For Quick Alerts
  ALLOW NOTIFICATIONS  
  For Daily Alerts

  ದಿಗ್ಗಜ ನಟ ದಿಲೀಪ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ ಸಿನಿತಾರೆಯರು

  |

  ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಬುಧವಾರ (ಜುಲೈ 7) ಬೆಳಗ್ಗೆ ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ದಿಲೀಪ್ ಕುಮಾರ್ ಜೂನ್ 29ರಂದು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

  ಹಿಂದಿ ಚಿತ್ರರಂಗದಲ್ಲಿ 'ದುರಂತ ನಾಯಕ' ಎಂದೇ ಖ್ಯಾತಿ ಗಳಿಸಿಕೊಂಡಿರುವ ದಿಲೀಪ್ ಕುಮಾರ್‌ಗೆ 98 ವರ್ಷ ವಯಸ್ಸಾಗಿತ್ತು. ಇದೀಗ, ದಿಗ್ಗಜ ನಟನ ಅಗಲಿಕೆಗೆ ಭಾರತೀಯ ಚಿತ್ರರಂಗದ ಪ್ರಮುಖ ಕಲಾವಿದರು ಕಂಬನಿ ಮಿಡಿದಿದ್ದಾರೆ. ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗದ ಪ್ರಮುಖರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ....

  Breaking: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನBreaking: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನ

  ಅವರೊಂದು ಸಂಸ್ಥೆ, ಸಮಯಮೀರಿದ ನಟ

  ಅವರೊಂದು ಸಂಸ್ಥೆ, ಸಮಯಮೀರಿದ ನಟ

  'ದಿಗ್ಗಜ ನಟನೊಂದಿಗೆ ವೈಯಕ್ತಿಕವಾಗಿ, ವೇದಿಕೆಗಳಲ್ಲಿ ಕಳೆದ ಕ್ಷಣಗಳು ನೆನಪಿನಲ್ಲಿದೆ. ಅವರೊಂದು ಸಂಸ್ಥೆ, ಸಮಯಮೀರಿದ ನಟ. ಅವರ ಸಾವಿನ ಸುದ್ದಿ ಹೃದಯ ಛಿದ್ರಗೊಳಿಸಿದೆ'' ಎಂದು ನಟ ಅಜಯ್ ದೇವಗನ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  ನಮಗೆ ಅವರೇ ಹೀರೋ

  ನಮಗೆ ಅವರೇ ಹೀರೋ

  ''ಜಗತ್ತಿಗೆ ಅನೇಕರು ಹೀರೋಗಳು ಆಗಬಹುದು. ಆದರೆ, ನಮಗೆ ಅವರೇ ಹೀರೋ. ದಿಲೀಪ್ ಕುಮಾರ್ ಅವರ ಭಾರತೀಯ ಸಿನಿಮಾದ ಸಂಪೂರ್ಣ ಯುಗವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಅವರ ಕುಟುಂಬಕ್ಕೆ ಈ ನೋವು ಭರಿಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  'ದುರಂತ ನಾಯಕ' ದಿಲೀಪ್ ಕುಮಾರ್ ಜೀವನದಿಂದ ಮಧುಬಾಲಾ ದೂರವಾಗಿದ್ದೇಕೆ?'ದುರಂತ ನಾಯಕ' ದಿಲೀಪ್ ಕುಮಾರ್ ಜೀವನದಿಂದ ಮಧುಬಾಲಾ ದೂರವಾಗಿದ್ದೇಕೆ?

  ಸಾಂಸ್ಕೃತಿಕ ಜಗತ್ತಿಗೆ ನಷ್ಟ

  ಸಾಂಸ್ಕೃತಿಕ ಜಗತ್ತಿಗೆ ನಷ್ಟ

  ''ದಿಲೀಪ್ ಕುಮಾರ್ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ನಷ್ಟವಾಗಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ'' ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat
  ಲೆಜೆಂಡ್‌ಗಳು ಶಾಶ್ವತವಾಗಿ ಇರ್ತಾರೆ

  ಲೆಜೆಂಡ್‌ಗಳು ಶಾಶ್ವತವಾಗಿ ಇರ್ತಾರೆ

  ''ಸಾರ್ವಕಾಲಿಕ ಶ್ರೇಷ್ಠ ನಟ, ಅದ್ಭುತ ವಾಗ್ಮಿ ಮತ್ತು ಸರಳತೆಯ ಸಾಮ್ರಾಟ್ ಎಂದು ಜಗತ್ತು ದಿಲೀಪ್ ಕುಮಾರ್‌ರನ್ನು ಶ್ಲಾಘಿಸಿತ್ತು. ಅನೇಕ ತಲೆಮಾರಿಗೆ ಅವರು ಸ್ಫೂರ್ತಿಯಾಗಿ ಉಳಿಯಲಿದ್ದಾರೆ. ಲೆಜೆಂಡ್‌ಗಳು ಶಾಶ್ವತವಾಗಿ ಇರ್ತಾರೆ'' ಎಂದು ಕಿಚ್ಚ ಸುದೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ.

  English summary
  Indian celebrities express condolence to veteran bollywood actor Dilip Kumar death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X