For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯದ ಸವಿನೆನಪಿಗೆ 75 ಅಪರೂಪದ ಚಿತ್ರಗಳು: ಕನ್ನಡದ ಮೂರು ಸಿನಿಮಾಗಳು ಪಟ್ಟಿಯಲ್ಲಿ

  |

  75ನೇ ವರ್ಷದ ಸ್ವಾತಂತ್ರ್ಯೋತ್ಸದ ಸವಿನೆನಪಿಗಾಗಿ ಭಾರತದ ವಿವಿಧ ಭಾಷೆಗಳ 75 ಅತ್ಯದ್ಭುತ ಮತ್ತು ಐತಿಹಾಸಿಕ ಸಿನಿಮಾಗಳ ಪೋಸ್ಟರ್‌ಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಪ್ರದರ್ಶಿಸುತ್ತಿದೆ. 'ಚಿತ್ರಾಂಜಲಿ 75' ಹೆಸರಿನಲ್ಲಿ ಪುಣೆಯ ರಾಷ್ಟ್ರೀಯ ಸಿನಿಮಾ ಸಂಗ್ರಹಾಲಯದಲ್ಲಿ ಸಿನಿಮಾಗಳ ವರ್ಚ್ಯುಲ್ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ.

  ಭಾರತೀಯ ಸ್ವಾತಂತ್ರ್ಯ ಸಂಗ್ರಾಮ, ತ್ಯಾಗ ಬಲಿದಾನ, ಸಮಾಜ ಸುಧಾರಣೆ ಮತ್ತು ಸೈನಿಕರಿಗೆ ಗೌರವ ಎಂಬ ವಿಭಾಗಗಳಲ್ಲಿ ಸಿನಿಮಾಗಳನ್ನು ಸಂಗ್ರಹಕ್ಕೆ ಆಯ್ಕೆ ಮಾಡಿಕೊಂಡಿದ್ದು, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನಿರ್ಮಿಸಲಾದ ಮೊದಲ ಸಿನಿಮಾ ಎನಿಸಿಕೊಂಡಿರುವ 'ಭಕ್ತ ವಿಧುರ' ಸಿನಿಮಾದ ಪೋಸ್ಟರ್‌ನಿಂದ ಹಿಡಿದು ಇತ್ತೀಚೆಗೆ ಸ್ವಾತಂತ್ರ್ಯ ಹೊರಾಟದ ಕತೆಯನ್ನು ಹೊಂದಿ ನಿರ್ಮಿಸಲ್ಪಟ್ಟ ಸಿನಿಮಾದವರೆಗೂ ಒಟ್ಟು 75 ವಿಶೇಷ ಸಿನಿಮಾಗಳ ಪೋಸ್ಟರ್‌ ಅನ್ನು ಹೆಕ್ಕಿ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.

  'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಐಕಾನಿಕ್ ಸಪ್ತಾಹವನ್ನು ಆಚರಿಸುತ್ತಿದ್ದು, ಅದರ ಭಾಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರಿ ಅನುರಾಗ್ ಸಿಂಗ್ ಠಾಕೂರ್ ಪ್ರದರ್ಶನವನ್ನು ಉದ್ಘಾಟಿಸಿ, ಭಾರತೀಯ ಸಿನಿಮಾ ದೇಶದ ಒಂದು ಮೃದು ಶಕ್ತಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಒಂದು ಹೆಗ್ಗರುತು ತಂದುಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

  ಕನ್ನಡದ ಮೂರು ಸಿನಿಮಾಗಳ ಪೋಸ್ಟರ್‌ ಚಿತ್ರಾಂಜಲಿ 75ರಲ್ಲಿ ಸೇರಿಸಲಾಗಿದೆ. 1961ರಲ್ಲಿ ಬಿಡುಗಡೆ ಆದ ಡಾ.ರಾಜ್‌ಕುಮಾರ್ ನಟಿಸಿದ್ದ 'ಕಿತ್ತೂರ ರಾಣಿ ಚೆನ್ನಮ್ಮ', 1967ರಲ್ಲಿ ಬಿಡುಗಡೆ ಆದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ', 1977ರಲ್ಲಿ ಬಿಡುಗಡೆ ಆದ 'ಕನ್ನೇಶ್ವರ ರಾಮ' ಈ ಸಿನಿಮಾದಲ್ಲಿ ಅನಂತ್ ನಾಗ್ ಹಾಗೂ ಶಬಾನಾ ಅಜ್ಮಿ ನಟಿಸಿದ್ದರು. ಸಿನಿಮಾವನ್ನು ಎಂಎಸ್ ಸತ್ಯು ನಿರ್ದೇಶನ ಮಾಡಿದ್ದರು.

