»   » ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದ ನಟಿ, ಒಂದು ಮಗು ಸಾವು.!

ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದ ನಟಿ, ಒಂದು ಮಗು ಸಾವು.!

Posted By:
Subscribe to Filmibeat Kannada

ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ತುಂಬ ಅದೃಷ್ಟವಂತೆ ಎಂದು ಎಲ್ಲರು ಹೇಳುತ್ತಿದ್ದರು. ಯಾಕಂದ್ರೆ, ಸೆಲಿನಾ ಜೇಟ್ಲಿ ಮತ್ತು ಪೀಟರ್ ಹಾಗ್ ದಂಪತಿಗೆ ಎರಡೆರಡು ಬಾರಿ ಅವಳಿ ಜವಳಿ ಮಕ್ಕಳಾಗಿದೆ. ಆದ್ರೆ, ವಿಧಿಯ ಆಟಕ್ಕೆ ಒಂದು ಮಗು ಇಹಲೋಕ ತ್ಯಜಿಸಿದೆ.

ಹೌದು, 2012ರಲ್ಲಿ ಚೊಚ್ಚಲ ಬಾರಿಗೆ ಅವಳಿ ಜವಳಿ ಗಂಡು ಮಕ್ಕಳಿಗೆ ಸೆಲಿನಾ ಜೇಟ್ಲಿ ಜನ್ಮ ನೀಡಿದ್ದರು. ವಿರಾಜ್ ಮತ್ತು ವಿನ್ಸಟನ್ ಎಂದು ಹೆಸರಿಟ್ಟಿದ್ದರು. ಈಗ ಎರಡನೇ ಬಾರಿ ಸೆಪ್ಟೆಂಬರ್ 10, 2017 ರಂದು ಮತ್ತೊಮ್ಮೆ ಅವಳಿ ಜವಳಿ ಮಕ್ಕಳಿಗೆ ಸೆಲಿನಾ ಜನ್ಮ ನೀಡಿದ್ದರು. ಈ ಮಕ್ಕಳಿಗೆ ಅರ್ತರ್ ಜೇಟ್ಲಿ ಮತ್ತು ಶಮ್ಶರ್ ಜೇಟ್ಲಿ ಎಂದು ನಾಮಕರಣ ಮಾಡಿದ್ದರು.

Celina Jaitley Shares Bittersweet News

ಹೀಗೆ, ಸಂತೋಷದ ಸಂಭ್ರಮದಲ್ಲಿದ್ದ ಸೆಲಿನಾ, ದಸರಾ ಹಬ್ಬದಂದು ಕಹಿ ಘಟನೆಯನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಈಗಷ್ಟೇ ಜನ್ಮ ಪಡೆದುಕೊಂಡಿದ್ದ ಎರಡನೇ ಮಗು ಶಮ್ಶರ್ ಜೇಟ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದೆಯಂತೆ.

ತಮ್ಮ ಅಗಲಿದ ಮಗನನ್ನು ಅವನ ಭಾಗವಾಗಿರುವ ಇನ್ನೊಂದು ಮಗು ಅರ್ಥರ್ ಜೇಟ್ಲಿಯಲ್ಲಿ ಕಾಣುತ್ತೇವೆ ಎಂದು ಸೆಲಿನಾ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಸೆಲಿನಾ ತಮ್ಮ ತಂದೆಯನ್ನು ಕೂಡ ಕಳೆದುಕೊಂಡಿದ್ದರು. ಸದ್ಯ ನಟಿ ಸೆಲಿನಾ ಜೇಟ್ಲಿ ಮತ್ತು ಹೊಟೇಲ್ ಉದ್ಯಮಿ ಪೀಟರ್ ಹಾಗ್ ದಂಪತಿ ದುಬೈಯಲ್ಲಿ ವಾಸಿಸುತ್ತಿದ್ದಾರೆ.

English summary
Celina Jaitley gave birth to two boys on September 10 but one of them could not survive due to a heart defect.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada