ನಿಮ್ಮ ಹುಬ್ಬೇರಿಸುತ್ತೆ ಈ ಸೆಲೆಬ್ರೆಟಿಗಳ ವಾಚ್ ಬೆಲೆ. ಯಾವ್ಯಾವ ಸ್ಟಾರ್ ಬಳಿ ಎಷ್ಟು ಮೊತ್ತದ ವಾಚ್ ಇದೆ ನೋಡಿ.

ಸೆಲೆಬ್ರೆಟಿಗಳು ಅಂದರೇನೆ ಹಾಗೇ. ಬಣ್ಣದ ಜಗತ್ತಲ್ಲಿ ಶೈನ್ ಆಗುವ ಅವರು ತಮ್ಮ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿ ಇರುತ್ತಾರೆ. ಇನ್ನು ಅಭಿಮಾನಿಗಳಿಗೂ ತಮ್ಮ ನೆಚ್ಚಿನ ಸೆಲೆಬ್ರೆಟಿಗಳು ಯಾವ ಬ್ರ್ಯಾಂಡ್ ಬಟ್ಟೆ ಹಾಕುತ್ತಾರೆ, ಎಲ್ಲಿ ಶಾಪಿಂಗ್ ಮಾಡುತ್ತಾರೆ, ದುಬಾರಿ ವಸ್ತುಗಳು ಯಾವುದು ಇದೆ ಅಂತೆಲ್ಲ ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಹುಡುಕಾಟ ಕೂಡ ಮಾಡುತ್ತಾರೆ. ಇತ್ತೀಚೆಗೆ ಸ್ಟಾರ್ ಸೆಲೆಬ್ರೆಟಿಗಳು ದುಬಾರಿ ಮೊತ್ತದ ಮಾಸ್ಕ್ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು. ಈಗ ಸೆಲೆಬ್ರೆಟಿಗಳ ದುಬಾರಿ ವಾಚ್ ಸುದ್ದಿಯಲ್ಲಿದೆ.

ದುಬಾರಿ ಕಲೆಕ್ಷನ್‌ಗಳು ಸೆಲೆಬ್ರೆಟಿಗಳೊಂದಿಗೆ ಇರೋದು ಅಪರೂಪವೇನಲ್ಲ. ದುಬಾರಿ ಕಾರು, ಬೈಕು, ಬಂಗಲೆ ಅಂತೆಲ್ಲ ಅದೆಷ್ಟೋ ಕೋಟಿ ಕೋಟಿ ವೆಚ್ಚದಲ್ಲಿ ಖರೀದಿ ಮಾಡಿರುತ್ತಾರೆ. ಈ ರೀತಿ ಕಲೆಕ್ಷನ್ ಮಾಡೋದು ಒಂದು ರೀತಿಯ ಪ್ರೆಸ್ಟೀಜ್‌ ಎಂದು ಭಾವಿಸುವ ಅವರು ಚಿಕ್ಕ ಚಿಕ್ಕ ವಸ್ತುಗಳನ್ನು ದುಬಾರಿ ಬೆಲೆಯಲ್ಲಿಯೇ ಖರೀದಿ ಮಾಡಿ ಕೇಳುಗರ ಹುಬ್ಬೇರಿಸುತ್ತಾರೆ. ಸಾಮಾನ್ಯರು ಸಾವಿರ ಬೆಲೆಯಲ್ಲಿ ಕೊಂಡುಕೊಳ್ಳುವ ವಸ್ತುವನ್ನು ಸೆಲೆಬ್ರೆಟಿಗಳು ಲಕ್ಷ, ಕೋಟಿ ಕೊಟ್ಟು ಕೊಂಡುಕೊಂಡಿರುತ್ತಾರೆ.

