ಸೆಲೆಬ್ರಿಟಿ ವಿಮರ್ಶೆ: ಹೃದಯ ಕದ್ದುಬಿಟ್ಟ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

By Harshitha

ಅಂತೂ ಇಂತೂ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಜಾಹ್ನವಿ ಕಪೂರ್ ಬಾಲಿವುಡ್ ಬೆಳ್ಳಿತೆರೆ ಮೇಲೆ ಮಿನುಗಿದ್ದಾರೆ. ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಚಿತ್ರವನ್ನ ಸೆಲೆಬ್ರಿಟಿಗಳು ಕಣ್ತುಂಬಿಕೊಂಡಿದ್ದಾರೆ.

ಹೌದು, ಕರಣ್ ಜೋಹರ್ ನಿರ್ಮಾಣದ ಶಶಾಂಕ್ ಕೈತಾನ್ ನಿರ್ದೇಶನದ 'ಧಡಕ್' ಸಿನಿಮಾ ನಾಳೆ (ಶುಕ್ರವಾರ, ಜುಲೈ 20) ಭಾರತದಾದ್ಯಂತ ಬಿಡುಗಡೆ ಆಗಲಿದೆ. ಆದ್ರೆ, ಅದಕ್ಕೂ ಮುನ್ನವೇ ನಿನ್ನೆ (ಬುಧವಾರ, ಜುಲೈ 18) ಮುಂಬೈನಲ್ಲಿ ಸೆಲೆಬ್ರಿಟಿಗಳಿಗಾಗಿ ಸ್ಪೆಷಲ್ ಸ್ಕ್ರೀನಿಂಗ್ ಮಾಡಲಾಗಿತ್ತು.

ಹೇಳಿ ಕೇಳಿ, 'ಧಡಕ್' ಮರಾಠಿಯ ಸೂಪರ್ ಹಿಟ್ 'ಸೈರಾಟ್' ಚಿತ್ರದ ರೀಮೇಕ್. ಹೀಗಾಗಿ, 'ಸೈರಾಟ್' ಚಿತ್ರವನ್ನ ನೋಡಿದ್ದ ತಾರೆಯರಿಗೆ 'ಧಡಕ್' ಸಿನಿಮಾ ಹೇಗನಿಸಿತು.? ಇದಕ್ಕೆ ಉತ್ತರ ಇಲ್ಲಿದೆ..

'ಧಡಕ್' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಅನಿಲ್ ಕಪೂರ್, ವಿಶಾಲ್ ದದ್ಲಾನಿ, ಮಾಧುರಿ ದೀಕ್ಷಿತ್, ರೇಖಾ, ಶಾಹಿದ್ ಕಪೂರ್ ಸೇರಿದಂತೆ ಬಾಲಿವುಡ್ ದಿಗ್ಗಜರು ಭಾಗವಹಿಸಿದ್ದರು. 'ಧಡಕ್' ಸಿನಿಮಾ ನೋಡಿದ್ಮೇಲೆ, ತಮ್ಮ ಅನಿಸಿಕೆಯನ್ನ ಟ್ವಿಟ್ಟರ್ ನಲ್ಲಿ ಸೆಲೆಬ್ರಿಟಿಗಳು ವ್ಯಕ್ತಪಡಿಸಿದ್ದಾರೆ. ಅಂತಹ ಟ್ವೀಟ್ ಗಳ ಕಲೆಕ್ಷನ್ ಇಲ್ಲಿದೆ. ನೋಡಿರಿ....

'ಧಡಕ್' ಚಿತ್ರ ನೋಡಿ ಅನಿಲ್ ಕಪೂರ್ ಹೇಳಿದಿಷ್ಟು...

'ಧಡಕ್' ಚಿತ್ರ ನೋಡಿ ಅನಿಲ್ ಕಪೂರ್ ಹೇಳಿದಿಷ್ಟು...

''ನಿನ್ನೆಯಷ್ಟೇ 'ಧಡಕ್' ಸಿನಿಮಾ ನೋಡಿದೆ. ಜಾಹ್ನವಿ ಕಪೂರ್ ಮತ್ತು ಇಶಾನ್ ಮುಗ್ಧತೆ ಮತ್ತು ಪ್ರೀತಿ ನಿಮ್ಮ ಹೃದಯ ಗೆಲ್ಲುವುದು ಖಂಡಿತ. ನನಗಂತೂ ಈ ಚಿತ್ರ ಇಷ್ಟ ಆಯ್ತು'' ಅಂತ ಟ್ವೀಟ್ ಮಾಡಿದ್ದಾರೆ ಅನಿಲ್ ಕಪೂರ್.

