ಶ್ರೀದೇವಿ ಮಗಳ 'ದಡಕ್' ಟ್ರೈಲರ್ ನೋಡಿದ ಬಿಟೌನ್ ಫುಲ್ ಖುಷ್
ಬಾಲಿವುಡ್ ನ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಮತ್ತು ಬಾಲಿವುಡ್ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಶಾನ್ ಮತ್ತು ಜಾಹ್ನವಿ ಕಪೂರ್ ನಾಯಕ, ನಾಯಕಿಯಾಗಿದ್ದು, ಟ್ರೈಲರ್ ನಲ್ಲಿ ಈ ಇಬ್ಬರ ಕೆಮಿಸ್ಟ್ರಿ ತೆರೆಮೇಲೆ ಸಖತ್ ಕಲರ್ ಫುಲ್ ಆಗಿ ಬಂದಿದೆ. ಹೀಗಾಗಿ, ಈ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.
ಯುವ ನಟಿಯ ಬಾಲಿವುಡ್ ಎಂಟ್ರಿಗೆ ಸಿನಿತಾರೆಯರು ಫುಲ್ ಖುಷ್ ಆಗಿದ್ದು, ಟ್ರೈಲರ್ ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ವರುಣ್ ಧವನ್, ಆಲಿಯಾ ಭಟ್, ಸೋನಂ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...
ಆಲಿಯಾ ಭಟ್
''ದಡಕ್ ಟ್ರೈಲರ್ ನಲ್ಲಿ ಮಿಂಚಿ, ಮ್ಯಾಜಿಕ್ ಮಾಡಿರುವ ಜಾಹ್ನವಿ ಕಪೂರ್ ಮತ್ತು ಇಶಾನ್ ಅವರನ್ನ ಸ್ವಾಗತಿಸಿ. ನನ್ನ ಸ್ನೇಹಿತ ಶಶಾಂಕ್ ಕೈತನ್, ನೀವು ಅತ್ಯುತ್ತಮ ಎನಿಸಿಕೊಂಡಿದ್ದೀರಿ. ನಾನು ತುಂಬಾ ಉತ್ಸುಕನಾಗಿದ್ದೇನೆ. ಮತ್ತು ನಿಮ್ಮ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ'' - ಆಲಿಯಾ ಭಟ್
ವರುಣ್ ಧವನ್
''ಶಶಾಂಕ್ ಕೈತನ್ ನಿರ್ದೇಶನದ 'ದಡಕ್' ಟ್ರೈಲರ್ ಅದ್ಭುತವಾಗಿದೆ. ಜಾಹ್ನವಿ ಕಪೂರ್ ಮತ್ತು ಇಶಾನ್ ಇಬ್ಬರು ತೆರೆಮೇಲೆ ಮಿಂಚಿದ್ದಾರೆ. ನಿಮ್ಮ ಜರ್ನಿ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ಇದು ನಿಮ್ಮ ಬೆಸ್ಟ್ ಸಿನಿಮಾ. ಕರಣ್ ಜೋಹರ್ ಅವರ ಹೃದಯದಿಂದ ಸಿನಿಮಾ ಮಾಡಿದ್ದಾರೆ ಎನ್ನುವುದಕ್ಕೆ ದಡಕ್ ಟ್ರೈಲರ್ ಸಾಕ್ಷಿ'' - ವರುಣ್ ಧವನ್
ಅನಿಲ್ ಕಪೂರ್
''ಬಾಲಿವುಡ್ ನ ಹೊಸ ತಾರೆಯರು ಬಂದಿದ್ದಾರೆ. ಈ ಟ್ರೈಲರ್ ನಲ್ಲಿ ನೀವು ಜಾಹ್ನವಿ ಕಪೂರ್ ಮತ್ತು ಇಶಾನ್ ನೋಡಿದ್ರೆ, ಇವರಿಬ್ಬರು ಹೊಸಬರು ಎಂದು ಗೊತ್ತೇ ಆಗಲ್ಲ. ಅವರ ಕಥೆಯನ್ನ ತಿಳಿಯಲು ನಾನು ಕಾಯುತ್ತಿದ್ದೇನೆ'' - ಅನಿಲ್ ಕಪೂರ್
ಶ್ರದ್ಧಾ ಕಪೂರ್
''ದಡಕ್ ಟ್ರೈಲರ್ ನೋಡಲು ತುಂಬಾ ತುಂಬಾ ಚೆನ್ನಾಗಿದೆ. ಜಾಹ್ನವಿ ಮತ್ತು ಇಶಾನ್ ನೋಡಲು ಕಾತುರವಾಗಿದ್ದೇನೆ. ಧರ್ಮ ಮೂವಿರ್ಸ ಬ್ಯಾನರ್ ಮತ್ತು ನಿರ್ದೇಶಕ ಶಶಾಂಕ್ ಕೈತನ್ ನಿಮ್ಮ ಕೆಲಸ ಬೆಸ್ಟ್. ಇಡೀ ಚಿತ್ರತಂಡಕ್ಕೆ ಶುಭವಾಗಲಿದೆ'' - ಶ್ರದ್ಧಾ ಕಪೂರ್

'ಸೈರಾಟ್' ರೀಮೇಕ್
ಮರಾಠಿಯ 'ಸೈರಾಟ್' ಚಿತ್ರದ ಹಿಂದಿ ರಿಮೇಕ್ ಆಗಿರುವ 'ದಡಕ್' ಚಿತ್ರವನ್ನಶಶಾಂಕ್ ಕೈತನ್ ನಿರ್ದೇಶನ ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣ ಮಾಡಿದ್ದು, ಜುಲೈ 20 ರಂದು ಅದ್ಧೂರಿಯಾಗಿ ಈ ದಡಕ್ ಬಿಡುಗಡೆಯಾಗಲಿದೆ.


Click it and Unblock the Notifications











