ಚಿತ್ರರಂಗಕ್ಕೆ ಮತ್ತೊಂದು ಆಘಾತ ; ಚಕ್ ದೇ ಇಂಡಿಯಾ ಖ್ಯಾತಿಯ ಹಿರಿಯ ನಟ ರಮಾಕಾಂತ್ ದಯಾಮಾ ನಿಧನ

ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಧರ್ಮೇಂದ್ರ.. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಸತೀಶ್ ಶಾ.. ಗೋವರ್ಧನ್ ಅಸ್ರಾನಿ.. ಅಭಿನಯ್.. ಝರೀನ್ ಖಾನ್..ಕಾಮಿನಿ ಕೌಶಾಲ್.. ಆಶಾ ಭೋಸ್ಲೆ.. ಭರತ್ ಕಪೂರ್.. ಭರತ್ ಕಾಂತ್.. ಕೆ.ರಾಜನ್.. ದಿಲೀಪ್ ರಾಜ್..

ಹೀಗೆ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಚಿತ್ರರಂಗ ಕಳೆದ ಒಂದೂವರೆ ಎರಡು ವರ್ಷಗಳಲ್ಲಿ ಕಳೆದುಕೊಂಡಿದೆ. ಹೀಗಿರುವಾಗ ಇಂದು (ಮೇ 26) ಹಿಂದಿ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು, ಬಾಲಿವುಡ್‌ನ ಖ್ಯಾತ ಪೋಷಕ ನಟ ರಮಾಕಾಂತ್ ದಯಾಮ (69) ಕೊನೆಯುಸಿರೆಳೆದಿದ್ದಾರೆ.

Chak De India amp amp Scam 1992 Actor Ramakant Dayama Passes Away At 69 After Prolonged Illness

ರಮಾಕಾಂತ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಈ ಹಿರಿಯ ನಟನ ಅಗಲಿಕೆಗೆ ಬಾಲಿವುಡ್ ಚಿತ್ರರಂಗ, ಕಿರುತೆರೆ ಮತ್ತು ರಂಗಭೂಮಿ ಲೋಕ ತೀವ್ರ ಕಂಬನಿ ಮಿಡಿದಿದೆ.

ಶಾರುಖ್ ಖಾನ್ ಅಭಿನಯದ ''ಚಕ್ ದೇ ಇಂಡಿಯಾ'' (2007) ಚಿತ್ರದ ಮೂಲಕ ಚಿರಪರಿಚಿತರಾಗಿದ್ದ ರಮಾಕಾಂತ್, ಈ ಚಿತ್ರದಲ್ಲಿ ಅವರು ಇಂಡಿಯನ್ ಹಾಕಿ ಫೆಡರೇಶನ್‌ನ ಪ್ರಮುಖ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರು.

ಇದಲ್ಲದೇ ಹಂಸಲ್ ಮೆಹ್ತಾ ನಿರ್ದೇಶನದ ಭಾರತದ ಅತ್ಯುತ್ತಮ ವೆಬ್ ಸರಣಿಯಲ್ಲಿ ಒಂದಾದ ''ಸ್ಕ್ಯಾಮ್ 1992: ದಿ ಹರ್ಷದ್ ಮೆಹ್ತಾ ಸ್ಟೋರಿ''ಯಲ್ಲಿ ಕೂಡ ರಮಾಕಾಂತ್ ಅಭಿನಯಿಸಿದ್ದರು. ಹರ್ಷದ್ ಮೆಹ್ತಾ ತಂದೆ 'ಶಾಂತಿಲಾಲ್ ಮೆಹ್ತಾ' ಪಾತ್ರಕ್ಕೆ ಜೀವ ತುಂಬಿದ್ದರು.

''ರಾಮ್ ಸೇತು''.. ''ಬ್ರದರ್ಸ್''.. ''ಪಾ''.. ''ಶುದ್ಧ್ ದೇಸಿ ರೊಮ್ಯಾನ್ಸ್''.. ''ಕ್ರೂ''.. ''ಹಮ್‌ಶಕಲ್ಸ್''.. ಇವರ ಕೆಲ ಜನಪ್ರಿಯ ಚಿತ್ರಗಳು. ''ಫರ್ಜಿ''.. ''ದಿ ಟ್ರಯಲ್'' ಸೇರಿ ಹಲವು ವೆಬ್ ಸರಣಿಗಳಲ್ಲಿ ಕೂಡ ಅಭಿನಯಿಸಿದ್ದ ರಮಾಕಾಂತ್ ದಯಾಮಾ ಸಿನೆಮಾ ಮತ್ತು ಟಿವಿ ಕಲಾವಿದರ ಸಂಘದ (CINTAA) ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಕೂಡ ಸೇವೆ ಸಲ್ಲಿಸಿದ್ದರು.