ಸೋನಂ ಕಪೂರ್ ಹೇಳಿದ್ದೇನು.?

ಸೋನಂ ಕಪೂರ್ ಹೇಳಿದ್ದೇನು.?

''ಜಾಹ್ನವಿ ಕಪೂರ್ ಬಗ್ಗೆ ನನಗೆ ಹೆಮ್ಮೆ ಆಗುತ್ತದೆ. ಆಕೆಯ ಅಭಿನಯ ವರ್ಣಿಸಲು ಅಸಾಧ್ಯ. ಜಾಹ್ನವಿ ಹಾಗೂ ಇಶಾನ್ ರವರ ಪ್ರತಿಭೆ ಹಾಗೂ ತಾಕತ್ತನ್ನು ತೆರೆಮೇಲೆ ಸೆರೆ ಹಿಡಿದ ನಿರ್ದೇಶಕ ಶಶಾಂಕ್ ಗೆ ದೊಡ್ಡ ಥ್ಯಾಂಕ್ಸ್'' ಎಂದು ಟ್ವೀಟಿಸಿದ್ದಾರೆ ಸೋನಂ ಕಪೂರ್.

ಬ್ಲಾಕ್ ಬಸ್ಟರ್ ಗ್ಯಾರೆಂಟಿ

ಬ್ಲಾಕ್ ಬಸ್ಟರ್ ಗ್ಯಾರೆಂಟಿ

''ಧಡಕ್'ನ ಪ್ರತಿಯೊಂದು ಅಂಶ ಕೂಡ ಬ್ಲಾಕ್ ಬಸ್ಟರ್ ಅನಿಸುತ್ತದೆ. ಇಶಾನ್ ಹಾಗೂ ಜಾಹ್ನವಿ ದೊಡ್ಡ ತಾರೆಯರಾಗುವುದರಲ್ಲಿ ಅನುಮಾನವೇ ಇಲ್ಲ'' ಎಂದು ವಿಶಾಲ್ ದದ್ಲಾನಿ ಟ್ವೀಟ್ ಮಾಡಿದ್ದಾರೆ.

ಕಥೆ ಹೇಳುವ ರೀತಿ ಚೆಂದ

ಕಥೆ ಹೇಳುವ ರೀತಿ ಚೆಂದ

''ನಿರ್ದೇಶಕ ಶಶಾಂಕ್ ಕೈತಾನ್ ರವರ ಕಥೆ ಹೇಳುವ ರೀತಿ ಚೆಂದ. ಚಿತ್ರದಲ್ಲಿ ಜಾಹ್ನವಿ ಕಪೂರ್ ಔಟ್ ಸ್ಟಾಂಡಿಂಗ್. ಇಶಾನ್ ಅಭಿನಯದ ಕೂಡ ಚೆನ್ನಾಗಿದೆ. ಈ ಚಿತ್ರವನ್ನ ಮಿಸ್ ಮಾಡಬೇಡಿ. ಪ್ರತಿಯೊಬ್ಬರು ನೋಡಿ'' ಅಂತ ಅರ್ಜುನ್ ಬಿಜಲಾನಿ ಟ್ವೀಟಿಸಿದ್ದಾರೆ.

ಇವರೆಲ್ಲ ಬಂದಿದ್ದರು.!

ಇವರೆಲ್ಲ ಬಂದಿದ್ದರು.!

'ಧಡಕ್' ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ನಟ ಶಾಹಿದ್ ಕಪೂರ್, ಮಾಧುರಿ ದೀಕ್ಷಿತ್, ರೇಖಾ, ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್, ಕರಿಶ್ಮಾ ಕಪೂರ್, ಖುಷಿ ಕಪೂರ್, ಮಲೈಕಾ ಅರೋರ ಸೇರಿದಂತೆ ಹಲವರು ಭಾಗವಹಿಸಿದ್ದರು.

More from Filmibeat

English summary
Bollywood Film Actors, who had attended the special screening of 'Dhadak' last night have taken their Twitter account to express their pleasure watching the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X