2005ರ ರಾಜಮೌಳಿ ಚಿತ್ರವನ್ನು 25 ಕೋಟಿ ಖರ್ಚು ಮಾಡಿ ಈಗ ಹಿಂದಿಗೆ ರಿಮೇಕ್ ಮಾಡಿದ್ರೆ ಗಳಿಸಿದ್ದು ಕೇವಲ 2 ಕೋಟಿ!

ಚಿತ್ರವೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ಆ ಚಿತ್ರಕ್ಕೆ ರಿಮೇಕ್ ಬೇಡಿಕೆ ಬರುವುದು ಕಾಮನ್. ಆದರೆ ಈಗಿನ ಪ್ಯಾನ್ ಇಂಡಿಯಾ ಯುಗದಲ್ಲಿ ರಿಮೇಕ್ ರೈಟ್ಸ್ ಎಂಬುದು ಬಹುತೇಕ ಕಾಣೆಯಾಗಿಬಿಟ್ಟಿದೆ ಎಂದೇ ಹೇಳಬಹುದು.

ಹೌದು, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಗಟ್ಟಿಯಾದ ಬಳಿಕ ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಆಗುತ್ತಿದ್ದು, ಅವುಗಳನ್ನು ವೀಕ್ಷಿಸುತ್ತಿರುವ ಕಾರಣ ಅಂತಹ ಚಿತ್ರಗಳನ್ನು ರಿಮೇಕ್ ಮಾಡಿ ಉಪಯೋಗವಿಲ್ಲ. ಇನ್ನು ಲಾಕ್‌ಡೌನ್ ಬಳಿಕ ಡಬ್ ಆಗದಿದ್ದರೂ ಸಹ ಮೂಲ ಭಾಷೆಯಲ್ಲಿಯೇ ಚಿತ್ರಗಳನ್ನು ವೀಕ್ಷಿಸುವ ಹವ್ಯಾಸವನ್ನು ಹೆಚ್ಚಿನ ಸಿನಿ ರಸಿಕರು ಬೆಳೆಸಿಕೊಂಡಿರುವ ಕಾರಣ ರಿಮೇಕ್‌ಗೆ ಅಷ್ಟೇನೂ ಬೆಲೆ ಇಲ್ಲ ಎನ್ನಬಹುದು.

Chatrapathi Hindi remake failed at box office by collecting just 2.5 crores which made with 25 crores budget

ಹೀಗೆ ಪ್ಯಾನ್ ಇಂಡಿಯಾ ಅಲೆಯಲ್ಲಿ ರಿಮೇಕ್ ಪ್ರವೃತ್ತಿ ಕೊಚ್ಚಿ ಹೋಗಿರುವ ಕಾರಣ ರಿಮೇಕ್ ಚಿತ್ರಗಳನ್ನೇ ಹೆಚ್ಚಾಗಿ ಮಾಡುತ್ತಿದ್ದ ನಟರು ಹಾಗೂ ನಿರ್ದೇಶಕರು ಸೈಲೆಂಟ್ ಆಗಿಬಿಟ್ಟಿದ್ದಾರೆ. ಈಗೇನಿದ್ದರೂ ಹೊಸತನ ಇರುವ ಚಿತ್ರ ಮಾಡು ಗೆಲ್ಲು ಎಂಬ ನಿಯಮವನ್ನು ಪ್ರೇಕ್ಷಕರು ಸಿನಿ ರಸಿಕರಿಗೆ ನೀಡಿದ್ದಾರೆ.

ಅನೇಕರು ಇದಕ್ಕೆ ಹೊಂದಿಕೊಂಡು ಸ್ವಮೇಕ್ ಚಿತ್ರಗಳನ್ನು ಮಾತ್ರ ಮಾಡುತ್ತಿದ್ದರೆ, ಇನ್ನೂ ಕೆಲವರು ರಿಮೇಕ್ ಮಾಡುವ ಗೀಳು ಬಿಟ್ಟಿಲ್ಲ. ಆದರೆ ಪ್ರೇಕ್ಷಕ ಮಾತ್ರ ರಿಮೇಕ್ ಚಿತ್ರಗಳಿಗೆ ಸೊಪ್ಪು ಹಾಕುವುದಿಲ್ಲ ಎಂಬುದನ್ನು ಅನೇಕ ಬಾರಿ ಸಾಬೀತುಪಡಿಸಿಬಿಟ್ಟಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರು ಮಾಡಿದ ರಿಮೇಕ್ ಚಿತ್ರಗಳೇ ನೆಲಕಚ್ಚಿವೆ.

ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಅದ್ಯಾಕೋ ಬಾಲಿವುಡ್ ಎಚ್ಚೆತ್ತುಕೊಂಡಂತೆ ಕಂಡಿಲ್ಲ. ಸೌತ್‌ನ ಅನೇಕ ಬಿಗ್ಗೆಸ್ಟ್ ಹಿಟ್ ಚಿತ್ರಗಳನ್ನು ರಿಮೇಕ್ ಮಾಡಲು ಹೋಗಿ ಎಡವಿ ಮಣ್ಣುಮುಕ್ಕುತ್ತಿದೆ. ಈ ವರ್ಷ ತಮಿಳಿನ ಖೈದಿ ಚಿತ್ರವನ್ನು ಭೋಲಾ ಎಂದು ರಿಮೇಕ್ ಮಾಡಿ ಸೋತಿದ್ದ ಬಾಲಿವುಡ್‌ಗೆ ವೀರಂ ಚಿತ್ರದ ರಿಮೇಕ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಹ ಹಿನ್ನಡೆ ಉಂಟು ಮಾಡಿತ್ತು.

ಹೀಗೆ ಬಾಲಿವುಡ್‌ನ ಸ್ಟಾರ್ ನಟರಾದ ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ನಟನೆಯ ಚಿತ್ರಗಳೇ ಮಕಾಡೆ ಮಲುಗುತ್ತಿರುವಾಗ ಇಲ್ಲೊಂದು ತಂಡ ದಕ್ಷಿಣ ಭಾರತದಲ್ಲಿಯೇ ಇನ್ನೂ ಸಹ ಸರಿಯಾದ ಹಿಟ್ ಇಲ್ಲದೇ ಪರದಾಡುತ್ತಿರುವ ನಟನೊಬ್ಬನಿಗೆ ರಾಜಮೌಳಿ ನಿರ್ದೇಶನದ ತೆಲುಗು ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಿ ದುಸ್ಸಾಹಸ ಮಾಡಿ ಬಲಿಯಾಗಿದೆ.

ಹೌದು, 2005ರಲ್ಲಿ ರಾಜಮೌಳಿ ನಿರ್ದೇಶಿಸಿದ್ದ ಹಾಗೂ ಪ್ರಭಾಸ್ ನಟಿಸಿದ್ದ ಸೂಪರ್ ಹಿಟ್ ಚಿತ್ರ ಛತ್ರಪತಿಯನ್ನು ಈ ವರ್ಷ ಹಿಂದಿಗೆ ರಿಮೇಕ್ ಮಾಡಿ ಬಿಡುಗಡೆ ಮಾಡಲಾಗಿದೆ. ಪ್ರಭಾಸ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನ ನಟ ಬೆಲ್ಲಂಕೊಂಡ ಶ್ರೀನಿವಾಸ್ ಇಲ್ಲಿ ನಿರ್ವಹಿಸಿದ್ದು ಚಿತ್ರ ಹೀನಾಯವಾಗಿ ಸೋತಿದೆ.

ಈ ಚಿತ್ರಕ್ಕೂ ಸಹ ಛತ್ರಪತಿ ಎಂದೇ ಟೈಟಲ್ ಇಡಲಾಗಿದ್ದು, 25 ಕೋಟಿ ವೆಚ್ಚದಲ್ಲಿ ತಯಾರು ಮಾಡಲಾಗಿತ್ತು. ಚಿತ್ರ ಮೇ 12ರಂದು ಬಿಡುಗಡೆಯಾಗಿ ಮೊದಲ ದಿನವೇ ಪ್ರೇಕ್ಷಕರಿಲ್ಲದೇ ಹೀನಾಯವಾಗಿ ಸೋಲನ್ನು ಕಂಡಿತ್ತು. ಒಟ್ಟಾರೆಯಾಗಿ ಚಿತ್ರ ಕೇವಲ 2.5 ಕೋಟಿ ಕಲೆಕ್ಷನ್ ಮಾಡಿದ್ದು, ಸಿನಿಮಾ ಇತಿಹಾಸದಲ್ಲಿ ಅತಿಕೆಟ್ಟ ಸೋಲು ಕಂಡ ಚಿತ್ರ ಎನಿಸಿಕೊಂಡಿದೆ. ಈ ಚಿತ್ರಕ್ಕೆ ತೆಲುಗಿನ ನಿರ್ದೇಶಕ ವಿ ವಿ ವಿನಾಯಕ್ ನಿರ್ದೇಶನವಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ವ್ಯಕ್ತವಾದ ಪ್ರತಿಕ್ರಿಯೆ ಚಿತ್ರಕ್ಕೆ ಸಿಗಲಿಲ್ಲ.

More from Filmibeat

English summary
Chatrapathi Hindi remake failed at box office by collecting just 2.5 crores rupees. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X