CCL 2025 ; ಗೆಲ್ಲಬೇಕಿದ್ದ ಪಂದ್ಯವನ್ನು ಕೈ ಚೆಲ್ಲಿದ ಭೋಜ್‌ಪುರಿ ದಬಾಂಗ್ಸ್...!

ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಪಂಜಾಬ್ ದಿ ಶೇರ್ ಮತ್ತು ಭೋಜ್‌ಪುರಿ ದಬಾಂಗ್ಸ್ ನಡುವೆ ನಡೆಯಿತು. ಮನೋಜ್ ತಿವಾರಿ ನಾಯಕತ್ವದ ಭೋಜ್‌ಪುರಿ ದಬಾಂಗ್ಸ್ ತಂಡ ಟಾಸ್ ಸೋತು ಫೀಲ್ಡಿಂಗ್‌ಗೆ ಇಳಿಯಿತು. ಆದರೆ ಪಂಜಾಬ್‌ ಟಾಸ್ ಗೆದ್ದರೂ ಕೂಡ ಸದುಪಯೋಗ ಮಾಡಿಕೊಳ್ಳುವಲ್ಲಿ ವಿಫಲವಾದ ಪಂಜಾಬ್ ತಂಡ ಆರಂಭದಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.

ಆ ನಂತರ ಭೋಜ್‌ಪುರಿ ದಬಾಂಗ್ಸ್ ತಂಡದ ವಿರುದ್ದ ಪಂಜಾಬ್‌ನ ಆಟಗಾರರು ನಿಧಾನಗತಿಯ ಬ್ಯಾಟಿಂಗ್‌ ಮಾಡಿದರು. ಬೌಂಡರಿ,ಸಿಕ್ಸರ್‌ಗಳನ್ನು ಹೊಡೆಯುವ ಯಾವ ಪ್ರಯತ್ನವನ್ನು ಮಾಡದ ಪಂಜಾಬ್‌ನ ಪ್ಲೇಯರ್ಸ್‌ ಕೇವಲ ಒಂದೊಂದು ರನ್‌ಗಳನ್ನಷ್ಟೇ ಗಳಿಸಿದರು. ಮೊದಲ 7 ಓವರ್‌ನಲ್ಲಿ ಕೇವಲ 41 ರನ್‌ ಗಳಿಸಿದ್ದ ಪಂಜಾಬ್ ದಿ ಶೇರ್ ತಂಡಕ್ಕೆ ಕೊನೆ ಕ್ಷಣದಲ್ಲಿ ತಂಡದ ನಾಯಕ ಹಾರ್ಡಿ ಸಂಧು ಆಸರೆಯಾದರು. 18 ಎಸೆತಗಳಲ್ಲಿ 37 ರನ್ ಸಿಡಿಸಿದರು.

CCL 2025 PUNJAB DE SHER Beat BHOJPURI DABANGGS

ಹಾರ್ಡಿ ಸಂಧು ಅವರ ಈ ಆಕ್ರಮಣಕಾರಿ ಬ್ಯಾಟಿಂಗ್‌ನ ನೆರವಿನಿಂದ ಪಂಜಾಬ್ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 81 ರನ್‌ ಗಳಿಸಿತು.81 ರನ್‌ಗಳ ಗುರಿಯನ್ನು ಬೆನ್ನತ್ತಿದ ಭೋಜ್‌ಪುರಿ ದಬಾಂಗ್ಸ್ ತಂಡದ ಪರವಾಗಿ ಮೊದಲ ಇನಿಂಗ್ಸ್‌ನಲ್ಲಿ ಅನ್ಷುಮನ್ ಅಬ್ಬರಿಸಿದರು. ಕೇವಲ 20 ಎಸೆತಗಳಲ್ಲಿ 38 ರನ್‌ಗಳನ್ನು ಅನ್ಷುಮನ್ ಗಳಿಸಿದರು.

ಆದರೆ 7ನೇ ಓವರ್‌ನಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದ ಅನ್ಷುಮನ್ ಕ್ಲೀನ್ ಬೋಲ್ಡ್ ಆದರು. 8ನೇ ಓವರ್‌ನ ಮೊದಲ ಎಸೆತದಲ್ಲಿ ಆದಿತ್ಯ ಓಜಾ 29 [ 19 ] ರನೌಟ್ ಆಗಿ ಪೆವಿಲಿಯನ್ ಸೇರಿದರು. ಆದರು ಪಂಜಾಬ್ ನೀಡಿದ್ದ 81 ರನ್‌ಗಳ ಗುರಿಯನ್ನು 8ನೇ ಓವರ್‌ನಲ್ಲಿಯೇ ತಲುಪಿದ ಭೋಜ್‌ಪುರಿ ದಬಾಂಗ್ಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಭೋಜ್‌ಪುರಿ ದಬಾಂಗ್ಸ್ ತಂಡ 05 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ಈ ಮೂಲಕ 23 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆಯಿತು.

