Just In
Don't Miss!
- Automobiles
ಕಾರಿನ ದೀರ್ಘ ಬಾಳಿಕೆಗೆ ಕೆಲವು ಸುಲಭ ವಿಧಾನಗಳಿವು
- News
ಸಾಂಸ್ಕೃತಿಕ ನಗರಿಯಲ್ಲಿ ಉದ್ಘಾಟನೆಗೊಂಡ ದೇಶದ ಮೊದಲ ಶ್ರೀಗಂಧದ ಮ್ಯೂಸಿಯಂ
- Sports
ಐಎಸ್ಎಲ್: ಬೆಂಗಳೂರಿಗೆ ಜಯ ನೀಡದೆ ಸ್ಫೂರ್ತಿ ಮೆರೆದ ಒಡಿಶಾ
- Education
UPSC Recruitment 2021: 249 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ನ್ಯೂಮೋನಿಯಾ: ಶ್ವಾಸಕೋಶದ ಸೋಂಕು ಇದ್ದಾಗ ಏನು ತಿನ್ನಬೇಕು, ಏನು ತಿನ್ನಬಾರದು?
- Finance
ಬಜೆಟ್ 2021: ವಿತ್ತೀಯ ಕೊರತೆ ಜಿಡಿಪಿಯ 5ರಿಂದ 5.5 ಪರ್ಸೆಂಟ್ ಸಾಧ್ಯತೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಣ್ಣಾಗಿ ಬದಲಾದ ಫ್ಯಾಷನ್ ಡಿಸೈನರ್ ಗೆ ಸೆಲೆಬ್ರಿಟಿಗಳಿಂದ ಪ್ರೀತಿ ಪೂರ್ವಕ ಮಾತುಗಳು
ಬಾಲಿವುಡ್ ಸಿನಿಮಾ ಮತ್ತು ಸ್ಟಾರ್ ಕಲಾವಿದರಿಗೆ ಫ್ಯಾಷನ್ ಡಿಸೈನರ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸ್ವಪ್ನಿಲ್ ಶಿಂದೆ ಈಗ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಇಷ್ಟು ದಿನ ಗಂಡಾಗಿದ್ದ ಸ್ವಪ್ನಿಲ್ ಈಗ ಹೆಣ್ಣಾಗಿ ಬದಲಾಗಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ಹೆಣ್ಣಾಗಿ ಬದಲಾಗುವ ಜೊತೆಗೆ ತಮ್ಮ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದಾರೆ. ವರ್ಷದ ಆರಂಭದಲ್ಲಿ ಶಾಕಿಂಗ್ ಸುದ್ದಿ ಮೂಲಕ ಸ್ವಪ್ನಿಲ್ ದರ್ಶನ ನೀಡಿದ್ದಾರೆ. ಅಂದಹಾಗೆ ಸ್ವಪ್ನಿಲ್ ಶಿಂದೆ ಇನ್ನು ಮುಂದೆ ಸೈಶಾ ಶಿಂದೆ ಹೆಸರಿನಲ್ಲಿ ಕರೆಸಿಕೊಳ್ಳಲಿದ್ದಾರೆ. ಸೈಶಾ ಹೆಣ್ಣಾಗಿ ಬದಲಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಸೈಶಾ ಶಿಂದೆಗೆ ಬಾಲಿವುಡ್ ಕಲಾವಿದರಿಂದ ಪ್ರೀತಿ ಪೂರ್ವಕ ಮಾತುಗಳು ಹರಿದು ಬಂದಿದೆ.

ಸೈಶಾ ಶಿಂದೆ ಪೋಸ್ಟ್
ಲಿಂಗ ಪರಿವರ್ತನೆ ಬಗ್ಗೆ ದೀರ್ಘವಾದ ಪೋಸ್ಟ್ ಹಾಕುವ ಜೊತೆಗೆ ಸೈಶಾ ಹೆಸರಿನ ಅರ್ಥವನ್ನು ವಿವರಿಸಿದ್ದಾರೆ. ಎಂದರೆ ಅರ್ಥಪೂರ್ಣ ಜೀವನ ಎಂದು ಹೇಳಿದ್ದಾರೆ. ನನ್ನ ಜೀವನವನ್ನು ಅರ್ಥಪೂರ್ಣವಾಗಿಸಲು ನಾನು ಯೋಜಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಸುಂದರ ಫೋಟೋವನ್ನು ಹಂಚಿಕೊಂಡು ಕೊನೆಗೂ ನನ್ನ ಇನ್ಸ್ಟಾಗ್ರಾಮ್ ಫೋಟೋವನ್ನು ಬದಲಾಯಿಸಿದೆ ಎಂದಿದ್ದಾರೆ.

