ಸಿತಾರೆ ಜಮೀನ್ ಪರ್ ಪ್ರದರ್ಶನದ ವೇಳೆ ಆ ವ್ಯಕ್ತಿಯನ್ನು ಕಂಡು ಹೆದರಿ ಬೆಚ್ಚಿ ಬಿದ್ದ ಸಲ್ಮಾನ್ ಖಾನ್ !

ಕೇಳೊದಕ್ಕೆ ಇದು ವಿಚಿತ್ರವಾದ ಕಥೆ. ಆದ್ರೆ ಸತ್ಯಕಥೆ. ಈ ಸತ್ಯಕಥೆಯ ನಾಯಕ ಸಲ್ಮಾನ್ ಖಾನ್ ಆದರೆ, ಖಳನಾಯಕ ಲಾರೆನ್ಸ್ ಬಿಷ್ಣೋಯ್. ಈ ಕಥೆಯಲ್ಲಿ ಯಾವತ್ತು ಏನಾಗುತ್ತೆ ಅನ್ನುವುದು ಸದ್ಯಕ್ಕೆ ನಿಗೂಢವಾದರೂ, ಸದ್ಯಕ್ಕೆ ಸಲ್ಮಾನ್ ಖಾನ್ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವುದು ಸುಳ್ಳಲ್ಲ. ಅದರಲ್ಲಿಯೂ ಅತ್ಯಾಪ್ತರಾಗಿದ್ದ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್ ವಿಚಲಿತರಾಗಿದ್ದಾರೆ.

ಯಾವತ್ತು ಎಲ್ಲಿಂದ ಯಾರು ಬಂದು ತನ್ನ ಮೇಲೆ ಹಲ್ಲೆ ಮಾಡುತ್ತಾರೋ ಏನೋ ಎನ್ನುವ ಯೋಚನೆಯಲ್ಲಿಯೇ ಸಲ್ಮಾನ್ ಖಾನ್ ಓಡಾಡುತ್ತಿದ್ದಾರೆ. ತಮ್ಮ ಸುತ್ತ ಮುತ್ತ ಭದ್ರಕೋಟೆಯನ್ನೇ ನಿರ್ಮಾಣ ಮಾಡಿದ್ದಾರೆ. ಆದರೂ ಕೂಡ ಭಯ ಇದ್ದೇ ಇದೆ. ಇದಕ್ಕೆ ಸಿತಾರೆ ಜಮೀನ್ ಪರ್ ಚಿತ್ರದ ವಿಶೇಷ ಪ್ರದರ್ಶನ ಸಮಯದಲ್ಲಿ ಆದ ಘಟನೆಯೇ ಸದ್ಯದ ಉದಾಹರಣೆ.

Chaos at Sitaare Zameen Par Screening Man Tries to Approach Salman Khan

ಹೌದು, ಅಸಲಿಗೆ ಆಮಿರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್‌' ಚಿತ್ರ ಇಂದು { ಜೂನ್ 20 } ಬಿಡುಗಡೆಯಾಗಿದೆ. ಆದರೆ ತಮ್ಮ ಕನಸಿನ ಚಿತ್ರವನ್ನು ತನ್ನ ಉದ್ಯಮದ ಸ್ನೇಹಿತರಿಗೆ ಮೊದಲು ತೋರಿಸಬೇಕೆನ್ನುವ ಉದ್ದೇಶದಲ್ಲಿ ಆಮಿರ್ ಖಾನ್ ಇತ್ತೀಚೆಗೆ ಈ ಚಿತ್ರದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು.

ಈ ವಿಶೇಷ ಪ್ರದರ್ಶನಕ್ಕೆ ತಮ್ಮ ಅಹಂಕಾರವನ್ನೆಲ್ಲ ಬದಿಗಿಟ್ಟು ಬಾಲಿವುಡ್‌ನ ಅನೇಕ ತಾರೆಯರು ಬಂದಿದ್ದರು. ಆ ಪೈಕಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಪ್ರಮುಖರು. ಈ ವೇಳೆ ಸ್ನೇಹಕ್ಕೆ ತಲೆ ಬಾಗಿ ಚಿತ್ರ ನೋಡಲು ಬಂದಿದ್ದ ಸಲ್ಮಾನ್ ಖಾನ್ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಸ್ನೇಹಿತ ಆಮಿರ್ ಖಾನ್ ಅವರ ಕಾಲೆಳೆದರು. ತಾವು ನಕ್ಕು ಅಲ್ಲಿದ್ದ ಎಲ್ಲರನ್ನು ನಗಿಸಿದರು.