Chak De India amp amp Scam 1992 Actor Ramakant Dayama Passes Away At 69 After Prolonged Illness

ಪಾತ್ರ ಚಿಕ್ಕದಿರಲಿ, ದೊಡ್ಡದಿರಲಿ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ರಮಾಕಾಂತ್ ದಯಾಮಾ, ತಮ್ಮ ಅಭಿನಯದ ಮೂಲಕ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದರು.

ತಂದೆಯ ಜಾಡನ್ನು ಹಿಡಿದು ಇವರ ಮಗಳು ಯಶಸ್ವಿನಿ ಕೂಡ ಚಿತ್ರರಂಗಕ್ಕೆ ಬಂದಿದ್ದು, ''ಡಿಯರ್ ಜಿಂದಗಿ''.. ''ಬಂದೀಶ್ ಬ್ಯಾಂಡಿಟ್ಸ್‌'' ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕೂಡ ಗುರುತಿಸಿಕೊಂಡಿದ್ದಾರೆ.

ರಮಾಕಾಂತ್ ದಯಾಮಾ ಅವರ ನಿಧನದಿಂದ ಚಿತ್ರರಂಗದ ಹಲವರು ಭಾವುಕರಾಗಿದ್ದು, ಅವರ ಆಪ್ತ ಗೆಳತಿ ಸಹ-ನಟಿ ಶುಭಾಂಗಿ ಲಾಟ್ಕರ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಬರಹ ಹಂಚಿಕೊಂಡಿದ್ದಾರೆ.
ರಮಾಕಾಂತ್ ದಯಾಮಾ ಹಾಡುತ್ತಾ, ನೃತ್ಯ ಮಾಡುತ್ತಾ ನಗುತ್ತಿರುವ ಹಳೆಯ ವೀಡಿಯೊವನ್ನು ಹಂಚಿಕೊಂಡಿರುವ ಶುಭಾಂಗಿ, ಇಂದು ನಾವು ನಿಜವಾದ ಸುಂದರ ಆತ್ಮವನ್ನು ಕಳೆದುಕೊಂಡಿದ್ದೇವೆ, ನನಗೆ ಮಾತನಾಡಲು ಮಾತುಗಳೇ ಬರುತ್ತಿಲ್ಲ... ಅವರು ನೋಡಲು ಸಣ್ಣ ಶರೀರವನ್ನು ಹೊಂದಿದ್ದರೂ, ನನ್ನ ಜೀವನದಲ್ಲಿ ನಾನು ಕಂಡ ಅತ್ಯಂತ ಬಲವಾದ ಮತ್ತು ಧೈರ್ಯಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಎಂದು ಬರೆದುಕೊಂಡಿದ್ದಾರೆ.

ರಮಾಕಾಂತ್ ಅವರು ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆಂದು ತಿಳಿದಿದ್ದರೂ, ಅವರ ಚೇತರಿಕೆ ಕುರಿತು ಆಶಾಭಾವನೆ ಇತ್ತು ಎಂದಿರುವ ಶುಭಾಂಗಿ, ನಮ್ಮಲ್ಲಿ ಇನ್ನೂ ಅನೇಕ ಅಪೂರ್ಣ ಕನಸುಗಳಿದ್ದವು. ಹಲವಾರು ವರ್ಷಗಳ ನಂತರ, ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ನಾನು ಹಾತೊರೆಯುತ್ತಿದ್ದೆ. ಅದರಂತೆ, ನಾವು ಒಟ್ಟಾಗಿ ಒಂದು ಸುಂದರ ಹಿಂದಿ ನಾಟಕವನ್ನು ಮಾಡುವ ನಿರ್ಧಾರಕ್ಕೆ ಬಂದಿದ್ದೆವು ಎಂದಿದ್ದಾರೆ. ಅವರಲ್ಲಿ ಈ ಬಗ್ಗೆ ಕೇಳಿದಾಗ, ಅವರು ಮುಗುಳ್ನಕ್ಕು ನನಗೆ ಮೊದಲು ಹುಷಾರಾಗಲು ಬಿಡು, ಆಮೇಲೆ ಮಾಡೋಣ ಎಂದಿದ್ದರು ಎಂದು ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.

English summary
The entertainment industry mourns the heartbreaking loss of ‘Chak De! India’ star Ramakant Dayama, who passed away at 69. Co-stars pay moving tributes.
Read more about: death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X