ಇದೀಗ ಸ್ಟಾರ್ ಸೆಲೆಬ್ರೆಟಿಗಳ ವಾಚ್ ಕಲೆಕ್ಷನ್ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ. ಇತ್ತೀಚೆಗೆ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿರೋ ವಿಷಯ ಸೆಲೆಬ್ರೆಟಿಗಳ ವಾಚ್ ಸಂಗ್ರಹಣೆ ಬಗ್ಗೆ. ಅಷ್ಟಕ್ಕು ಈ ವಿಚಾರ ಈಗ ಹೆಚ್ಚು ಹುಡುಕಾಟ ಆಗೋದಕ್ಕೆ ಕಾರಣ ಟಾಲಿವುಡ್‌ ನಟ ಜೂನಿಯರ್ ಎನ್‌ಟಿಆರ್. ಹೌದು ಜೂನಿಯರ್ ಎನ್‌ಟಿಆರ್‌ ದುಬಾರಿ ವಾಚ್‌ ಬಗ್ಗೆ ಈಗ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಇದೇ ವಿಚಾರಕ್ಕೆ ಬೇರೆ ಸೆಲೆಬ್ರೆಟಿಗಳ ವಾಚ್ ಯಾವುದು, ಎಷ್ಟು ಬೆಲೆ ಎಂಬೆಲ್ಲ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ ಅಭಿಮಾನಿಗಳು. ಇದಕ್ಕೆ ಕಾರಣ ಏನು ಮುಂದೆ ಓದಿ....

ವಾಚ್‌ಗೆ ಕೋಟಿ ಮೊತ್ತ ಕೊಟ್ಟು ಕೊಂಡ ಜೂನಿಯರ್ ಎನ್‌ಟಿಆರ್

ವಾಚ್‌ಗೆ ಕೋಟಿ ಮೊತ್ತ ಕೊಟ್ಟು ಕೊಂಡ ಜೂನಿಯರ್ ಎನ್‌ಟಿಆರ್

ಜೂನಿಯರ್ ಎನ್‌ಟಿಆರ್ ಸಧ್ಯ ಆರ್‌ಆರ್‌ಆರ್‌ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆರ್‌ಆರ್‌ಆರ್‌ ಚಿತ್ರ ರಿಲೀಸ್‌ಗೆ ಸಜ್ಜಾಗುತ್ತಿದ್ದು ಕನ್ನಡದಲ್ಲು ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ರಾಜ್‌ಮೌಳಿ ನಿರ್ದೇಶನ ಸಿನಿಮಾದ ಮತ್ತೊಂದು ಪ್ಲಸ್‌ ಪಾಯಿಂಟ್. ಇತ್ತೀಚೆಗೆ ಆರ್‌ಆರ್‌ಆರ್‌ ಚಿತ್ರತಂಡ ಚಿತ್ರದ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜೂನಿಯರ್ ಎನ್‌ಟಿಆರ್ ಒಂದು ವಾಚ್ ಧರಿಸಿದ್ದರು, ಕ್ಯೂರಿಯಾಸಿಟಿಯಿಂದಲೇ ಈ ವಾಚ್ ಯಾವುದು, ಎಷ್ಟು ಬೆಲೆ ಎಂದು ಹುಡುಕಿದಾಗ ಅದರ ಬೆಲೆ ಕಂಡು ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ. ಅಷ್ಟಕ್ಕು ಈ ವಾಚ್ ಬೆಲೆ 3 ಕೋಟಿ 99 ಲಕ್ಷ. ಈ ವಾಚ್‌ನ ಹೆಸರು ರಿಚಾರ್ಡ್ ಮಿಲ್ಲೆ ಆರ್ ಎಂ011 ಕಾರ್ಬನ್ ಎನ್‌ಟಿಪಿಟಿ ಗ್ರೊಸ್ಜೀನ್ ರೋಸ್ ಗೋಲ್ಡ್ ಲೋಟಸ್ ಎಫ್1. ಅತ್ಯಂತ ದುಬಾರಿ ವಾಚ್‌ಗಳಲ್ಲಿ ಇದು ಕೂಡ ಒಂದಾಗಿದೆ. ಇದರ ಬೆಲೆ ತಿಳಿದು ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.

