ವಿಕ್ಕಿ ಮತ್ತು ತೃಪ್ತಿಯ 27 ಸೆಕೆಂಡ್ ಲಿಪ್ ಲಾಕ್‌ಗೆ ಕತ್ತರಿ ಹಾಕಿದ ಸೆನ್ಸಾರ್...!

ರಣ್ಭೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದಲ್ಲಿ ಬೆತ್ತಲಾಗುವ ಮೂಲಕ ದಿನಬೆಳಗಾಗುವುದರೊಳಗೆ ನ್ಯಾಷನಲ್ ಕ್ರಶ್ ಆದವರು ತೃಪ್ತಿ ದಿಮ್ರಿ. ಇಂಥಾ ತೃಪ್ತಿ ದಿಮ್ರಿ ಈಗ ಇನ್ನೊಮ್ಮೆ ಪಡ್ಡೆ ಹುಡುಗರ ಮನಸ್ಸು ಕೆರಳಿಸಲು ಸಿದ್ಧರಾಗಿದ್ದಾರೆ. ಇನ್ನೊಂದು ದಿನ ಕಳೆದರೆ ಅಂಥಾದ್ದೊಂದು ಮಹಾ ಭಾಗ್ಯದ ಸನ್ನಿವೇಶಕ್ಕೆ ಅದ್ದೂರಿ ಆರಂಭ ಸಿಗಲಿದೆ. ಯಾಕೆಂದರೆ, ತೃಪ್ತಿ ದಿಮ್ರಿ ಅಭಿನಯದ ಬ್ಯಾಡ್ ನ್ಯೂಸ್ ಈ ಶುಕ್ರವಾರ ಬಿಡುಗಡೆಯಾಗಲಿದೆ. ಆದರೆ ಇದೇ ಸಮಯದಲ್ಲಿ ಸೆನ್ಸಾರ್‌ ಮಂಡಳಿ ಪಡ್ಡೆಗಳಿಗೆ ನಿರಾಸೆ ಮಾಡಿದೆ.

ಹೌದು, ಅಸಲಿಗೆ ಬ್ಯಾಡ್ ನ್ಯೂಸ್ ತಂಡಕ್ಕೆ ಮತ್ತು ಬೆಳ್ಳಿತೆರೆಯಲ್ಲಿ ತೃಪ್ತಿ ದಿಮ್ರಿಯನ್ನು ನೋಡಲು ಕಾತುರದಿಂದ ಕಾಯುತ್ತಿರುವ ಭಕ್ತಗಣಕ್ಕೆ ಸೆನ್ಸಾರ್ ಮಂಡಳಿ ಬ್ಯಾಡ್ ನ್ಯೂಸ್ ಕೊಟ್ಟಿದೆ. ಕೇವಲ 27 ಸೆಕೆಂಡುಗಳ ಕಾಲ ಸುರಿದಿದ್ದ ಮುತ್ತಿನ ಮಳೆಯಲ್ಲಿ ನೆನೆಯದಂತೆ ಪ್ರೇಕ್ಷಕರನ್ನು ತಡೆದಿದೆ. ಚಿತ್ರದ ಮೂರು ವಿಭಿನ್ನ ಭಾಗಗಳಿಂದ 27 ಸೆಕೆಂಡುಗಳ ದೃಶ್ಯಗಳಿಗೆ ದೃಶ್ಯವನ್ನು ತೆಗೆಯುವಂತೆ ಚಿತ್ರತಂಡಕ್ಕೆ ಸೂಚನೆಯನ್ನು ಕೊಟ್ಟಿದೆ.