  ಪಟ್ಟಿಯಲ್ಲಿ ತೆಲುಗಿನ ಆರು ಸಿನಿಮಾಗಳ ಪೋಸ್ಟರ್‌ಗಳು, ತಮಿಳಿನ ಎಂಟು ಸಿನಿಮಾಗಳ ಪೋಸ್ಟರ್, ಹಿಂದಿ ಭಾಷೆಯ 38 ಸಿನಿಮಾಗಳ ಪೋಸ್ಟರ್‌ಗಳು, ಮಲಯಾಳಂನ ಮೂರು ಸಿನಿಮಾಗಳ ಪೋಸ್ಟರ್‌ಗಳು, ಮರಾಠಿಯ ಆರು ಸಿನಿಮಾಗಳ ಪೋಸ್ಟರ್‌ಗಳನ್ನು ಸೇರಿಸಲಾಗಿದೆ.

  ಪ್ರದರ್ಶನದಲ್ಲಿ ಕೆಲವೊಂದು ಪ್ರಮುಖ ಚಿತ್ರಗಳು ಹೀಗಿವೆ
  1857 (ಹಿಂದಿ, 1946)- ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಸುರೇಂದ್ರ ಮತ್ತು ಸುರೈಯ್ಯಾರನ್ನು ಒಳಗೊಂಡ ಐತಿಹಾಸಿಕ ಕಾಲ್ಪನಿಕ ಚಿತ್ರ.
  42' ಎ.ಕೆ.ಎ.ಬಿಯಾಲಿಷ್ (ಬಂಗಾಳಿ, 1949)- 1942ರ ಅವಧಿಯಲ್ಲಿ ಭಾರತದಲ್ಲಿ ಪ್ರಕ್ಷುಬ್ಧ ಸ್ಥಿತಿಗತಿಯ ವಿವರವನ್ನು ನೀಡುವ ಚಿತ್ರ.
  ಪಿಯೋಲಿ ಫುಕನ್ (ಅಸ್ಸಾಂ, 1955) - ಅಸ್ಸಾಂನ ಐತಿಹಾಸಿಕ ಪಾತ್ರದ ಜೀವನ ಮತ್ತು ಹೋರಾಟವನ್ನು ಆಧರಿಸಿದ, ಬ್ರಿಟಿಷ್ ಆಕ್ರಮಣದ ವಿರುದ್ಧ ಬಂಡಾಯವೆದಿದ್ದ ಬದಾನ್ ಬೋರ್ಪುಕಾನ್ ಅವರ ಮಗ ಪಿಯೋಲಿ ಫುನಕ್ ಅವರ ಕುರಿತ ಚಿತ್ರ. ಅವರನ್ನು 1830ರಲ್ಲಿ ಜೋರಾಹಟ್ ನಲ್ಲಿ ಗಲ್ಲಿಗೇರಿಸಲಾಗಿತ್ತು.
  ಕಾಡು ಮಾರ್ಕನಿ (ಗುಜರಾತಿ, 1960) - ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಿದ್ದ ಪೂರ್ವದ ರಾಬಿನ್ ಹುಡ್ ನ ಕಾಥಿಯಾವಾಡದ ಕಾಡು ಮರ್ಕಾನಿಗೆ ಗೌರವ ಸಲ್ಲಿಸುವ ಚಿತ್ರ.
  ಕಿತ್ತೂರು ರಾಣಿ ಚೆನ್ನಮ್ಮ (ಕನ್ನಡ, 1961) - ಕನ್ನಡ ಭಾಷೆಯ ಐತಿಹಾಸಿಕ ಚಲನಚಿತ್ರ. 1824ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಬಂಡಾಯವೆದ್ದಿದ್ದ ಕಿತ್ತೂರು ಚೆನ್ನಮ್ಮನ ಪಾತ್ರದಲ್ಲಿ ಬಿ.ಸರೋಜಾದೇವಿ ನಟಿಸಿದ್ದ ಈ ಚಿತ್ರವನ್ನು ಬಿ.ಆರ್. ಪಂಥುಲು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು.
  ಪದಂಡಿ ಮುಂದಕು (ತೆಲುಗು, 1962) - ಮಹಾತ್ಮಗಾಂಧೀಜಿ ಅವರ ದಂಡಿ ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಸ್ವಾತಂತ್ರ್ಯ ಚಳವಳಿಯನ್ನು ಮುಖ್ಯ ಕತೆಯನ್ನಾಗಿಟ್ಟುಕೊಂಡು ವಿ.ಮಧುಸೂಧನ್ ರಾವ್ ನಿರ್ದೇಶಿಸಿದ ರಾಜಕೀಯ ಚಿತ್ರ.
  ಹಕೀಖತ್ (ಹಿಂದಿ, 1964) - ಚೇತನ್ ಆನಂದ್ ನಿರ್ಮಿಸಿದ ಮತ್ತು ನಿರ್ದೇಶಿಸಿ ಯುದ್ಧದ ಚಿತ್ರ. ಇದರಲ್ಲಿ ಧರ್ಮೇಂದ್ರ, ಬಾಲರಾಜ್ ಸಾಹ್ನಿ, ಪ್ರಿಯಾ ರಾಜ್ ವಂಶ್, ಸುಧೀರ್, ಸಂಜಯ್ ಖಾನ್ ಮತ್ತು ವಿಜಯ್ ಆನಂದ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