ಬಾಲಿವುಡ್ ಬಿಗ್‌ ಬಿ ಇಂದ ಉಡುಗೊರೆಯಾಗಿ ಬಂತು ಈ ವಾಚ್!

ಬಾಲಿವುಡ್ ಬಿಗ್‌ ಬಿ ಇಂದ ಉಡುಗೊರೆಯಾಗಿ ಬಂತು ಈ ವಾಚ್!

ಬಾಲಿವುಡ್‌ ನಟ ರಣ್‌ಬೀರ್ ಕಪೂರ್ ಕೂಡ ಸಾಕಷ್ಟು ಕ್ರೇಜ್ ಇರುವ ನಟ. ತಾನು ಧರಿಸುವ ಬಟ್ಟೆಯಿಂದ ಹಿಡಿದು, ಹಾಕುವ ಶೂ, ಗಾಗಲ್ಸ್ ಎಲ್ಲವೂ ಲಕ್ಷ ಬೆಲೆ ಬಾಳುವ ವಸ್ತುಗಳೆ. ರಣ್‌ಬೀರ್ ಕಪೂರ್ ಕೂಡ ಲಕ್ಷ ಬೆಲೆ ಬಾಳುವ ದುಬಾರಿ ವಾಚ್ ಹೊಂದಿದ್ದು, ಈ ವಾಚ್ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ. ಯಾಕೆಂದರೆ ಈ ವಾಚ್ ಬೆಲೆ ಬರೋಬ್ಬರಿ 50 ಲಕ್ಷ. ಈ ವಾಚ್‌ನ ಹೆಸರು ರಿವರ್ಡ್ ಮಿಲ್ಲೆ ಆರ್‌ಎಮ್ 010 . ಈ ದುಬಾರಿ ವಾಚ್ ಅನ್ನು ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ರಣ್‌ಬೀರ್ ಕಪೂರ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಹೀಗಾಗಿ ಈ ವಾಚ್‌ ಅನ್ನು ತುಂಬ ಇಷ್ಟ ಪಟ್ಟು ಧರಿಸುತ್ತಾರೆ.

ದುಬಾರಿ ಮೊತ್ತದ 5 ವಾಚ್‌ಗಳ ಸಂಗ್ರಹ ಮಾಡಿರೋ ಬಾದ್‌ ಷಾ

ದುಬಾರಿ ಮೊತ್ತದ 5 ವಾಚ್‌ಗಳ ಸಂಗ್ರಹ ಮಾಡಿರೋ ಬಾದ್‌ ಷಾ

ಇನ್ನು ಬಾಲಿವುಡ್ ನಟ ಶಾರುಖ್ ಖಾನ್ ಬಗ್ಗೆ ಹೇಳೋದೆ ಬೇಡ. ಮೊದಲಿನಿಂದಲೂ ರಾಯಲ್ ಆಗಿ ಬದುಕುತ್ತಿರುವ ಶಾರುಖ್, ಬಟ್ಟೆ ವಿಚಾರಕ್ಕೆ ಯಾವತ್ತು ಕಾಂಪ್ರೋಮೈಸ್ ಆಗೋದೆ ಇಲ್ಲ. ಸುಮಾರು 1500ಕ್ಕು ಹೆಚ್ಚು ಜೊತೆ ಜೀನ್ಸ್ ಕಲೆಕ್ಷನ್ ಇಟ್ಟುಕೊಂಡಿರುವ ಅವರು ಇಮ್ಮೆ ಹಾಕಿದ ಬಟ್ಟೆಯನ್ನು ಮತ್ತೆ ಯಾವತ್ತು ಅವರು ಧರಿಸೋದಿಲ್ಲ ಎಂಬ ಮಾತಿದೆ. ಇಂತಹ ರಾಯಲ್ ಲೈಫ್ ಲೀಡ್ ಮಾಡುತ್ತಿರುವ ಶಾರುಖ್ ಖಾನ್ ಬಳಿಯು 5 ದುಬಾರಿ ವಾಚ್‌ಗಳಿವೆ. 38 ಲಕ್ಷದ ಪಟೆಕ್ ಫಿಲಿಪಿ ಅಕ್ವಾನಟ್ 5968ಎ, 12 ಲಕ್ಷದ ರೋಲೆಕ್ಸ್ ವಾಚ್, 5 ಲಕ್ಷದ ಟ್ಯಾಗ್ ಊವರ್ ಮೊನೊಕೊ ಸಿಕ್ಸ್ಟಿ ನೈನ್ ವಾಚ್, ಮತ್ತು 4 ಲಕ್ಷದ ಕರೆರಾ ಕ್ಯಾಲಿಬರ್ ವಾಚ್ ಶಾರುಖ್ ಖಾನ್ ಬಳಿ ಇವೆ.

