ಮದುವೆಯಾಗುವ ಹುಡುಗನ ಮುಂದೆಯೇ ಖ್ಯಾತ ಗಾಯಕನಿಗೆ ಕಿಸ್ ಮಾಡಿದ ಟಾಕ್ಸಿಕ್ ನಟಿ- ಬೆಚ್ಚಿಬಿದ್ದ ಬಾಯ್‌ಫ್ರೆಂಡ್
ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತೆ. ಆದರೆ.. ರೀಲ್‌ನಲ್ಲಿ ಚಿಗುರೊಡೆಯುವ ಪ್ರೀತಿ ಬಹುತೇಕ ರಿಯಲ್ ಆಗಿರುತ್ತೆ. ಇದಕ್ಕೆ.. ಉದಾಹರಣೆ ಎಂಬಂತೆ ಹೃದಯದಿಂದ ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಅನೇಕರು ಈ ಬಣ್ಣದ ಪ್ರಪಂಚದಲ್ಲಿದ್ದಾರೆ. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ...
ಪ್ರೀತಿ ತನ್ನ ಅರ್ಥವನ್ನು ಕಳೆದುಕೊಂಡಿದೆ. ಪ್ರೀತಿಯನ್ನು ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇಂದು ಪ್ರೀತಿ ಮನಸುಗಳ ಪಿಸು ಮಾತಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಸಾಮಾಜಿಕ ಜಾಲತಾಣದ ಯುಗದಲ್ಲಿ ಸಾರ್ವಜನಿಕ ಪ್ರದರ್ಶನವಾಗಿದೆ. ಇನ್ನು ಚಿತ್ರರಂಗದಲ್ಲಿ ಯಾರಿಗೆ ಯಾರ ಮೇಲೆ ಯಾವತ್ತು ಪ್ರೇಮಾಂಕುರವಾಗುತ್ತೆ.. ಯಾರ ನಡುವೆ ಬ್ರೇಕಪ್ ಆಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಜೊತೆಯಲ್ಲಿದ್ದವರು ಮರು ದಿನ ಇನ್ಯಾರದ್ದೋ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಇನ್ನೂ ಕೆಲವರು ಕಾಯಾ ವಾಚಾ ಮನಸಾ ಪ್ರೀತಿಸುವುದಾಗಿ ಹೇಳಿ ಬಾಯ್‌ಫ್ರೆಂಡ್/ಗರ್ಲ್‌ಫ್ರೆಂಡ್ ಎದುರಿನಲ್ಲಿಯೇ ಮತ್ಯಾರದ್ದೋ ತೆಕ್ಕೆಗೆ ಬೀಳುತ್ತಾರೆ. ಸಾರ್ವಜನಿಕವಾಗಿ ಮೈಮರೆತು ತಮ್ಮ ಸಂಗಾತಿಗೆ ಇರಿಸು ಮುರಿಸು ಉಂಟುಮಾಡುತ್ತಾರೆ. ಉದಾಹರಣೆಗೆ ತಾರಾ ಸುತಾರಿಯಾ ಅವರನ್ನೇ ತೆಗೆದುಕೊಳ್ಳಿ.
ಹೌದು, ತಾರಾ ಸುತಾರಿಯಾ.. ''ಸ್ಟೂಡೆಂಟ್ ಆಫ್ ದಿ ಇಯರ್ 2'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ''ಮರ್‌ಜಾವಾ''.. ''ತಡಪ್''.. ''ಹೀರೋಪಂತಿ 2'' ಚಿತ್ರದಲ್ಲಿ ಕೂಡ ನಾಯಕಿ ಪಾತ್ರ ನಿರ್ವಹಿಸಿದ್ದ ತಾರಾ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಚಿತ್ರ ''ಟಾಕ್ಸಿಕ್''ನ ಕಥಾನಾಯಕಿಯಲ್ಲಿ ಒಬ್ಬರು.
ಚಿತ್ರರಂಗದಲ್ಲಿ ಮೂರು ಮತ್ತೊಂದು ಚಿತ್ರವನ್ನು ಮಾಡಿರುವ ಈ ತಾರಾ ಸುತಾರಿಯಾ ಮೊದಲಿಂದ ತಮ್ಮ ಚಿತ್ರಕ್ಕಿಂತ ತಮ್ಮ ವ್ಯೆಯಕ್ತಿಕ ಬದುಕಿನ ವಿಚಾರದಿಂದ ಹೆಚ್ಚು ಸದ್ದು ಮಾಡುತ್ತಾ ಬಂದವರು. ಇಂಥಾ ತಾರಾ ಸುತಾರಿಯಾ ಸದ್ಯ ತಮ್ಮ ಬಾಯ್‌ಫ್ರೆಂಡ್ ಎದುರಿನಲ್ಲಿಯೇ ಗಾಯಕ ಎಪಿ ಧಿಲ್ಲೋನ್‌ಗೆ ಕಿಸ್ ಮಾಡಿದ್ದಾರೆ.
