21,000 ಬಿಲ್ ; ಶಿಲ್ಪಾ ಶೆಟ್ಟಿ ಹೋಟೆಲ್‌ನಲ್ಲಿ ಒಂದು ಪ್ಲೇಟ್ 'ನೂಡಲ್ಸ್' ಬೆಲೆ ಎಷ್ಟು ? ರೇಟ್ ಕೇಳಿ ಬೆಚ್ಚಿಬಿದ್ದ ಜನ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.

ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್‌ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್‌ ನಲ್ಲಿ ಹಣ ಹೂಡಿದ್ದಾರೆ. ಇನ್ನೂ ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆ ಪೈಕಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು.

celebrity-tax-or-fine-dining-inside-the-21-000-receipt-from-shilpa-shetty-s-bastian

ಹೌದು. ಶಿಲ್ಪಾ ಶೆಟ್ಟಿ ಒಡೆತನದ ''ಬಾಸ್ಟಿಯನ್'' ರೆಸ್ಟೋರೆಂಟ್‌ಗಳು ದೇಶದ ನಾನಾ ಭಾಗದಲ್ಲಿವೆ. ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿಯೂ ಈ ''ಬಾಸ್ಟಿಯನ್ ಗಾರ್ಡನ್ ಸಿಟಿ'' ಇದೆ. ಗೋವಾದಲ್ಲಿ ಕೂಡ ಇದೆ.

ಇನ್ನು ಮುಂಬೈನಲ್ಲಿ ಕೇವಲ ಒಂದು ರೆಸ್ಟೋರೆಂಟ್ ಮಾತ್ರ ಅಲ್ಲ. ಬೇರೆ ಬೇರೆ ಹೆಸರಿನಲ್ಲಿ 6 ರೆಸ್ಟೋರೆಂಟ್‌ಗಳನ್ನು ರಂಜೀತ್ ಬಿಂದ್ರಾ ಅವರ ಜೊತೆ ಸೇರಿ ಶಿಲ್ಪಾ ಶೆಟ್ಟಿ ಪ್ರಾರಂಭ ಮಾಡಿದ್ದಾರೆ. ಆ ಪೈಕಿ ಜುಹುನಲ್ಲಿರುವ ''ಬಾಸ್ಟಿಯನ್'' ರೆಸ್ಟೋರೆಂಟ್‌ನದ್ದು ಎನ್ನಲಾದ ಬಿಲ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚರ್ಚೆಗೆ ಗ್ರಾಸವಾಗಿದೆ. ಹಲವರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ.

ಯಾಕೆಂದರೆ.. ವೈರಲ್ ಆದ ಏಪ್ರಿಲ್ 24, 2024ರ ಈ ಹಳೆಯ ಬಿಲ್‌ನಲ್ಲಿ ಕೇವಲ ಹಾಂಗ್ ಕಾಂಗ್ ನೂಡಲ್ಸ್‌ಗೆ ₹ 950ದರವನ್ನು ನಮೂದಿಸಲಾಗಿದೆ. ಇನ್ನೂ ಒಟ್ಟು ಮೊತ್ತ ₹ 21,731 ರೂಪಾಯಿ ಆಗಿದೆ. ಹಲವರು ಈ ಬಿಲ್ ಕಂಡು ಮನೆಯಲ್ಲಿಯೇ ಮಾಡಬಹುದಾದ, ಸಾಮಾನ್ಯ ರೆಸ್ಟೋರೆಂಟ್‌ಗಳಲ್ಲಿ ಕಡಿಮೆ ದರಕ್ಕೆ ಸಿಗುವ ಒಂದು ಪ್ಲೇಟ್ ನೂಡಲ್ಸ್‌ಗೆ ₹ 950 ರೂಪಾಯಿ ತೆಗೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಹಲವರು ಮಾಡುತ್ತಿದ್ದಾರೆ. ದರ ತುಂಬಾನೇ ದುಬಾರಿ ಆಯ್ತು ಎನ್ನುತ್ತಿದ್ಧಾರೆ. ರೆಸ್ಟೋರೆಂಟ್ ಹೆಸರಿನಲ್ಲಿ ಶಿಲ್ಪಾ ಶೆಟ್ಟಿ ಅಕ್ಷರಶಃ ಹಗಲು ದರೋಡೆ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಮ ವರ್ಗದವರು ಅಪ್ಪಿ ತಪ್ಪಿ ಇಲ್ಲಿ ಹೋದರೆ ಪಂಗನಾಮ ಗ್ಯಾರಂಟಿ ಎನ್ನುತ್ತಿದ್ದಾರೆ.