ಮೊದಲ ಇನಿಂಗ್ಸ್‌ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಪಂಜಾಬ್ ದಿ ಶೇರ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಮೊದಲ ಐದು ಓವರ್‌ಗಳಲ್ಲಿ 50 ರನ್ ಗಳಿಸಿತು. ಉತ್ತಮ ಫಾರ್ಮ್‌ನಲ್ಲಿದ್ದ ತಂಡದ ಕ್ಯಾಪ್ಟನ್ ಹಾರ್ಡಿ ಸಂಧು ಅವರ ಜೊತೆ ಮಯೂರ್ ಮತ್ತು ನಿಂಜಾ ಅವರು ಬೇಗ ವಿಕೆಟ್ ಒಪ್ಪಿಸಿದರು. ಆ ನಂತರ ಮೊದಲ ಐದು ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಂಜಾಬ್ ತಂಡಕ್ಕೆ ದಕ್ಷ್ ಸಿಂಗ್ ಆಸರೆಯಾದರು. ಕೇವಲ 24ಎಸೆತಗಳಲ್ಲಿ 8 ಫೋರ್ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 73 ರನ್ ಗಳಿಸಿದ ದಕ್ಷ್ ಸಿಂಗ್ ತಂಡದ ಮೊತ್ತವನ್ನು 125ಕ್ಕೆ ಹಿಗ್ಗಿಸಿದರು. ಈ ಮೂಲಕ 102 ರನ್‌ಗಳ ಗುರಿಯನ್ನು ಭೋಜ್‌ಪುರಿ ದಬಾಂಗ್ಸ್‌ಗೆ ಪಂಜಾಬ್ ತಂಡ ನೀಡಿತು.

ಪಂಜಾಬ್ ನೀಡಿದ 102 ರನ್‌ಗಳ ಗುರಿಯನ್ನು ಬೆನ್ನತ್ತಿದ ಭೋಜ್‌ಪುರಿ ದಬಾಂಗ್ಸ್ ತಂಡ ಸುಯೂಶ್ ರೈ ಮೊದಲ ಓವರ್‌ನಲ್ಲಿ ಆಘಾತ ನೀಡಿದರು. ನಾಲ್ಕನೇ ಎಸೆತದಲ್ಲಿ ಉದಯ್ ತಿವಾರಿ ಅವರನ್ನು ಔಟ್ ಮಾಡಿದರು. ಇನ್ನು ಭೋಜ್‌ಪುರಿ ತಂಡದ ಪರ ಅತ್ಯುತ್ತಮವಾಗಿ ಆಡುತ್ತಿದ್ದ ಅಸ್ಗರ್ ಖಾನ್, ತಂಡದ ಮೊತ್ತ 57 ರನ್‌ಗಳಾದಾಗ ವಿಕೆಟ್ ಒಪ್ಪಿಸಿದರು. ಸುಯೂಶ್ ರೈ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು.

ಆ ನಂತರ ಒತ್ತಡಕ್ಕೆ ಸಿಲುಕಿದ ಭೋಜ್‌ಪುರಿ ದಬಾಂಗ್ಸ್ ತಂಡ ಒಂದಾದ ಮೇಲೊಂದು ಎರಡು ವಿಕೆಟ್‌ ಕಳೆದುಕೊಂಡಿತು. ಆದಿತ್ಯ ಓಜಾ ನಾಲ್ಕು ರನ್‌ಗೆ ಔಟಾದರೆ ತಂಡದ ನಾಯಕ ಮನೋಜ್ ತಿವಾರಿ 15 ರನ್‌ ಗಳಿಸಿ ಪೆವಿಲಿಯನ್ ಸೇರಿದರು. ಆ ನಂತರ ಮೈ ಕೊಡವಿ ಎದ್ದು ನಿಲ್ಲುವ ಪ್ರಯತ್ನವನ್ನು ಮಾಡದ ಭೋಜ್‌ಪುರಿ ದಬಾಂಗ್ಸ್ ತಂಡ ಪಂಜಾಬ್‌ ದಿ ಶೇರ್ ಮುಂದೆ ಶರಣಾಯಿತು. ಅಂತಿಮವಾಗಿ 14 ರನ್‌ಗಳಿಂದ ಸೋಲನ್ನು ಕಂಡಿತು. ಗೆಲ್ಲಬೇಕಿದ್ದ ಪಂದ್ಯವನ್ನು ಕೈ ಚೆಲ್ಲಿತು.

More from Filmibeat

Read more about: ccl 2025 cricket filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X