ಇದೇ ಸಮಯದಲ್ಲಿ ಪ್ರೀಮಿಯರ್ ಶೋ ಮುಗಿಸಿ ಸಲ್ಮಾನ್‌ ಖಾನ್ ಹೊರ ಬರುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್ ಅವರತ್ತ ಓಡೋಡಿ ಬಂದಿದ್ದಾನೆ. ಸ್ಟೆಪ್‌ಗಳನ್ನು ಹತ್ತಿ ಸಲ್ಮಾನ್ ಖಾನ್ ಬಳಿ ಹೋಗುವ ಪ್ರಯತ್ನ ಮಾಡಿದ್ದಾನೆ. ಅದ್ಯಾಗೂ ಸಲ್ಮಾನ್ ಖಾನ್ ಅದೃಷ್ಟ, ಆ ವ್ಯಕ್ತಿಯನ್ನು ಸಲ್ಮಾನ್ ಖಾನ್ ಅವರ ಅಂಗರಕ್ಷಕರು ತಡೆದಿದ್ದಾರೆ. ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಲವಾರು ಅಭಿಪ್ರಾಯಗಳು ಖೂಡ ಈ ವಿಡಿಯೋಗೆ ವ್ಯಕ್ತವಾಗುತ್ತಿವೆ. ಹಲವರು ಅಪರಿಚಿತ ವ್ಯಕ್ತಿಯನ್ನು ಕಂಡು ಸಲ್ಮಾನ್ ಖಾನ್ ಹೆದರಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇನ್ನುಳಿದಂತೆ ಸಲ್ಮಾನ್ ಖಾನ್ ಅವರ ಸುತ್ತ ಮುತ್ತ ಮೊದಲಿಂದ ಬೌನ್ಸರ್‌ಗಳ ದಂಡು ಇರುತ್ತಿತ್ತು. ಭದ್ರತೆ ಹೆಚ್ಚಿತ್ತು. ಆ ಭದ್ರತೆ ಬಾಬಾ ಸಿದ್ದಿಕಿಯ ನಂತರ ಈಗ ಇನ್ನೂ ಹೆಚ್ಚಾಗಿದೆ. ಸದ್ಯಕ್ಕೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಸಲ್ಮಾನ್ ಖಾನ್‌ ಸುತ್ತ ಸರ್ಪಗಾವಲಿದೆ. ಹತ್ ಹತ್ರ 60 ಜನರಿಗೆ ಸಲ್ಮಾನ್ ಖಾನ್ ಪ್ರಾಣ ಉಳಿಸುವ ಜವಾಬ್ಧಾರಿಯನ್ನು ನೀಡಲಾಗಿದೆ.ಆದರೂ ಕೂಡಾ ಸಲ್ಮಾನ್ ಖಾನ್‌ಗೆ ನೆಮ್ಮದಿ ಇಲ್ಲ. ಹೋದಲ್ಲಿ ಬಂದಲ್ಲಿ ಇವತ್ತು ಕೂಡ ಸಲ್ಮಾನ್ ಖಾನ್‌ ಪ್ರಾಣ ಭಯದಲ್ಲಿಯೇ ಓಡಾಡುತ್ತಿದ್ದಾರೆ.

ಈ ವಿಚಾರ ಹೊರತು ಪಡಿಸಿದರೆ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಜೊತೆಯಲ್ಲಿ ಅಭಿನಯಿಸಿದ್ದ ಏಕೈಕ ಚಿತ್ರ ಅಂದರೆ ಅದು ಅಂದಾಜ್ ಅಪ್ನಾ ಅಪ್ನಾ. ಮೂರು ದಶಕದ ಹಿಂದೆ ತೆರೆಗೆ ಬಂದಿದ್ದ ಈ ಚಿತ್ರ ಆ ಕಾಲದಲ್ಲಿ ಮೋಡಿ ಮಾಡಿತ್ತು. ಇಬ್ಬರ ವೃತ್ತಿ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿತ್ತು. ಅಲ್ಲಿಂದ ಸ್ನೇಹಿತರಾದ ಇಬ್ಬರು ಆ ನಂತರ ವೈರಿಗಳಾದರು. ಆದರೆ ಆ ನಂತಗರ ವಯಸ್ಸಾದಂತೆ ಮಾಗಿದ ಇಬ್ಬರು ಮತ್ತೆ ಒಂದಾದರು. ಹಳೆಯ ಘಟನೆಗಳನ್ನೆಲ್ಲ ಮರೆತು ಸ್ನೇಹಿತರಾದರು. ಆ ಸ್ನೇಹಕ್ಕೆ ಬೆಲೆ ಕೊಟ್ಟು ಸಲ್ಮಾನ್ ಖಾನ್ ತಮ್ಮ ಎಲ್ಲ ಕೆಲಸ ಬದಿಗಿಟ್ಟು ಸಿತಾರೆ ಜಮೀನ್ ಪರ್ ಚಿತ್ರದ ವಿಶೇಷ ಪ್ರದರ್ಶನಕ್ಕೆ ಬಂದಿದ್ದರು.

More from Filmibeat

English summary
At the 'Sitaare Zameen Par' movie show, Salman Khan had a surprising moment. A man quickly tried to get too close to him, which made Salman a bit startled. You can watch the video to see what happened.
Read more about: salman khan threat bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X