ಇನ್ನು ಕೆಲವರು ಶಿಲ್ಪಾ ಶೆಟ್ಟಿ ಪರ ವಕಾಲತ್ತು ವಹಿಸಿದ್ದು ಮೆನುವಿನಲ್ಲಿ ಮೊದಲೇ ಈ ಬೆಲೆಗಳನ್ನು ಉಲ್ಲೇಖ ಮಾಡಿರಲಾಗಿರುತ್ತೆ. ಆಹಾರದ ಬೆಲೆಯನ್ನು ಕೇವಲ ಅದರ ಪ್ರಮಾಣದ ಮೇಲೆ ಅಳೆಯಲಾಗುವುದಿಲ್ಲ. ಶಿಲ್ಪಾ ಶೆಟ್ಟಿ ಅವರ ಈ ರೆಸ್ಟೋರೆಂಟ್ ನೀಡುವ ಅದ್ದೂರಿ ಅನುಭವ ಮತ್ತು ಅಲ್ಲಿನ ವಾತಾವರಣದ ಮುಂದೆ ಈ ₹950 ಬೆಲೆ ದೊಡ್ಡದಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

celebrity-tax-or-fine-dining-inside-the-21-000-receipt-from-shilpa-shetty-s-bastian

ಅಂದ್ಹಾಗೇ ಬಾಸ್ಟಿಯನ್‌ ಬಿಲ್ ಕುರಿತು ಟೀಕೆ ಟಿಪ್ಪಣಿಗಳು ಏನೇ ಇದ್ದರೂ ಈ ರೆಸ್ಟೋರೆಂಟ್ ಪ್ರತಿ ರಾತ್ರಿ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. ದುಬಾರಿ ಬಿಲ್ ಎನ್ನುವುದು ಅನೇಕರಿಗೆ ಕೇವಲ ಒಂದು ಸಂಖ್ಯೆಯಲ್ಲ, ಬದಲಾಗಿ ಅದೊಂದು 'ಸ್ಟೇಟಸ್ ಸಿಂಬಲ್'. ಈ ಹಿನ್ನೆಲೆ ನಡೆಯುತ್ತಿರುವ ಈ ಚರ್ಚೆಯ ಕುರಿತು ಶಿಲ್ಪಾ ಶೆಟ್ಟಿ ತಲೆ ಕೆಡಿಸಿಕೊಳ್ಳುವುದು ಅನುಮಾನ.

ಇನ್ನು ನೆಗೆಟಿವ್ ಇರಲಿ ಪಾಸಿಟಿವ್ ಇರಲಿ, ಜನ ಹೆಚ್ಚು ಮಾತನಾಡಿದರೆ ಪ್ರಚಾರ ಸಿಗುತ್ತೆ ಎನ್ನುವ ಧೋರಣೆ ಹಲವರದ್ದು. ಶಿಲ್ಪಾ ಅವರ ವಿಚಾರಧಾರೆ ಕೂಡ ಇದೇ ಆಗಿದ್ದರು ಆಗಿರಬಹುದು. ಒಟ್ಟಿನಲ್ಲಿ ಈ "ನೂಡಲ್ಸ್ ಬಿಲ್" ಸದ್ಯಕ್ಕಂತೂ ಇಂಟರ್ನೆಟ್‌ನಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Disclaimer: ಈ ವರದಿಯಲ್ಲಿ ಉಲ್ಲೇಖ ಮಾಡಿರುವ ಬಿಲ್‌ನ ಸತ್ಯಾಸತ್ಯತೆಯನ್ನು ಫಿಲ್ಮಿಬೀಟ್ ಕನ್ನಡ ಖಚಿತ ಪಡಿಸುವುದಿಲ್ಲ. ವೈರಲ್ ಆದ ಬಿಲ್ ಅಸಲಿನಾ ಅಥವಾ ನಕಲಿನಾ ಎಂದು ದೃಢಪಡಿಸಲು ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯ ಆಧಾರದ ಮೇಲೆ ಈ ವರದಿಯನ್ನು ಪ್ರಕಟಿಸಲಾಗಿದೆ.

More from Filmibeat

English summary
Inside the Bastian bill controversy! 💎 See why netizens are stunned by the prices at Shilpa Shetty Kundra’s celebrity hotspot. Luxury seafood comes at a cost.
Read more about: shilpa shetty hotel business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X