ಮನೆ ಕೆಲಸದವರಿಗೆ ದೀಪಾವಳಿ ಬೋನಸ್ ; ಹರಾಜಾಯ್ತು ಅಮಿತಾಬ್ ಬಚ್ಚನ್ ಮಾನ - ಸೂಪರ್ ಸ್ಟಾರ್ ಆದರೂ ಯಾಕಿಷ್ಟು ಕಂಜೂಸುತನ ?
ಚಿತ್ರರಂಗದಲ್ಲಿರುವವರಲ್ಲಿ ಎಲ್ಲವೂ ಇರುತ್ತೆ. ಆದರೆ ಕೆಲವರ ಬಳಿ ಹೃದಯ ವೈಶಾಲ್ಯತೆ ಇರುವುದಿಲ್ಲ. ಯಾಕೆಂದರೆ ದುಡ್ಡೊಂದಿದ್ರೆ ಸಾಕು. ಎಲ್ಲವನ್ನೂ ಪಡೆದುಕೊಳ್ಳಬಹುದು ಎನ್ನುವ ಮನಸ್ಥಿತಿ ಬಹುತೇಕರದ್ದು. ಸ್ಟಾರ್ ಪಟ್ಟಕ್ಕೇರಿದ ಕೂಡಲೇ ಅನೇಕರು ಇಲ್ಲಿ ಕೈಗೊಬ್ಬರು ಕಾಲಿಗೊಬ್ಬರು ಸಹಾಯಕರನ್ನು ನೇಮಿಸಿಕೊಳ್ಳುತ್ತಾರೆ. ಬಿಸಿಲು ತಮ್ಮ ಮೈಗೆ ತಾಗದಂತೆ ನೋಡಿಕೊಳ್ಳಲು ಕೊಡೆ ಹಿಡಿಯಲೆಂದೇ ಒಬ್ಬರಿಗೆ ಕೆಲಸ ಕೊಡುತ್ತಾರೆ. ತಮ್ಮ ಬಳಿ ಇರುವ...
ಕಾರುಗಳ ಸಂಖ್ಯೆಯಷ್ಟೇ ಡ್ರೈವರ್‌ಗಳನ್ನು ಕೂಡ ನೇಮಕ ಮಾಡಿಕೊಳ್ಳುತ್ತಾರೆ. ಇದರ ಮೇಲೆ ನೆರಳಿನಂತೆ ಹಿಂಬಾಲಿಸುವ ಅಂಗರಕ್ಷಕರು ಮತ್ತು ಮನೆಯನ್ನು ಕಾಯಲು ಭದ್ರತಾ ಸಿಬ್ಬಂದಿಗಳು ಇರುತ್ತಾರೆ. ಹೀಗೆ ಸೆಲೆಬ್ರಿಟಿಗಳ ಮನೆ ಕೆಲಸದವರಿಂದನೇ ಇವರ ಅರ್ಧ ಮನೆ ತುಂಬಿ ತುಳುಕುತ್ತಿರುತ್ತೆ.

ಆದರೆ ಈ ಮನೆ ಕೆಲಸದವರಿಗೆ ಈ ಸೆಲೆಬ್ರೇಟಿಗಳು ಕೊಡುವ ಮರ್ಯಾದೆ ಎಷ್ಟು..? ರಾತ್ರಿ ಹಗಲು ದುಡಿಸಿಕೊಳ್ಳುವ ತಾರೆಯರು ತಮ್ಮ ಮನೆ ಕೆಲಸದವರಿಗೆ ಕೊಡಬೇಕಾದ ಅವರಿಗೆ ಸಲ್ಲಬೇಕಾದ ಸಂಬಳವನ್ನು ಸರಿಯಾಗಿ ಕೊಡ್ತಾರಾ ? ಹಬ್ಬ ಹರಿದಿನಕ್ಕೆ ಮನಸಾರೆ ಅವರಿಗೆ ಹಣ ನೀಡುತ್ತಾರಾ..? ಮನೆ ಕೆಲಸದವರ ಜೊತೆ ಈ ಸೆಲೆಬ್ರೇಟಿಗಳು ಹೇಗೆ ನಡೆದುಕೊಳ್ಳುತ್ತಾರೆ..? ಹೀಗೆ ಹತ್ತಾರು ರೀತಿಯ ಪ್ರಶ್ನೆಗಳು ಹಲವರಲ್ಲಿವೆ.