  ಸುಭಾಷ್ ಚಂದ್ರ (ಬಂಗಾಳಿ, 1966) - ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಆಧರಿಸಿದ ಪೌರಾಣಿಕ ಚಿತ್ರವನ್ನು ಪಿಜೂಷ್ ಬೋಸ್ ನಿರ್ದೇಶಿಸಿದ್ದರು.
  ಶಾಹೀದ್ ಇ-ಅಜಂ ಭಗತ್ ಸಿಂಗ್ (ಪಂಜಾಬಿ, 1974) - ಓಂ ಬೇಡಿ ನಿರ್ದೇಶಿಸಿದ್ದ ಶಾಹೀದ್ ಭಗತ್ ಸಿಂಗ್ ಅವರ ಚಿತ್ರ ಜೀವನ ಆಧರಿಸಿದ ಚಿತ್ರ,
  22 ಜೂನ್ 1897 (ಮರಾಠಿ, 1979) - 1987ರಲ್ಲಿ ಪುಣೆಯಲ್ಲಿ ಚಾಪೇಕರ್ ಸಹೋದರರಿಂದ ಬ್ರಿಟಿಷ್ ಅಧಿಕಾರಿಗಳಾದ ವೋಲ್ಟಾರ್ ಚಾರ್ಲ್ ರಾಂಡ್ ಮತ್ತು ಚಾರ್ಲ್ಸ್ ಎಗೆರ್ಟನ್ ಆಯರ್ಸ್ಟ್ ಅವರನ್ನು ಹತ್ಯೆ ಗೈಯ್ದ ನೈಜ ಕತೆಯನ್ನು ಆಧರಿಸಿದ ಪ್ರಶಸ್ತಿ ವಿಜೇತ ಚಿತ್ರ.
  ಗಾಂಧಿ (ಇಂಗ್ಲೀಷ್/ಹಿಂದಿ, 1982) -ವಿಶ್ವದಾದ್ಯಂತ ಮೆಚ್ಚುಗೆ ಪಡೆದ ಬೆನ್ ಕಿಂಗ್ಸಲೇ ಮಹಾತ್ಮಾ ಗಾಂಧಿ ಪಾತ್ರದಲ್ಲಿ ನಟಿಸಿದ ರಿಚರ್ಡ್ ಅಟೆನ್ ಬರೋ ನಿರ್ದೇಶಿಸಿದ ಜೀವನ ಚಿತ್ರ. ಈ ಚಿತ್ರ 11 ನಾಮನಿರ್ದೇಶನಗಳ ಪೈಕಿ 9 ಅಕಾಡೆಮಿ ಪ್ರಶಸ್ತಿ (ಆಸ್ಕರ್) ಗಳನ್ನು ಗೆದ್ದಿತ್ತು.
  ಡಾ. ಅಂಬೇಡ್ಕರ್ (ತೆಲುಗು, 1992) - ಭಾರತ್ ಪಾರೆಪಲ್ಲಿ ನಿರ್ದೇಶಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಚಿತ್ರ.
  ಕಾಲಾಪಾನಿ (ಮಲೆಯಾಳಂ, 1996) - ಐತಿಹಾಸಿಕ ಸಿನಿಮಾವನ್ನು ರಚನೆ ಮಾಡಿ ನಿರ್ದೇಶಿಸಿದ್ದು ಪ್ರಿಯದರ್ಶನ್. ಬ್ರಿಟಿಷ್ ಆಳ್ವಿಕೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕಾರಾಗೃಹದಲ್ಲಿ (ಅಥವಾ ಕಾಲಾಪಾನಿಯಲ್ಲಿ) ಬಂಧಿತರಾಗಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಕೇಂದ್ರೀಕರಿಸಿ ಮಾಡಲಾದ ಚಿತ್ರ.
  ಲೋಕಮಾನ್ಯ: ಏಕ್ ಯುಗಪುರುಷ್ (ಮರಾಠಿ, 2015). ಸಮಾಜ ಸುಧಾರಕ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಸ್ವಾತಂತ್ರ್ಯ ಯೋಧ ಬಾಲ ಗಂಗಾಧರ ತಿಲಕರ ಜೀವನ ಕತೆಯನ್ನು ಬಿಂಬಿಸುತ್ತದೆ. ಇದರಲ್ಲಿ ಸುಬೋಧ್ ಭಾವೆ ತಿಲಕರ ಪಾತ್ರದಲ್ಲಿ ನಟಿಸಿದ್ದರು.

  English summary
  central government inaugurates making of the constitution and chitranjali at 75 exhibitions. Three Kannada movies poster is in exhibition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X