2 ಬಾರಿ ಅವಳಿ ಮಕ್ಕಳ ಜನನ: ನನಗಿರುವ ಸಮಸ್ಯೆಯೇ ಇದಕ್ಕೆ ಕಾರಣ ಎಂದ ಉಪ್ಪಿ ಸಿನಿಮಾ ನಟಿ

By ಪ್ರಿಯಾ ದೊರೆ

ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ ಸೆಲೀನಾ ಜೇಟ್ಲಿ ಮದುವೆ ನಂತರ ಸಿನಿಮಾಗಳಿಂದ ದೂರಾಗಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದ ಒಂದ್ಕಾಲದಲ್ಲಿ ಆಕೆ ಮೋಡಿ ಮಾಡಿದ್ದರು. ಕನ್ನಡ 'ಶ್ರೀಮತಿ' ಸಿನಿಮಾದಲ್ಲೂ ಈ ಶಿಮ್ಲಾ ಬ್ಯೂಟಿ ನಟಿಸಿದ್ದರು. 'ನೋ ಎಂಟ್ರಿ', 'ಅಪ್ನಾ ಸಪ್ನಾ ಮನಿ ಮನಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸೆಲೀನಾ ನಟಿಸಿದ್ದರು.

2011ರಲ್ಲಿ ಪೀಟರ್ ಹ್ಯಾಗ್ ಎಂಬ ಉದ್ಯಮಿಯನ್ನು ಸೆಲೀನಾ ಜೇಟ್ಲಿ ಮದುವೆಯಾಗಿ ವಿದೇಶದಲ್ಲಿ ಸೆಟ್ಲ್‌ ಆಗಿದ್ದಾರೆ. ಸಿನಿಮಾಗಳಿಂದ ಆಕೆ ಸಂಪೂರ್ಣವಾಗಿ ದೂರವಾಗಿದ್ದಾರೆ. ಇತ್ತೀಚೆಗೆ ಆಕೆ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾ ಚಾಟ್ ನಡೆಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಆಸಕ್ತಿಕರ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರ ಉತ್ತರ ಕೊಡುತ್ತಾ ಸೆಲೀನಾ ತಮ್ಮ ದೇಹದಲ್ಲಿ ಇರುವ ಅಪರೂಪದ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

Celina Jaitly on Giving Birth To Twin Babies Twice

ಆಕೆಯ ಸಮಸ್ಯೆಯ ಬಗ್ಗೆ ತಿಳಿದು ಕೆಲವರು ಶಾಕ್ ಆಗುವುದು ಮಾತ್ರವಲ್ಲ ಥ್ರಿಲ್ ಆಗುತ್ತಿದ್ದಾರೆ. ಸೆಲೀನಾ ಹಾಗೂ ಪೀಟರ್ ದಂಪತಿಗೆ 2012ರಲ್ಲಿ ಅವಳಿ ಮಕ್ಕಳು ಜನಿಸಿದ್ದರು. 2017ರಲ್ಲಿ ಮತ್ತೊಮ್ಮೆ ಸೆಲೀನಾ ಗರ್ಭವತಿ ಆಗಿದ್ದರು. ಆಗ ಕೂಡ ಆಕೆಗೆ ಅವಳಿ ಮಕ್ಕಳೇ ಜನಿಸಿದ್ದರು. ಹೀಗೆ ಎರಡು ಬಾರಿ ಅವಳಿ ಮಕ್ಕಳು ಜನಿಸುವುದು ನಿಜಕ್ಕೂ ಅಪರೂಪ. ಆಧುನಿಕ ಜೀವನಶೈಲಿನಿಂದ ಸಾಕಷ್ಟು ದಂಪತಿಗಳು ಮಕ್ಕಳಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ಸೆಲಬ್ರೆಟಿಗಳಿಗೂ ಈ ಸಮಸ್ಯೆ ಎದುರಾಗಿದೆ. ಹಾಗಿರುವಾಗ 2 ಬಾರಿ ಅವಳಿ ಮಕ್ಕಳು ಎನ್ನುವುದು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ.

