ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ನೀಲಿ ಚಿತ್ರ ನಿರ್ಮಿಸಿದ್ದರು: ಪೊಲೀಸ್ ಆರೋಪ

ನೀಲಿ ಚಿತ್ರ ನಿರ್ಮಾಣ ಹಾಗೂ ಹಂಚಿಕೆ ಪ್ರಕರಣದಲ್ಲಿ ಜೈಲು ಪಾಲಾಗಿ ಇದೀಗ ಜಾಮೀನಿನ ಮೇಲೆ ಹೊರಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಮತ್ತೊಂದು ಆಘಾತ ಎದುರಾಗಿದೆ. ರಾಜ್ ಕುಂದ್ರಾ ಹಾಗೂ ಇನ್ನು ಕೆಲವರು ನೀಲಿ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು ಎಂದು ಮಹಾರಾಷ್ಟ್ರ ಸೈಬರ್ ಪೊಲೀಸ್ ಇಲಾಖೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಗ್ಲಾಮರಸ್ ನಟಿಯರಾದ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ, ರಾಜ್ ಕುಂದ್ರಾ, ನಿರ್ಮಾಪಕಿ ಮೀತಾ ಜುಂಜುನ್‌ವಾಲಾ, ಕ್ಯಾಮೆರಾಮನ್ ರಾಜು ದುಬೆ ಇನ್ನು ಕೆಲವರು ಸೇರಿ ನೀಲಿ ಚಿತ್ರ ನಿರ್ಮಾಣ ಮಾಡಿ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಸೈಬರ್ ಪೊಲೀಸರು ಸಲ್ಲಿಸಿರುವ 450 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದ್ದಾರೆ. ಅದಕ್ಕೆ ಸೂಕ್ತ ಸಾಕ್ಷ್ಯಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ರಾಜ್ ಕುಂದ್ರಾ ಮುಂಬೈನ ಎರಡು ಫೈವ್ ಸ್ಟಾರ್‌ ಹೋಟೆಲ್‌ಗಳಲ್ಲಿ ಪೋರ್ನ್‌ ವಿಡಿಯೋಗಳನ್ನು ಚಿತ್ರೀಕರಿಸಿ ಅದನ್ನು ಬೇರೆ ಒಟಿಟಿಗಳಿಗೆ, ಅಪ್ಲಿಕೇಶನ್‌ಗಳಿಗೆ ಅಪ್‌ಲೋಡ್ ಮಾಡಿ ಹಣ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ರಾಜ್ ಕುಂದ್ರಾ ನಿರ್ಮಿಸಿರುವ ಪೋರ್ನ್‌ ವಿಡಿಯೋಗಳನ್ನು ಕಳೆದ ವಾರವೇ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.

Charge sheet Against Raj Kundra, Poonam Pandey and Many In Indecent Video Case

2021 ರಲ್ಲಿ ಪೊಲೀಸರು ಮುಂಬೈನ ಮಡ್‌ಐಲೆಂಡ್‌ನ ಬಂಗ್ಲೆಯೊಂದರ ಮೇಲೆ ದಾಳಿ ಮಾಡಿದ ಬಳಿಕ ಈ ನೀಲಿ ಚಿತ್ರಗಳ ದೊಡ್ಡ ಜಾಲದ ಸುಳಿವು ಸಿಕ್ಕಿತ್ತು. ಆ ಬಳಿಕ ಇದೇ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ಇನ್ನಿತರರ ಬಂಧನವಾಗಿತ್ತು.

ರಾಜ್ ಕುಂದ್ರಾ ತಮ್ಮ ಸಂಸ್ಥೆಯ ಮೂಲಕ ಅಶ್ಲೀಲ ವಿಡಿಯೋಗಳನ್ನು ಭಾರತದಲ್ಲಿ, ಭಾರತದ ನಟ-ನಟಿಯರನ್ನೇ ಬಳಸಿ ಚಿತ್ರೀಕರಣ ಮಾಡಿಸಿ ಅದನ್ನು ಲಂಡನ್‌ನ ತನ್ನದೆ ಸಂಬಂಧಿಯ ಒಡೆತನದ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್‌ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿ ದಿನವೊಂದಕ್ಕೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ರಾಜ್ ಕುಂದ್ರಾ ಬಂಧನ ಆದ ಬಳಿಕ ನಟಿಯರಾದ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಅವರುಗಳು ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಸರಣಿ ಆರೋಪಗಳನ್ನು ಮಾಡಿದರು. ಇದೇ ಸಮಯದಲ್ಲಿ ನಟಿ ಶಿಲ್ಪಾ ಶೆಟ್ಟಿ ವಿರುದ್ಧವೂ ಕೆಲವು ಮಾಧ್ಯಮಗಳು ಬರೆದಿದ್ದವು. ಆಗ ಕೆಲವು ಸಿನಿಮಾ ಸೆಲೆಬ್ರಿಟಿಗಳು ಶಿಲ್ಪಾ ಶೆಟ್ಟಿಯ ಪರ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

More from Filmibeat

English summary
Maharashtra Cyber police filed charge sheet against Shilpa Shetty's husband Raj Kundra, actress Poonam pandey, Sherlyn Chopra and others in indecent video case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X