»   » ಕಿಂಗ್ ಖಾನ್ ಗೆ ಹೊಚ್ಚ ಹೊಸ ಹಾರ್ಲೆ ಗಿಫ್ಟ್ ಮಾಡಿದ ರೋಹಿತ್

ಕಿಂಗ್ ಖಾನ್ ಗೆ ಹೊಚ್ಚ ಹೊಸ ಹಾರ್ಲೆ ಗಿಫ್ಟ್ ಮಾಡಿದ ರೋಹಿತ್

By: ಸೋನು ಗೌಡ
Subscribe to Filmibeat Kannada

ಬಿಟೌನ್ ನ ಉಳಿದ ಸೆಲೆಬ್ರೆಟಿಗಳಿಗಿಂತ ಕಿಂಗ್ ಖಾನ್ ಶಾರುಖ್ ಅವರಿಗೆ ಕಾರು ಹಾಗೂ ಬೈಕ್ ಕ್ರೇಜ್ ಸ್ವಲ್ಪ ಜಾಸ್ತಿನೇ. ಅಂದಹಾಗೆ ಇದೀಗ ಶಾರುಖ್ ನೆಚ್ಚಿನ ಬೈಕ್ ಗಳ ಲಿಸ್ಟ್ ಗೆ ಹೊಸತೊಂದು ಬೈಕ್ ಸೇರ್ಪಡೆಯಾಗಿದೆ.

ನಿರ್ದೇಶಕ ರೋಹಿತ್ ಶೆಟ್ಟಿ ಅವರು 'ದಿಲ್ ವಾಲೆ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಕಿಂಗ್ ಖಾನ್ ಶಾರುಖ್ ಅವರಿಗೆ ರೈಡ್ ಮಾಡಲು ಹೊಚ್ಚ ಹೊಸ ಬೈಕೊಂದನ್ನು ಕೊಡಿಸಿದ್ದಾರೆ. ಇದೀಗ ಫುಲ್ ಖುಷ್ ಆಗಿರುವ ಕಿಂಗ್ ಖಾನ್ ಅವರು ರೋಹಿತ್ ಶೆಟ್ಟಿ ಅವರಿಗೆ ಥ್ಯಾಂಕ್ಯೂ ಸೋ ಮಚ್ ಎಂದಿದ್ದಾರೆ.

ನ್ಯೂ ಬ್ರ್ಯಾಂಡ್ ಹಾರ್ಲೆ-ಡೇವಿಡ್ ಸನ್ ಬೈಕ್ ಒಂದನ್ನು ನಿರ್ದೇಶಕ ರೋಹಿತ್ ಶೆಟ್ಟಿ ಅವರು ಗಿಫ್ಟಾಗಿ ನೀಡಿದ್ದಕ್ಕಾಗಿ ಕಿಂಗ್ ಖಾನ್ ಶಾರುಖ್ ಅವರು ಸಖತ್ ಎಕ್ಸೈಟ್ ಆಗಿದ್ದಾರೆ. ಜೊತೆಗೆ ಕಿಂಗ್ ಖಾನ್ ಗೆ ಇದೊಂದು ಅದ್ಭುತ ಕ್ಷಣವಾಗಿತ್ತಂತೆ.

ಸದ್ಯಕ್ಕೆ ಕಿಂಗ್ ಖಾನ್ ಶಾರುಖ್ ಖಾನ್ ಅವರು ನಿರ್ದೇಶಕ ರೋಹಿತ್ ಅವರ 'ದಿಲ್ ವಾಲೆ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಇವರೊಂದಿಗೆ ಬಾಲಿವುಡ್ ನಟ ವರುಣ್ ಧವನ್, ಕೃತಿ ಸನೂನ್ ಮತ್ತು ಕಾಜೋಲ್ ಜೊತೆಯಾಗಿದ್ದಾರೆ.

ಶಾರುಖ್ 'ದಿಲ್ ವಾಲೆ' ಡಿಸೆಂಬರ್ 18 ರಂದು ಬಿಡುಗಡೆಯಾಗಲಿದ್ದು, ಆ ದಿನವೇ ರಣವೀರ್ ಕಪೂರ್, ದೀಪಿಕಾ ಪಡುಕೋಣೆ ಹಾಗೂ ಪ್ರೀಯಾಂಕ ಚೋಪ್ರಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಬಾಜಿರಾವ್ ಮಸ್ತಾನಿ' ಕೂಡ ತೆರೆಕಾಣುವ ಸಂಭವವಿದ್ದು. ಬಿಟೌನ್ ನಲ್ಲಿ ಬಿಗ್ ಕ್ಲ್ಯಾಷ್ ಆಗುವ ಸಾಧ್ಯತೆಯಿದೆ.

ಇನ್ನು ಶಾರುಖ್ ಹಾಗೂ ಕಾಜೋಲ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ದಿಲ್ ವಾಲೆ' ಚಿತ್ರ ಚಿತ್ರೀಕರಣದ ಹಂತದಲ್ಲಿದ್ದು, ಹೈದರಾಬಾದ್ ನಲ್ಲಿಯೂ 'ದಿಲ್ ವಾಲೆ' ಚಿತ್ರದ ಚಿತ್ರೀಕರಣ ನಡೆದಿದ್ದು, ಆ ಸಂದರ್ಭದಲ್ಲಿ ಬ್ಯಾಂಡ್ ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಅವರನ್ನು ಭೇಟಿಯಾಗುವ ಸಂದರ್ಭ ಕಿಂಗ್ ಖಾನ್ ಗೆ ಒದಗಿ ಬಂದಿತ್ತು.

