ನನ್ನನ್ನು ಆತ್ಮಹತ್ಯೆಯ ಅಂಚಿಗೆ ತಳ್ಳಿದ್ದ: ನಿರ್ಮಾಪಕನ ಮೇಲೆ ಲೇಖಕ ಆರೋಪ
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ಮಂದಿ ಬಹಳ ಬದಲಾಗಿದೆ. ಒಬ್ಬರ ಮೇಲೊಬ್ಬರು ಆರೋಪ ಮಾಡಲು ಹಿಂದೆ-ಮುಂದೆ ನೋಡುತ್ತಿಲ್ಲ.
Recommended Video
ಅದರಲ್ಲಿಯೂ ಬಾಲಿವುಡ್ ಮೇಲೆ ವರ್ಷಗಳಿಂದ ಹಿಡಿತ ಸಾಧಿಸಿದವರ ಮೇಲೆ, ಬಾಲಿವುಡ್‌ನ ದೊಡ್ಡ ತಲೆಗಳೆಂದೇ ಬಿಂಬಿತವಾದವರ ಮೇಲೆಯೇ ಗಂಭೀರ ಆರೋಪಗಳು ಹೊರಬೀಳುತ್ತಿವೆ.
ಇದೀಗ ಖ್ಯಾತ ಲೇಖಕರೊಬ್ಬರು ಹಿರಿಯ ನಿರ್ಮಾಪಕ, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನನ್ನು ಸಾರ್ವಜನಿಕವಾಗಿ ಹಿಯಾಳಿಸಿದ್ದಲ್ಲದೆ, ನನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದರು ಎಂಬ ಆರೋಪ ಹೊರಿಸಿದ್ದಾರೆ.

ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಆರೋಪ
ಖ್ಯಾತ ಕಾದಂಬರಿಕಾರ, ಚಿತ್ರಕತೆ ಲೇಖಕ ಚೇತನ್ ಭಗತ್ ಹೀಗೊಂದು ಆರೋಪವನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದು, ನಿರ್ಮಾಪಕ ವಿದು ವಿನೋದ್ ಚೋಪ್ರಾ ನನ್ನನ್ನು ಆತ್ಮಹತ್ಯೆಯ ಅಂಚಿಗೆ ತಳ್ಳಿದ್ದರು ಎಂದು ಆರೋಪಿಸಿದ್ದಾರೆ.

ವಿಮರ್ಶೆಯನ್ನು ಜಾಗೃತೆಯಿಂದ ಮಾಡಿರೆಂದ ಚೇತನ್
ಸುಶಾಂತ್ ಸಿಂಗ್ ಸಿನಿಮಾ ಬಗ್ಗೆ ಜಾಗರೂಕತೆಯಿಂದ ವಿಮರ್ಶೆ ಬರೆಯಿರಿ, ನಿಮ್ಮ ವಿಮರ್ಶೆ ಹಲವು ಜೀವನಗಳನ್ನು ಬಲಿ ತೆಗೆದುಕೊಳ್ಳಬಹುದು ಎಂಬ ಟ್ವೀಟ್ ಅನ್ನು ಚೇತನ್ ಭಗತ್ ಮಾಡಿದ್ದರು. ಇದಕ್ಕೆ ವಿದು ವಿನೋದ್ ಚೋಪ್ರಾ ಪತ್ನಿ ಅನುಪಮಾ ಚೋಪ್ರಾ ಪ್ರತಿಕ್ರಿಯಿಸಿದ್ದರು.

ಚೇತನ್ ಟ್ವೀಟ್‌ಗೆ ಅನುಪಮಾ ಚೋಪ್ರಾ ಪ್ರತಿಕ್ರಿಯೆ
ಚೇತನ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅನುಪಮ ಚೋಪ್ರಾ, ನಿಮ್ಮ ಮಾತುಗಳು ದಿನೇ ದಿನೇ ಅರ್ಥಹೀನವಾಗುತ್ತಾ ಸಾಗುತ್ತಿವೆ ಎಂಬರ್ಥ ಹೊಮ್ಮುವ ಟ್ವೀಟ್ ಅನ್ನು ಮಾಡಿದ್ದರು. ಇದು ಚೇತನ್ ಭಗತ್ ಸಿಟ್ಟು ಕೆರಳಿಸಿತು.

ನನ್ನನ್ನು ಸಾರ್ವಜನಿಕವಾಗಿ ನಿಂದಿಸಿದರು: ಚೇತನ್ ಭಗತ್
ಇದಕ್ಕೆ ಪ್ರತಿಕ್ರಿಯಿಸಿದ ಚೇತನ್ ಭಗತ್, 'ನಿಮ್ಮ ಪತಿ (ವಿದು ವಿನೋದ್ ಚೋಪ್ರಾ) ನನ್ನನ್ನು ಸಾರ್ವಜನಿಕವಾಗಿ ನಿಂದಿಸಿದರು. ನಾಚಿಕೆಯಿಲ್ಲದೆ ಅತ್ಯುತ್ತಮ ಕತೆಗಾಗಿ ಪ್ರಶಸ್ತಿ ತೆಗೆದುಕೊಂಡರು. ನನಗೆ ಕ್ರೆಡಿಟ್ ಸಹ ಕೊಡಲು ವಿರೋಧಿಸಿದರು. ನನ್ನನ್ನು ಆತ್ಮಹತ್ಯೆಯ ಅಂಚಿಗೆ ತಳ್ಳಿದರು, ಆಗ ನೀವೇನು ಮಾಡುತ್ತಿದ್ದಿರಿ' ಎಂದು ಪ್ರಶ್ನಿಸಿದ್ದಾರೆ.

3 ಇಡಿಯಟ್ಸ್ ಚೇತನ್ ಭಗತ್ ಕಾದಂಬರಿ ಆಧಾರಿತ ಸಿನಿಮಾ
ವಿದು ವಿನೋದ್ ಚೋಪ್ರಾ ನಿರ್ಮಿಸಿದ್ದ ಬ್ಲಾಕ್‌ಬಸ್ಟರ್ ಸಿನಿಮಾ '3 ಇಡಿಯಟ್ಸ್' ಬಗ್ಗೆ ಚೇತನ್ ಭಗತ್ ಆಕ್ಷೇಪ ಎತ್ತಿದ್ದರು. ಆ ಸಿನಿಮಾದ ತಮ್ಮ ಕಾದಂಬರಿ ಆಧಾರಿತ ಎಂದು ಭಗತ್ ಹೇಳಿದ್ದರು. ಸಿನಿಮಾದ ಕೊನೆಗೆ ಚೇತನ್ ಭಗತ್ ಅವರ ಕಾದಂಬರಿ 'ಫೈವ್ ಪಾಯಿಂಟ್ಸ್' ಆಧಾರಿತ ಎಂದು ಸೇರಿಸಲಾಗಿತ್ತು. ಆದರೆ ಚಿತ್ರದ ಕತೆಗೆ ನೀಡಿದ ಪ್ರಶಸ್ತಿಯನ್ನು ವಿದು ವಿನೋದ್ ಚೋಪ್ರಾ ಮತ್ತು ರಾಜ್‌ಕುಮಾರ್ ಹಿರಾನಿ ತೆಗೆದುಕೊಂಡರು.


Click it and Unblock the Notifications