ವಾಚ್ ಕಲೆಕ್ಷನ್ ಇಷ್ಟ ಪಡುವ ನಟಿ ದೀಪಿಕಾ ಪಡುಕೋಣೆ

ವಾಚ್ ಕಲೆಕ್ಷನ್ ಇಷ್ಟ ಪಡುವ ನಟಿ ದೀಪಿಕಾ ಪಡುಕೋಣೆ

ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಬಳಿಯೂ ದುಬಾರಿ ವಸ್ತುಗಳ ಸಾಕಷ್ಟು ಸಂಗ್ರಹ ಇದ್ದು, ಸಾಕಷ್ಟು ದುಬಾರಿ ವಾಚ್‌ಗಳನ್ನು ಇಟ್ಟುಕೊಂಡಿದ್ದಾರೆ. 8 ಲಕ್ಷ ಬೆಲೆಬಾಳುವ ಟಿಸೋಟ್ ಕ್ಲಾಸಿಕ್ ಪ್ರಿನ್ಸ್ ಡೈಮಂಡ್ ರೋಸ್ ಗೋಲ್ಡ್ ವ್ರಿಸ್ಟ್ ವಾಚ್ ದೀಪಿಕಾ ಬಳಿ ಇದ್ದರೆ, ಮತ್ತೊಂದು ಹೆರ್‌ಮೆಸ್ ಬಿರ್‌ಕಿನ್ ಬ್ಯಾಗ್ ವಾಚ್‌ ಕೂಡ ದೀಪಿಕಾ ಬಳಿ ಇದೆ. ಇದರ ಮೊತ್ತವು 8.03 ಲಕ್ಷವಾಗಿದ್ದು, ಸಾಕಷ್ಟು ವಿಭಿನ್ನತೆಯಿಂದ ಕೂಡಿದೆ.

ದುಬಾರಿ ವಾಚ್‌ನಲ್ಲಿ ಏನೇನಿದೆ ನೋಡಿ

ದುಬಾರಿ ವಾಚ್‌ನಲ್ಲಿ ಏನೇನಿದೆ ನೋಡಿ

ಬಾಲಿವುಡ್ ಸ್ಟೈಲಿಸ್ಟ್ ಐಕಾನ್ ರಣ್‌ವೀರ್ ಸಿಂಗ್‌ ಬಳಿಯೂ ಕೋಟಿ ಮೊತ್ತದ ವಾಚ್ ಕಲೆಕ್ಷ ನ್ ಇದೆ. 3.29 ಕೋಟಿ ಮೊತ್ತದ ದುಬಾರಿ ವಾಜ್ ಜೊತೆಗೆ ಸಿಂಬ ಚಿತ್ರದ ರಿಲೀಸ್ ಸಂದರ್ಭದಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ 4.8 ಲಕ್ಷದ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.

English summary
Ccelebrities are constantly in the media for spending ridiculously on expensive items that they barely need.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X