ಕಿಂಗ್ ಖಾನ್ ಶಾರುಖ್ ಅವರು ಕಾರು ಹಾಗೂ ಬೈಕ್ ಗಳ ಜೊತೆ ಇರುವ ಫೊಟೋ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಶಾರುಖ್ ಖಾನ್ ಅವರ ಹೊಸ ಹಾರ್ಲೆ ಬೈಕ್

'ದಿಲ್ ವಾಲೆ' ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಗಿಫ್ಟ್ ಮಾಡಿದ ಹೊಚ್ಚ ಹೊಸ ಬೈಕ್ ನ್ಯೂ ಬ್ರ್ಯಾಂಡ್ ಹಾರ್ಲೆ-ಡೇವಿಡ್ ಸನ್ ನಲ್ಲಿ ಕಿಂಗ್ ಖಾನ್ ಶಾರುಖ್ ಫೋಸ್.

'ಜಬ್ ತಕ್ ಹೈಜಾನ್'

ಶಾರುಖ್ ಖಾನ್ ಅವರು 'ಜಬ್ ತಕ್ ಹೈ ಜಾನ್' ಚಿತ್ರದಲ್ಲಿ ಮಿಲಿಟರಿ ಆಫೀಸರ್ ಪಾತ್ರದಲ್ಲಿ ಮಿಂಚಿದ್ದು, ರಾಯಲ್ ಎನ್ ಫೀಲ್ಡ್ ಬೈಕ್ ರೈಡ್ ಮಾಡುತ್ತಿರುವುದು.

ನ್ಯೂ, ಕೆ.ಟಿ.ಎಮ್

'ದಿಲ್ ವಾಲೆ' ನಟ ಕಿಂಗ್ ಖಾನ್ ಶಾರುಖ್ ಅವರು ಹೊಚ್ಚ ಹೊಸ ಬೈಕ್ ಕೆ.ಟಿ.ಎಮ್ ಪ್ರೊಮೋಷನ್ ಸಂದರ್ಭದಲ್ಲಿ ಬೈಕ್ ಏರಿ ಫೊಟೋ ಕ್ಲಿಕ್ಕಿಸಿಕೊಂಡ ಪರಿ

ರಬ್ ನೇ ಬನಾ ದೀ ಜೋಡಿ

ಹಿಟ್ 'ರಬ್ ನೇ ಬನಾ ದೀ ಜೋಡಿ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಜೊತೆ ಶಾರುಖ್ ಖಾನ್

ಎಸ್ ಆರ್ ಕೆ ಅವರ ಭರ್ಜರಿ ಕಾರು

ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಶಾರುಖ್ ಖಾನ್ ಅವರ ಭರ್ಜರಿ ಲಕ್ಷುರಿ ಕಾರ್ ನಲ್ಲಿ ನಿರ್ದೇಶಕ ಕರಣ್ ಜೋಹರ್ ಮುಂದಿನ ಸೀಟ್ ನಲ್ಲಿ ಕಂಡಿದ್ದು ಹೀಗೆ

ಬಿಎಂಡಬ್ಲೂ ಸ್ಪೋರ್ಟ್ಸ್ ಕಾರು

ಬಿಎಂಡಬ್ಲೂ ಸ್ಪೋರ್ಟ್ಸ್ ಕಾರನ್ನು ಡ್ರೈವ್ ಮಾಡುತ್ತಿರುವ ಗೌರಿ ಖಾನ್ ಜೊತೆ ಕಿಂಗ್ ಖಾನ್ ಶಾರುಖ್ ಜಾಲಿ ಟೈಮ್ಸ್

ಕಿಂಗ್ ಖಾನ್ ಸೈಲಿಷ್ ಲುಕ್

ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಅವರು ಡಾನ್ ಚಿತ್ರದಲ್ಲಿ ಸಖತ್ ಸೂಪರ್ ಸ್ಟೈಲಿಷ್ ಲುಕ್ ನಲ್ಲಿ ಬೈಕ್ ರೈಡ್ ಮಾಡುತ್ತಿರುವುದು.

ಶಾರುಖ್ ಖಾನ್-ಅನುಷ್ಕಾ ಶರ್ಮಾ

'ಜಬ್ ತಕ್ ಹೈ ಜಾನ್' ಚಿತ್ರದಲ್ಲಿ ಕಿಂಗ್ ಖಾನ್ ಜೊತೆ ಅನುಷ್ಕಾ ಶರ್ಮಾ ಅವರು ಜಾಲಿ ರೈಡ್ ಸೀನ್ ನಲ್ಲಿ ಮಿಂಚಿದ್ದು ಹೀಗೆ

English summary
Shahrukh Khan has a penchant for cars and bikes much like other celebrities! Working with director Rohit Shetty who shares a similar obsession has worked in the favour of King Khan. SRK revealed that he gets to ride a new bike to the sets of 'Dilwale', thanks to director Rohit Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada