"ತಂದೆ–ಮಗನ ಜೊತೆ ಮಲಗಿದ ಏಕೈಕ ನಟಿ ಸೆಲಿನಾ ಜೇಟ್ಲಿ": ವಿಮರ್ಶಕನ ವಿರುದ್ಧ ಬಾಲಿವುಡ್ ನಟಿ ಬೆಂಕಿ
ಉಮೈರ್ ಸಂಧು ಬಗ್ಗೆ ಸಿನಿಮಾ ಮಂದಿಗೆ ಹೊಸದಾಗಿ ಹೇಳಬೇಕಿಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್ ಮಂದಿಗೆ ಸ್ವಯಂ ಘೋಷಿತ ವಿಮರ್ಶಕ ಬಗ್ಗೆ ಚೆನ್ನಾಗಿ ಗೊತ್ತಿದೆ. ತಮ್ಮ ಟ್ವೀಟ್‌ಗಳ ಮೂಲಕ ಸಿನಿಮಾ ಮಂದಿಯ ನಿದ್ದೆಕೆಡಿಸುತ್ತಿದ್ದಾರೆ.
ಬಿಗ್ ಬಜೆಟ್ ಇಲ್ಲವೇ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್‌ಗೂ ಮುನ್ನವೇ ಉಮೈರ್ ಸಂಧು ವಿಮರ್ಶೆಯನ್ನು ಪ್ರಕಟಿಸುತ್ತಾರೆ. ಕೆಲವೊಮ್ಮೆ ಈ ವಿಮರ್ಶೆ ಸಿನಿಮಾ ಮಂದಿಯ ನಿದ್ದೆ ಕೆಡಿಸಿತ್ತು. ಮತ್ತೆ ಕೆಲವರಿಗೆ ಅನುಕೂಲವಾಗಿದೆ. ಆದರೆ, ಬಹುತೇಕ ಬಾರಿ ಉಮೈರ್ ಸಂಧು ಪ್ರೇಕ್ಷಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ಇಷ್ಟೇ ಆಗಿದ್ದರೆ ಸುಮ್ಮನಿರುತ್ತಿದ್ದರೋ ಏನೋ?.. ಸೆಲೆಬ್ರೆಟಿಗಳ ವಿರುದ್ಧ ಇಲ್ಲ ಸಲ್ಲದ ಗಾಸಿಪ್‌ಗಳನ್ನು ಹಬ್ಬಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಈಗ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಆಕೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉಮೈರ್ ಸಂಧು ಟ್ವೀಟ್‌ಗೆ ನಟಿ ಉರಿದುರಿದು ಬಿದ್ದಿದ್ದಾರೆ.
ಬಾಲಿವುಡ್‌ನ ಜನಪ್ರಿಯ ನಟಿ ಸೆಲಿನಾ ಜೇಟ್ಲಿ
ಉಮೈರ್ ಸಂಧು ವಿರುದ್ಧ ಬಾಲಿವುಡ್ ಸೆಲೆಬ್ರೆಟಿಗಳು ಈಗಾಗಲೇ ತಿರುಗಿಬಿದ್ದಿದ್ದಾರೆ. ಕೆಲ ಸೆಲೆಬ್ರೆಟಿಗಳು ಈಗಾಗಲೇ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಆದರೂ ಉಮೈರ್ ಸಂಧು ತಾರೆಯರ ಬಗ್ಗೆ ಗಾಸಿಪ್ ಹರಡುವುದನ್ನು ನಿಲ್ಲಿಸಿಲ್ಲ. ಈಗ ಸೆಲಿನಾ ಜೇಟ್ವಿ ಬಗ್ಗೆ ಕುರಿತು ಟ್ವೀಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಸೆಲಿನಾ ಜೇಟ್ಲಿ ಬಾಲಿವುಡ್‌ನ ಜನಪ್ರಿಯ ನಟಿ. ಈಕೆ 'ಜನಶೀನ್' ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಬಾಲಿವುಡ್ ದಿಗ್ಗಜ ದಿವಂಗತ ಫಿರೋಜ್ ಖಾನ್ ಮತ್ತು ಪುತ್ರ ಫರ್ದೀನ್ ಖಾನ್ ಸಿನಿಮಾವಿದು. ಮಗನಿಗಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೇ ಸಿನಿಮಾದ ಮೂಲಕ ಸೆಲಿನಾ ಜೇಟ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಸುಮಾರು 20 ವರ್ಷಗಳಿಂದ ಬೇರೆ ಬೇರೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ನಟಿಯ ವಿರುದ್ಧ ಈಗ ಉಮೈರ್ ಸಂಧು ಗಂಭೀರ ಆರೋಪ ಮಾಡಿದ್ದಾನೆ.