ಇದಕ್ಕೆ ಪೂರಕವಾಗಿ ಸದ್ಯ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಾರೆ ಎನ್ನಲಾದ ಕೆಲ ಸಿಬ್ಬಂದಿಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚರ್ಚೆಗೆ ನಾಂದಿಯನ್ನು ಹಾಡಿದೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವಿಡಿಯೋ ಒಂದು ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೇಟರ್ ಒಬ್ಬ ತಾನು ಅಮಿತಾಬ್ ಬಚ್ಚನ್ ಅವರ ಜುಹು ಮನೆಯಾಚೆ ಇರುವುದಾಗಿ ಹೇಳುತ್ತಾನೆ. ಇದೇ ಸಮಯದಲ್ಲಿ ಅಲ್ಲಿ ಕೈಯಲ್ಲಿ ಸ್ವೀಟ್ ಬಾಕ್ಸ್ ಹಿಡಿದುಕೊಂಡು ವ್ಯಕ್ತಿಯೊಬ್ಬ ಬರುತ್ತಾರೆ. ಆ ವ್ಯಕ್ತಿಯನ್ನು ಈ ವ್ಯಕ್ತಿ ಮಾತನಾಡಿಸಿದಾಗ ಅಮಿತಾಬ್ ಬಚ್ಚನ್ ಅವರು ನನಗೆ ಸ್ವೀಟ್ ಬಾಕ್ಸ್ ನೀಡಿದ್ದಾರೆ ಎಂದು ಆ ವ್ಯಕ್ತಿ ಹೇಳುತ್ತಾರೆ. ಇದಲ್ಲದೇ ಹತ್ತು ಸಾವಿರ ಹಣವನ್ನು ಕೂಡ ನೀಡಿದ್ದಾರೆ ಎಂದು ಹೇಳುತ್ತಾರೆ. ಇದೇ ಸಮಯದಲ್ಲಿ ಇನ್ನು ಕೆಲವರು ಅದೇ ರೀತಿಯ ಸ್ವೀಟ್ ಬಾಕ್ಸ್ ಮತ್ತು ಕೈಯಲ್ಲಿ ಹಣದ ಕವರ್ ಹಿಡಿದುಕೊಂಡು ಮನೆಯಾಚೆ ಬರುತ್ತಾರೆ. ಆ ನಂತರ ರಾತ್ರಿ ದೀಪದಿಂದ ಅಲಂಕಾರ ಮಾಡಿದ ಮನೆಯ ದೃಶ್ಯವನ್ನು ಈ ವಿಡಿಯೋದಲ್ಲಿ ತೋರಿಸಲಾಗುತ್ತೆ.
ನಿಜಕ್ಕೂ ಈ ವಿಡಿಯೋ ಅಮಿತಾಬ್ ಬಚ್ಚನ್ ಅವರ ಮನೆಯ ಹೊರಗಡೆ ಚಿತ್ರೀಕರಿಸಿದ್ದಾ..? ವಿಡಿಯೋದಲ್ಲಿ ಮಾತನಾಡಿದ ವ್ಯಕ್ತಿ ಅಮಿತಾಬ್ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿನಾ..? ಗೊತ್ತಿಲ್ಲ. ಆದರೆ.. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಹಲವರು ಭಾರತದ ಬಹುದೊಡ್ಡ ಸೂಪರ್ ಸ್ಟಾರ್ ತಮ್ಮ ಮನೆಯ ಕೆಲಸದವರಿಗೆ ಕೇವಲ ₹10,000 ಬೋನಸ್ ಕೊಡ್ತಿದ್ದಾರೆ ಅಂದರೆ ಅದು ನಾಚಿಕೆಗೇಡು ಎಂದು ಹೇಳಿದ್ಧಾರೆ. ಕೋಟ್ಯಂತರ ಹಣ ಸಂಪಾದಿಸಿರುವ ಅಮಿತಾಬ್ ಬಚ್ಚನ್ ಕೊನೆ ಪಕ್ಷ ₹25,000 ರೂಪಾಯಿಯಾದರೂ ಕೊಡಬೇಕಿತ್ತು ಎಂದು ಕಿಡಿ ಕಾರುತ್ತಿದ್ದಾರೆ. ಜನಸಾಮಾನ್ಯರೇ ತಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ ಅಥವಾ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವವರಿಗೆ 20-30 ಸಾವಿರ ಬೋನಸ್ ನೀಡುತ್ತಾರೆ ಎಂದು ಅಮಿತಾಬ್ ಕಾಲೆಳೆಯುತ್ತಿದ್ದಾರೆ.
ಇನ್ನೂ ಕೆಲವರು ಅಮಿತಾಬ್ ಬಚ್ಚನ್ ಅವರ ಪರ ವಕಾಲತ್ತು ವಹಿಸಿದ್ದು, ಕೊನೆ ಪಕ್ಷ ಅಮಿತಾಬ್ ಬಚ್ಚನ್ ಹತ್ತು ಸಾವಿರ ರೂಪಾಯಿಯಾದರೂ ತಮ್ಮ ಕೆಲಸದವರಿಗೆ ನೀಡಿದ್ಧಾರೆ. ಇನ್ನೂ ಕೆಲವರು ಇಷ್ಟು ಹಣವನ್ನು ಕೂಡ ನೀಡುವುದಿಲ್ಲ. ಕೇವಲ ಸ್ವೀಟ್ ಬಾಕ್ಸ್ ನೀಡಿ ಕೈ ತೊಳೆದುಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











