'ಚೆನ್ನೈ ಎಕ್ಸ್ ಪ್ರೆಸ್' ನಿರ್ಮಾಪಕನ ಅತ್ಯಾಚಾರದ ಕಥೆಗೆ ಮರುಜೀವ ನೀಡಿದ ಮಹಿಳೆ
ಶಾರೂಖ್ ಖಾನ್ ಅಭಿನಯಿಸಿದ್ದ ಚೆನ್ನೈ ಎಕ್ಸ್ ಪ್ರೆಸ್, ರಾ ಓನ್, ಹ್ಯಾಪಿ ನ್ಯೂ ಇಯರ್ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಕರೀಮ್ ಮೊರಾನಿ ವಿರುದ್ಧ 25 ವರ್ಷದ ದೆಹಲಿ ಮೂಲದ ಮಹಿಳೆಯೊಬ್ಬರು ಕಿರುಕುಳದ ಆರೋಪ ಮಾಡಿದ್ದಾರೆ.
ನಾಲ್ಕು ವರ್ಷದ ಹಿಂದೆ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಸಿದಂತೆ ನಿರ್ಮಾಪಕ ಕರೀಮ್ ಮೊತರಾನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ನಂತರ ಬಂಧನವಾಗಿದ್ದ ಮೊರಾನಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ಹೈದ್ರಾಬಾದ್ ನಲ್ಲಿದ್ದಾಗ ಮೊರಾನಿ ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಖಾಸಗಿ ಫೋಟೋಗಳನ್ನ ಕ್ಲಿಕ್ಕಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಂತೆ. ಯಾರ ಬಳಿಯಾದರೂ ಹೇಳಿದ್ರೆ, ಅಂಡರ್ ವರ್ಲ್ಡ್ ನಿಂದ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದನು ಎಂದು ಮಹಿಳೆ ಆರೋಪಿಸಿದ್ದಳು.

ಈ ಆರೋಪದಡಿ 2017ರಲ್ಲಿ ಹೈದ್ರಾಬಾದ್ ನಲ್ಲಿ ದೂರು ದಾಖಲಾಗಿತ್ತು. ನಂತರ ಬಂಧನವಾಗಿದ್ದ ಮೊರಾನಿ ಜಾಮೀನು ಪಡೆದು ರಿಲೀಸ್ ಆಗಿದ್ದರು. ಸದ್ಯ, ಬಾಲಿವುಡ್ ನಲ್ಲಿ ಮೀಟೂ ಅಭಿಯಾನದ ಪರಿಣಾಮ ಈ ಘಟನೆಯನ್ನ ಆ ಮಹಿಳೆ ಸಂದರ್ಶನವೊಂದರಲ್ಲಿ ಮತ್ತೆ ಮೆಲುಕು ಹಾಕಿದ್ದಾರೆ.
ಆ ದಿನ ಏನಾಗಿತ್ತು.?
'ಅಂದು ಸಂಜೆ 7 ಗಂಟೆ ಸಮಯವಾಗಿತ್ತು. ವೈನ್ ಬಾಟಲ್ ಕೈಯಲ್ಲಿ ಹಿಡಿದು ಕರೀಮ್ ಮೊರಾನಿ ನಮ್ಮ ಮನೆಗೆ ಬಂದ್ರು. ನಾನು ಕುಡಿಯಲ್ಲ ಆದ್ರೂ, ನನಗೆ ಬಲವಂತವಾಗಿ ಕುಡಿಸಿದ. ಆಮೇಲೆ ನಾನು ಎದ್ದಿದ್ದೇ ಮುಂಜಾನೆ 4 ಗಂಟೆಗೆ. ನನ್ನ ದೇಹದ ಮೇಲೆ ಗಾಯಗಳಾಗಿದ್ದವು. ನಾನು ಮಾನಸಿಕವಾಗಿ ದೈಹಿಕವಾಗಿ ಆಘಾತಕ್ಕೆ ಒಳಗಾಗಿದ್ದೆ. ಇದರಿಂದ ನನಗೆ ಆಘಾತವಾಯಿತು, ಮೊರಾನಿ ಕೂಡ ಅಲ್ಲಿ ಇರಲಿಲ್ಲ' ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