"ತಂದೆ-ಮಗನೊಂದಿಗೆ ಮಲಗಿದ್ದಳು ಸೆಲಿನಾ ಜೇಟ್ವಿ"
ಉಮೈರ್ ಸಂಧು ಇತ್ತೀಚೆಗಷ್ಟೇ ಸೆಲಿನಾ ಜೇಟ್ವಿ ವಿರುದ್ಧ ಒಂದು ಟ್ವೀಟ್ ಮಾಡಿದ್ದರು. "ಬಾಲಿವುಡ್‌ನ ತಂದೆ-ಮಗ ಫಿರೋಜ್ ಖಾನ್ ಹಾಗೂ ಫರ್ದೀನ್ ಖಾನ್ ಜೊತೆ ಮಲಗಿದ ಏಕೈಕ ನಾಯಕಿ ಸೆಲಿನಾ ಜೇಟ್ಲಿ" ಎಂದು ಉಮೈರ್ ಟ್ವೀಟ್ ಮಾಡಿದ್ದನು. ಈ ಟ್ವೀಟ್ ಕಣ್ಮುಚ್ಚಿ ಕಣ್ಬಿಡುವುದರೊಳಗೆ ವೈರಲ್ ಆಗಿತ್ತು. ಇದೇ ಟ್ವೀಟ್ ವಿರುದ್ಧ ನಟಿ ಸೆಲಿನಾ ಜೇಟ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಉಮೈರ್ ಸುಂಧು ಟ್ವೀಟ್‌ಗೆ ಸೆಲಿನಾ ಜೇಟ್ಲಿ ಸಿಡಿದೆದ್ದು ಟ್ವೀಟ್ ಮಾಡಿದ್ದಾರೆ. " ಡಿಯರ್ ಸಂಧು.. ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಹಲವು ದಾರಿಗಳಿವೆ. ಸಮಯವಿದ್ದಾಗ ವೈದ್ಯರನ್ನು ಸಂಪರ್ಕಿಸು" ಎಂದು ಸೆಲಿನಾ ಜೇಟ್ಲಿ ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಸಿನಿಮಾ ಮಂದಿಗೆ ಉಮೈರ್ ಸಂಧು ತಲೆನೋವು
ಉಮೈರ್ ಸಂಧು ಇಂತಹ ಟ್ವೀಟ್ ಮಾಡುವುದು ಇದು ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹದ್ದೇ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದ್ದಾರೆ. ಸೆಲೆಬ್ರಿಟಿಗಳ ಬಗ್ಗೆ ಗಾಸಿಪ್ ಹರಿದ್ದಾರೆ. ಈ ಬಾರಿ ಸೆಲಿನಾ ಜೇಟ್ಲಿ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಹೊಸ ಸಿನಿಮಾಗಳು ರಿಲೀಸ್ ಆದಾಗಲೂ ರಿಲೀಸ್‌ಗೂ ಮುನ್ನವೇ ವಿಮರ್ಶೆ ಬರೆದು ಬಿಡುತ್ತಾನೆ. ಇದು ಸಿನಿಮಾ ಮಂದಿಗೆ ಕೆಲವೊಮ್ಮೆ ನಷ್ಟವಾಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳನ್ನೂ ಉಮೈರ್ ಸಂಧು ವಿಮರ್ಶೆ ಮಾಡಿದ್ದಾರೆ. ಇತ್ತೀಚೆಗೆ 'ಕಬ್ಜ' ಸಿನಿಮಾವನ್ನು ಬಿಡುಗಡೆಗೂ ಮುನ್ನವೇ ಹೊಗಳಿದ್ದರು.


Click it and Unblock the Notifications











