಕೇವಲ 13 ಎಸೆತಗಳಲ್ಲಿ 37 ರನ್ ಗಳಿಸಿದರು. ಇವರಿಗೆ ಶಬ್ಬೀರ್ ಸಾಥ್ ನೀಡಿದರು. 09 ಎಸೆತಗಳಲ್ಲಿ 19 ರನ್ ಬಾರಿಸಿದರು. ಅಂತಿಮವಾಗಿ ಮುಂಬೈ ಹೀರೋಸ್ 10 ಓವರ್‌ಗಳಲ್ಲಿ 125 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.

ಆ ನಂತರ ಬ್ಯಾಟಿಂಗ್‌ಗೆ ಇಳಿದ ಭೋಜ್‌ಪುರಿ ದಬಾಂಗ್ಸ್ ನ ಬ್ಯಾಟ್ಸಮನ್‌ಗಳು ಮುಂಬೈ ತಂಡದ ವಿರುದ್ಧ ಅಬ್ಬರಿಸಿ ಬೊಬ್ಬಿರಿದರು. ಅದರಲ್ಲಿಯೂ ಅಸ್ಗರ್ ಖಾನ್ ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿದ್ದು ಕೇವಲ 36 ಎಸೆತಗಳಲ್ಲಿ 96ರನ್ ಗಳಿಸಿದರು. ಭೋಜ್‌ಪುರಿ ತಂಡ ಹತ್ತು ಓವರ್‌ಗಳಲ್ಲಿ 150ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ತಂಡದ ಮೇಲೆ 25ರನ್ ಗಳ ಲೀಡ್ ಪಡೆಯಿತು.

ಆ ನಂತರ ಮತ್ತೆ ಬ್ಯಾಟಿಂಗ್‌ಗೆ ಇಳಿದ ಮುಂಬೈ ಹೀರೋಸ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡ 128 ರನ್ ಗಳಿಸಿತು. ಶಬ್ಬೀರ್ ಅಹ್ಲುವಾಲಿಯಾ 32 ಬಾಲ್‌ಗಳಲ್ಲಿ 82 ರನ್ ಗಳಿಸಿ ರನೌಟ್ ಆದರೆ ನಿಶಾಂಥ್ ದಹಿಯಾ 33 ರನ್ ಗಳಿಸಿ ಔಟ್ ಆದರು. ಆ ನಂತರ 104 ರನ್‌ಗಳ ಗುರಿಯನ್ನು ಬೆನ್ನತ್ತಿದ ಭೋಜ್‌ಪುರಿ ತಂಡ ಕೇವಲ ಆರು ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ತಂಡವನ್ನು ಕಾಡಿದ್ದ ಅಸ್ಗರ್ ಖಾನ್ ಎರಡನೇ ಇನಿಂಗ್ಸ್‌ನಲ್ಲಿ ಕೂಡ ಮುಂಬೈ ಪಾಲಿಗೆ ಮುಳ್ಳಾದರು. 19 ಎಸೆತಗಳಲ್ಲಿ 58 ರನ್ ಗಳಿಸಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

More from Filmibeat

Read more about: ccl 2025 filmibeat news cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X