ಸೆಲೆಬ್ರಟಿಗಳಿಂದ ಹರಿದುಬಂತು ಪ್ರೀತಿಯ ಮಾತುಗಳು
ಶಿಂದೆ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಬಾಲಿವುಡ್ ಸೆಲೆಬ್ರಿಟಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸನ್ನಿ ಲಿನಿಯೋನ್, ಅದಿತಿ ರಾವ್ ಹೈದರಿ, ಕನ್ನಡದ ನಟಿ ಶ್ರೀನಿಧಿ ಶೆಟ್ಟಿ, ನಟಿ ಶ್ರುತಿ ಹಾಸನ್ ಸೇರಿದಂತೆ ಅನೇಕರು ಹಾರ್ಟ್ ಇಮೋಜಿ ಹಾಕಿ ಹೊಸ ಶಿಂದೆಯನ್ನು ಸ್ವಾಗತಿಸಿದ್ದಾರೆ. ಜೊತೆಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ.
ಖಾಸಗಿತನಕ್ಕೆ ಧಕ್ಕೆ: ಮಾಧ್ಯಮಗಳ ಮೇಲೆ ಅನುಷ್ಕಾ ಶರ್ಮಾ ಕಿಡಿ

ಸನ್ನಿ ಲಿಯೋನ್ ಹೇಳಿದ್ದೇನು?
ನಟಿ ಸನ್ನಿ ಕಾಮೆಂಟ್ ಮಾಡಿ, 'ನಾನು ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ. ನೀವು ತುಂಬಾ ಒಳ್ಳೆಯವರು. ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಾಗುತ್ತೆ. ನೀವು ನೀವಾಗಿ ಇರಬೇಕೆಂದು ಬಯಸುತ್ತೇನೆ. ಅಭಿನಂದನೆಗಳು ಸಹೋದರಿ' ಎಂದಿದ್ದಾರೆ.

ಜೊತೆಗೆ ಲಿಂಗ ಪರಿವರ್ತನೆ ಬಗ್ಗೆ ಶಿಂದೆ ಪೋಸ್ಟ್
'ನಾನು ಬೆರಯವರಿಗಿಂತ ಭಿನ್ನವಾಗಿದ್ದೇನೆ ಎಂದು ಶಾಲೆ ಮತ್ತು ಕಾಲೇಜಿನಲ್ಲಿ ಹುಡುಗರು ನನಗೆ ಹಿಂಸೆ ಕೊಡುತ್ತಿದ್ದರು. ಆದರೆ ನನ್ನೊಳಗಿನ ನೋವು ಆ ಹಿಂಸೆಗಿಂತಲೂ ಭಯಾನಕವಾಗಿತ್ತು. ನಾನು ನಾನೇ ಅಲ್ಲದೇ ಒಂದು ವಾಸ್ತವದಲ್ಲಿ ಉಸಿರು ಕಟ್ಟಿದವರಂತೆ ಜೀವಿಸುತ್ತಿದೆ. ಸಮಾಜದ ನಿರೀಕ್ಷೆ ಮತ್ತು ನಿಯಮಗಳ ಕಾರಣಕ್ಕೆ ಅದನ್ನು ನಾನು ನಿಭಾಯಿಸಲೇ ಬೇಕಿತ್ತು' ಎಂದು ಬರೆದುಕೊಂಡಿದ್ದಾರೆ.

ಗೇ ಅಲ್ಲ, ಲಿಂಗ ಪರಿವರ್ತಿತ ಮಹಿಳೆ ಎಂದ ಶಿಂದೆ
ಇನ್ನು'ನ್ಯಾಷನಲ್ ಇನ್ಸುಟ್ಯೂಟ್ ಆಫ್ ಫ್ಯಾಷನ್ ಅಂಡ್ ಟೆಕ್ನಾಲಜಿಯಲ್ಲಿ ಓದುತ್ತಿದ್ದಾಗ ನನಗೆ 20 ವರ್ಷ. ನನ್ನ ಸತ್ಯವನ್ನು ಒಪ್ಪಿಕೊಳ್ಳಲು ನಾನು ಧೈರ್ಯ ತೋರಿದೆ. ನಾನು ಗೇ ಇರಬಹುದೆಂದು ಭಾವಿಸಿ ಪುರಷರ ಬಗ್ಗೆ ಹೊಂದಿದ್ದೇನೆ ಎನಿಸಿತು. ಆದರೆ ಈಗ ನಾನು ಸಂಪೂರ್ಣವಾಗಿ ನನ್ನನ್ನು ಒಪ್ಪಿಕೊಂಡೆ. ನಾನು ಗೇ ಅಲ್ಲ. ನಾನು ಲಿಂಗ ಪರಿವರ್ತಿತ ಮಹಿಳೆ' ಎಂದು ಸೈಶಾ ಶಿಂದೆ ಬರೆದುಕೊಂಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳಿಗೆ ಫ್ಯಾಷನ್ ಡಿಸೈನರ್ ಆಗಿರುವ ಶಿಂದೆ
ಸೈಶಾ ಶಿಂದೆ ಬಾಲಿವುಡ್ ನ ಸ್ಟಾರ್ ಕಲಾವಿದರಾದ ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಮಾಧುರಿ ದೀಕ್ಷಿತ್, ಸನ್ನಿ ಲಿಯೋನ್, ತಾಪ್ಸಿ ಪನ್ನು ಸೇರಿದಂತೆ ಅನೇಕ ಕಲಾವಿದರಿಗೆ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಉತ್ತಮ ಸ್ನೇಹ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.