censor-board-asks-bad-newz-makers-to-alter-vicky-and-triptiis-intimate-scene

ವಿಕ್ಕಿ ಕೌಶಲ್ ಜೊತೆ ತೃಪ್ತಿ ಮೂರು ಬಾರಿ ಮಾಡಿದ್ದ ಲಿಪ್ ಲಾಕ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ಸೆನ್ಸಾರ್ ಬೋರ್ಡ್ , 09 ಸೆಕೆಂಡ್, 10 ಸೆಕೆಂಡ್ ಮತ್ತು 08 ಸೆಕೆಂಡ್ ಇದ್ದ ಚುಂಬನದ ದೃಶ್ಯಕ್ಕೆ ಕತ್ತರಿ ಹಾಕಿದೆ. ಇನ್ನು ಮದ್ಯಪಾನ ಮಾಡುವಾಗಿನ ದೃಶ್ಯದ ಕೆಳಗೆ ಮದ್ಯಪಾನ ಎಚ್ಚರಿಕೆಯ ಸಂದೇಶವನ್ನು ಹಾಕಬೇಕೆಂದು ಹೇಳಿದೆ. ಈ ಎಲ್ಲಾ ಬದಲಾವಣೆಗಳನ್ನು ಹೇಳಿದ ಬಳಿಕ ಸೆನ್ಸಾರ್‌ ಬೋರ್ಡ್‌ 2 ಗಂಟೆ 22 ನಿಮಿಷ ಅವಧಿ ಯ ʼಬ್ಯಾಡ್‌ ನ್ಯೂಸ್‌ʼ ಗೆ ʼಯುಎʼ ಸರ್ಟಿಫಿಕೇಟ್‌ ನೀಡಿದೆ.

ಅಂದ್ಹಾಗೇ ಬ್ಯಾಡ್ ನ್ಯೂಸ್ ಚಿತ್ರದ 'ತೌಬಾ ತೌಬಾ' ಹಾಡಿಗೆ ಯುವ ಸಮುದಾಯ ಹುಚ್ಚೆದ್ದಿದೆ. ಕಂಡ..ಕಂಡಲ್ಲಿ.. ಈ ಹಾಡಿಗೆ ರೀಲ್ಸ್ ಕೂಡ ಮಾಡುತ್ತಿದೆ. ಕೇವಲ ಜನಸಾಮಾನ್ಯರಷ್ಟೇ ಅಲ್ಲ ತಾರೆಯರು ಕೂಡ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಮೊನ್ನೆ ಮೊನ್ನೆ ನಡೆದ ಅನಂತ್ ಅಂಬಾನಿ ಮದ್ವೆಯಲ್ಲಿ ಕೂಡ ಬಾಲಿವುಡ್ ಸ್ಟಾರ್ಸ್ ʻತೌಬಾ ತೌಬಾʼ ಹುಕ್‌ ಸ್ಟೆಪ್ಸ್‌ಗೆ ಡ್ಯಾನ್ಸ್ ಮಾಡಿ ಕೇಕೆ ಹೊಡೆದಿದ್ದಾರೆ.

ಇನ್ನೂ.. ಬಾಲಿವುಡ್ ಮಾತ್ರ ಅಲ್ಲ, ಸ್ಯಾಂಡಲ್ವುಡ್ ಸುಂದರಿ ರೀಷ್ಮಾ ನಾಣಯ್ಯ ಕೂಡ ತೌಬಾ ತೌಬಾ ಅಂದಿದ್ದಾರೆ. ಅಬುಧಾಬಿಯಲ್ಲಿನ 42 ಡಿಗ್ರಿ ತಾಪಮಾನಕ್ಕೆ ಹೈರಾಣಾಗಿ 'ತೌಬಾ ತೌಬಾ' ಎನ್ನಬೇಕಾಯಿತು ಎಂಬ ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೀಷ್ಮಾ ನಾಣಯ್ಯ ಹಂಚಿಕೊಂಡಿದ್ಧಾರೆ.

ತೌಬಾ ತೌಬಾ ಹೊರತು ಪಡಿಸಿದರೆ ಇತ್ತೀಚೆಗಷ್ಟೇ ಚಿತ್ರದ ʼಜಾನಂʼ ಹಾಡು ರಿಲೀಸ್‌ ಆಗಿದೆ. ಈ ಹಾಡಿನಲ್ಲಿ ವಿಕ್ಕಿ ಕೌಶಲ್‌ ಹಾಗೂ ತೃಪ್ತಿ ದಿಮ್ರಿ ಮೈಚಳಿ ಬಿಟ್ಟು ಕುಣಿದಿದ್ದಾರೆ. ತೃಪ್ತಿ ಹಾಟ್‌ ಲುಕ್‌ ನಲ್ಲಿ ಪಡ್ಡೆ ಹೈಕಳ ಕಣ್ಮನ ಸೆಳೆದಿದ್ದಾರೆ. ಆನಂದ್ ತಿವಾರಿ ನಿರ್ದೇಶನದ ʼಬ್ಯಾಡ್‌ ನ್ಯೂಸ್‌ʼ ಚಿತ್ರದಲ್ಲಿ ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ, ಮತ್ತು ಆಮಿ ವಿರ್ಕ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X