ನೆಟ್ಟಿಗರೊಬ್ಬರು "ನಿಮಗೆ ಸ್ವಾಭಾವಿಕವಾಗಿಯೇ ಅವಳಿ ಮಕ್ಕಳು ಜನಿಸಿದರಾ? ಅಥವಾ ಯಾವುದಾದರೂ ಚಿಕಿತ್ಸೆ ಪಡೆಯುವುದರಿಂದ ಹೀಗಾಯಿತಾ? ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ 2 ಬಾರಿ ನಿಮಗೆ ಅವಳಿ ಮಕ್ಕಳು ಅಲ್ಲವೇ? ಅದಕ್ಕೆ ಕೇಳುತ್ತಿದ್ದೇನೆ ಎಂದಿದ್ದಾರೆ. ಇದಕ್ಕೆ ಸೆಲೀನಾ ಉತ್ತರಿಸುತ್ತಾ ತಮ್ಮ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. "ನನಗೆ ರೇರ್ ಜೆನಿಟಿಕ್ ಡಿಸಾರ್ಡರ್ ಇದೆ. ನನಗಿರುವ ಜೆನೆಟಿಕ್ ಸಮಸ್ಯೆಯಿಂದ ಓವಿಲೇಶನ್ ಸಮಯದಲ್ಲಿ ಮಲ್ಟಿಪಲ್ ಎಗ್ಸ್ ರಿಲೀಸ್ ಆಗುತ್ತವೆ. ಆದ್ದರಿಂದಲೇ ಗರ್ಭವತಿಯಾದ ಪ್ರತಿ ಬಾರಿ ನನಗೆ ಅವಳಿ ಮಕ್ಕಳು ಜನಿಸಿದ್ದಾರೆ ಎಂದಿದ್ದಾರೆ.

Celina Jaitly on Giving Birth To Twin Babies Twice

"ನನ್ನ ಕೇಸ್‌ನಲ್ಲಿ ನನಗೆ ನಾನ್ ಐಡೆಂಟಿಕಲ್ ಅವಳಿ ಮಕ್ಕಳು ಹುಟ್ಟುತ್ತಾರೆ ಎಂದು ತಮ್ಮ ಅನುವಂಶಿಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. "ಇದು ತಪ್ಪಲ್ಲ, ದೇವರು ನಿಮಗೆ ದೊಡ್ಡ ಉಡುಗೊರೆ" ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸೆಲೀನಾ ಮತ್ತು ಪೀಟರ್ ದಂಪತಿ ಹೃದಯ ಒಮ್ಮೆ ಛಿದ್ರವಾಗಿತ್ತು. 2ನೇ ಬಾರಿ ಜನಿಸಿದ ಅವಳಿ ಮಕ್ಕಳು ಹೃದಯ ಸಂಬಂಧಿ ಸಮಸ್ಯೆಗಳೊಂದಿಗೆ ಜನಿಸಿದ್ದವು. ಅವರಲ್ಲಿ ಒಂದು ಮಗು ಕೆಲವು ದಿನಗಳಲ್ಲಿ ಕೊನೆಯುಸಿರೆಳೆದಿತ್ತು.

ಎರಡನೇ ಮಗು ಚೇತರಿಸಿಕೊಂಡು ಆರೋಗ್ಯವಾಗಿ ಬೆಳೆಯುತ್ತಿದೆ. ಸದ್ಯ ಸೆಲೀನಾ ತನ್ನ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಖುಷಿಯಾಗಿದ್ದಾರೆ. ಆಕೆಯ ಕುಟುಂಬದ ಫೋಟೋಗಳು ಆಗಾಗ್ಗೆ ವೈರಲ್ ಆಗುತ್ತವೆ. ಕಳೆದ 10 ವರ್ಷಗಳಿಂದ ಆಕೆ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಕೊನೆಯದಾಗಿ ಒಂದು ಶಾರ್ಟ್ ಫಿಲ್ಮ್‌ನಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
Celina Jaitly about her Twin Babies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X