For Quick Alerts
  ALLOW NOTIFICATIONS  
  For Daily Alerts

  ಹೆಣ್ಣಾಗಿ ಬದಲಾದ ಬಾಲಿವುಡ್ ನಟಿಯರ ನೆಚ್ಚಿನ ಫ್ಯಾಷನ್ ಡಿಸೈನರ್ ಸ್ವಪ್ನಿಲ್

  |

  ಬಾಲಿವುಡ್ ನಟಿಯರ ಮೆಚ್ಚಿನ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿರುವ, ಮಾಧುರಿ ದೀಕ್ಷಿತ್, ದೀಪಿಕಾ ಪಡುಕೋಣೆ, ಕರೀನಾ ಇನ್ನೂ ಅನೇಕ ನಟಿಯರೊಟ್ಟಿಗೆ ಕೆಲಸ ಮಾಡಿದ್ದ ಫ್ಯಾಷನ್ ಡಿಸೈನರ್ ಸ್ವಪ್ನಿಲ್ ಹೆಣ್ಣಾಗಿ ಬದಲಾಗಿದ್ದಾರೆ.

  ಹೌದು, ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಆಗಿರುವ ಸ್ವಪ್ನಿಲ್ ಈ ವಿಷಯವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ತಾವು ಇನ್ನು ಮುಂದೆ ಸ್ವಪ್ನಿಲ್ ಅಲ್ಲ ಸಾಯಿಷಾ ಎಂದು ಹೇಳಿದ್ದಾರೆ.

  ತಮ್ಮ ಹೊಸ ಚಿತ್ರದೊಂದಿಗೆ ಸಂದೇಶವೊಂದನ್ನು ಇನ್‌ಸ್ಟಾಗ್ರಾಂ ನಲ್ಲಿ ಪ್ರಕಟಿಸಿರುವ ಸಾಯಿಷಾ, '2021 ಪ್ರಾರಂಭವಾಗಿದೆ. ಸಾಯಿಷೆ ಎಂದರೆ ಅರ್ಥಪೂರ್ಣ ಜೀವನ ಎಂದರ್ಥ. ನಾನು ಸಹ ನನ್ನ ಜೀವನವನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದುಕೊಂಡಿದ್ದೇನೆ' ಎಂದಿದ್ದಾರೆ.

  ಬಹಳ ನೋವು ಅನುಭವಿಸಿದ್ದೇನೆ: ಸಾಯಿಷಾ

  ಬಹಳ ನೋವು ಅನುಭವಿಸಿದ್ದೇನೆ: ಸಾಯಿಷಾ

  ಬಾಲ್ಯದ ನೆನಪನ್ನು ಹಂಚಿಕೊಂಡಿರುವ ಸಾಯಿಷಾ, 'ನನ್ನ ಶಾಲೆ, ಕಾಲೇಜು ದಿನಗಳು ಬಹಳ ಕೆಟ್ಟದಾಗಿದ್ದವು. ನಾನು ಭಿನ್ನ ಎಂಬ ಕಾರಣಕ್ಕೆ ಹುಡುಗರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು, ತಮ್ಮ ಗುಂಪಿನಿಂದ ಹೊರಗೆ ಇಟ್ಟಿದ್ದರು. ಇದು ನನಗೆ ಏಕಾಂತಗೊಳಿಸಿತ್ತಿತ್ತು. ಬಹಳ ನೋವು ನಾನು ಅನುಭವಿಸಿದ್ದೇನೆ' ಎಂದಿದ್ದಾರೆ ಸಾಯಿಷಾ.

  ವಜ್ರೇಶ್ವರಿ ಸಂಸ್ಥೆಯಿಂದ ಅಪ್ಪು, ಶಿವಣ್ಣ, ರಾಘಣ್ಣನ ಸಿನಿಮಾ ಬರುತ್ತೆ | Raghavendra Rajkumar | Part 02
  ಉಸಿರುಗಟ್ಟಿದ ಅನುಭವವಾಗುತ್ತಿತ್ತು: ಸಾಯಿಷಾ

  ಉಸಿರುಗಟ್ಟಿದ ಅನುಭವವಾಗುತ್ತಿತ್ತು: ಸಾಯಿಷಾ

  'ನಾನು ನನ್ನದಲ್ಲದ ಜೀವನವನ್ನು ಬದುಕುತ್ತಿದ್ದೆ. ಆಗೆಲ್ಲಾ ನನಗೆ ಉಸಿರುಗಟ್ಟಿದ ಅನುಭವವಾಗುತ್ತಿತ್ತು. 20 ರ ವಯಸ್ಸಿನ ನಂತರ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗೆ ಸೇರಿದ ಮೇಲೆ ನಾನು ನನ್ನ ತನವನ್ನು ಕಂಡುಕೊಂಡೆ. ಅಲ್ಲಿಂದ ನಾನು ನನ್ನನ್ನು ಕಂಡುಕೊಳ್ಳಲು ಆರಂಭಿಸಿದೆ' ಎಂದಿದ್ದಾರೆ ಸಾಯಿಷಾ.

  ನಾನು ಸಲಿಂಗಿ ಎಂದು ತಪ್ಪುತಿಳಿದುಕೊಂಡಿದ್ದೆ: ಸಾಯಿಷಾ

  ನಾನು ಸಲಿಂಗಿ ಎಂದು ತಪ್ಪುತಿಳಿದುಕೊಂಡಿದ್ದೆ: ಸಾಯಿಷಾ

  'ಪುರುಷರನ್ನು ನೋಡಿ ಆಕರ್ಷಿತಳಾಗುತ್ತಿದ್ದ ನಾನು ಇಷ್ಟು ವರ್ಷಗಳು ನನ್ನನ್ನು ನಾನು ಸಲಿಂಗಿ ಎಂದುಕೊಂಡಿದ್ದೆ. ಆದರೆ ಆರು ವರ್ಷಗಳ ಹಿಂದೆ ನನಗೆ ಗೊತ್ತಾಯಿತು ನಾನು ಗೇ ಅಲ್ಲ ಬದಲಿಗೆ ಹೆಣ್ಣು (ತ್ರಿಲಿಂಗಿ) ಎಂದು' ತಮ್ಮಲ್ಲಾದ ಬದಲಾವಣೆಯನ್ನು ಹೊರಗೆಡವಿದ್ದಾರೆ ಸಾಯಿಷಾ.

  ಹಲವು ಬಾಲಿವುಡ್ ಸೆಲೆಬ್ರಿಟಿಗಳು ಬೆಂಬಲಿಸಿದ್ದಾರೆ

  ಹಲವು ಬಾಲಿವುಡ್ ಸೆಲೆಬ್ರಿಟಿಗಳು ಬೆಂಬಲಿಸಿದ್ದಾರೆ

  ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಾಯಿಷಾ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟಿಯರಾದ ಅದಿತಿ ರಾವ್ ಹೈದಿರಿ, ಇಶಾ ಗುಪ್ತಾ, ಸಿಕಂದರ್ ಖೇರ್ ಅವರುಗಳು ಸಾಯಿಷಾ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸಾಯಿಷೆ ಈ ಹಿಂದೆ ಮಾಧುರಿ ದೀಕ್ಷಿತ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾಣಿ ಇನ್ನೂ ಹಲವು ಖ್ಯಾತ ನಟಿಯರೊಂದಿಗೆ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

  English summary
  Celebrity fashion designer Swaplin announce that he is a woman. He changed name as Saisha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X