ಹೌದು, ಅಸಲಿಗೆ ಇಂಡೋ-ಕೆನಡಿಯನ್ ಗಾಯಕ ಎ.ಪಿ.ಧಿಲ್ಲೋನ್ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ. ಮೊನ್ನೆ ಪುಣೆಯಲ್ಲಿ ಇವರ ಸಂಗೀತ ಸಂಜೆ ಇತ್ತು. ಈ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ತಾರಾ ತಾವು ಮದುವೆಯಾಗುತ್ತಿರುವ ಹುಡುಗ ವೀರ್ ಪಹಾರಿಯಾ ಜೊತೆ ಭಾಗವಹಿಸಿದ್ದರು. ಈ ವೀರ್ ಪಹಾರಿಯಾ ಬೇರೆ ಯಾರು ಅಲ್ಲ. ಮಾಜಿ ಮುಖ್ಯಮಂತ್ರಿ ಸುಶೀಲ್ಕುಮಾರ್ ಶಿಂಧೆ ಅವರ ಮೊಮ್ಮಗ. ತಾರಾ ಸುತಾರಿಯಾ ಅವರಿಗಿಂತ ಮುಂಚೆ ಹಿಂದೊಮ್ಮೆ ಸಾರಾ ಅಲಿ ಖಾನ್ ಜೊತೆ ಪ್ರೀತಿ ಕಿತಾಬು ಓದಿದವರು ಇವರು. ಇಷ್ಟೇ ಅಲ್ಲ ಜಾಹ್ನವಿ ಕಪೂರ್ ಹೃದಯ ಕದ್ದ ಶಿಖರ್ ಪಹಾರಿಯಾ ಅವರ ಸಹೋದರ ಕೂಡ ಹೌದು ಈ ವೀರ್ ಪಹಾರಿಯಾ.

ಸದ್ಯ ತಾರಾ ಸುತಾರಿಯಾ ಜೊತೆ ವೀರ್ ಪಹಾರಿಯಾ ಸಂಬಂಧದಲ್ಲಿದ್ದಾರೆ. ಈ ಬಾರಿ ತಮ್ಮ ರಿಲೇಷನ್ ವಿಚಾರದಲ್ಲಿ ಗಂಭೀರವೂ ಆಗಿರುವ ವೀರ್ ಪಹಾರಿಯಾ, ತಾರಾ ಜೊತೆ ಮದುವೆಯಾಗುವ ಆಲೋಚನೆಯನ್ನು ಕೂಡ ಮಾಡಿದ್ದಾರೆ. ಹೀಗಿರುವಾಗ ತಾರಾ ಸುತಾರಿಯಾ ಸಮಸ್ತ ಸಂಗೀತ ಪ್ರೇಮಿಗಳ ಎದುರು, ಎಲ್ಲಕ್ಕಿಂತ ಹೆಚ್ಚಾಗಿ ತಾವು ಮದುವೆಯಾಗುತ್ತಿರುವ ಹುಡುಗ ವೀರ್ ಪಹಾರಿಯಾ ಎದುರು ಗಾಯಕ ಎ.ಪಿ.ಧಿಲ್ಲೋನ್ ಜೊತೆ ತುಂಬಾನೇ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆ ಮುಂದೆ ಯೋಚನೆ ಮಾಡದೇ ಕಿಸ್ ಕೂಡ ಮಾಡಿದ್ದಾರೆ.
ತಾರಾ ಸುತಾರಿಯಾ ಅವರ ಈ ವರ್ತನೆ ಕಂಡು ವೀರ್ ಪಹಾರಿಯಾ ಬೆಚ್ಚಿ ಬಿದ್ದಿದ್ದಾರೆ. ಒಬ್ಬರೇ ಏನೇನೋ ಗೊಣಗುತ್ತಾ ಆ ಕಡೆಯಿಂದ ಈ ಕಡೆ ಓಡಾಡಿದ್ದಾರೆ. ವೀರ್ ಪಹಾರಿಯಾ ಅವರ ಈ ಚಡಪಡಿಕೆ ಕ್ಯಾಮರಾ ಕಣ್ಣಿನಲ್ಲಿ ಸದ್ಯ ಸೆರೆಯಾಗಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಹಲವರು ತಾರಾ ಸುತಾರಿಯಾ ಅವರ ವಿರುದ್ಧ ಕೆಂಡ ಕಾರಿದ್ದಾರೆ. ವೀರ್ ಪಹಾರಿಯಾ ಅವರ ಸ್ಥಿತಿಯನ್ನು ಕಂಡು ಮರುಗಿದ್ದಾರೆ. ಅಂದ್ಹಾಗೇ ಹಿಂದೆ ಇದೇ ಎ.ಪಿ.ಧಿಲ್ಲೋನ್ ಜೊತೆ ತಾರಾ ಸುತಾರಿಯಾ ರೆಸ್ಟೋರೆಂಟ್‌ನಲ್ಲಿ ಕೂಡ ಕ್ಯಾಮರಾ ಕಣ್ಣಿನಲ್ಲಿ ಸಿಕ್ಕಿ ಬಿದ್ದಿದ್ದರು. ಆಗ ಇಬ್ಬರು ಪ್ರೀತಿಯಲ್ಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದಾದ ಕೆಲವೇ ದಿನಗಳಲ್ಲಿ ತಾರಾ ಬದುಕಿನಲ್ಲಿ ವೀರ್ ಪಹಾರಿಯಾ ರಂಗಪ್ರವೇಶ ಆಯ್ತು. ಈಗ ಈ ವಿಡಿಯೋ ವೈರಲ್ ಆಗಿದೆ.


Click it and Unblock the Notifications











