Chhaava Box Office Day 30 ; ಒಂದು ತಿಂಗಳಾದರೂ ಕಡಿಮೆಯಾಗಿಲ್ಲ ಛಾವಾ ಅಬ್ಬರ, 30 ದಿನದಲ್ಲಿ ಗಳಿಸಿದ್ದೆಷ್ಟು ?
ಹಿಂದೆ ಎಲ್ಲ ಬಾಲಿವುಡ್ ನವರು, ಮಾತಿಗೂ ಮುನ್ನ ನಮ್ಮ ಸಿನಿಮಾದ ಗಳಿಕೆ ನೂರು ಕೋಟಿಯ ಗಡಿ ದಾಟಿದೆ ಎಂಬ ಮಾತುಗಳನ್ನಾಡ್ತಿದ್ದರು. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆದರೆ ಆ ನಂತರ ಲೆಕ್ಕ ತಪ್ಪಿತು. ಸಲೀಸಾಗಿ ನೂರು ಕೋಟಿಯನ್ನ ಗಳಿಸುತ್ತಿದ್ದ ಬಾಲಿವುಡ್ ನಲ್ಲಿ ಐವತ್ತು ಕೋಟಿಗೂ ಹಾಹಾಕಾರ ಎದ್ದಿತು. ಕಳೆದ ವರ್ಷ ಹೊರತು ಪಡಿಸಿದರೆ, ಕೊರೊನಾ ನಂತರ ಬಾಲಿವುಡ್ ಅನುಭವಿಸಿದ್ದು ಬಹುತೇಕ ನಷ್ಟನೇ. ಇಂಥಾ ಬಾಲಿವುಡ್ ಈ ವರ್ಷದ ಆರಂಭದಲ್ಲಿಯೇ ಗೆಲುವನ್ನು ಕಂಡಿದೆ. ಹೊಸ ಅಲೆಯನ್ನು ಎಬ್ಬಿಸಿದೆ. ಆ ಅಲೆಯ ಹೆಸರು ಛಾವಾ.
ಹೌದು, ಸತತ ಸೋಲುಗಳಿಂದ, ಸೌತ್ ಚಿತ್ರಗಳ ಅಬ್ಬರದಿಂದ, ಹೈರಾಣಾಗಿದ್ದ ಹಿಂದಿ ಚಿತ್ರರಂಗಕ್ಕೆ ಛಾವಾ ಕಳೆದೊಂದು ತಿಂಗಳಿಂದ ಆಸರೆಯಾಗಿದೆ.ತೆರೆಗೆ ಬಂದು 30 ದಿನವಾದರೂ ಕೂಡ ಚಿತ್ರ ಲಕ್ಷ ಅಲ್ಲ ಬದಲಿಗೆ ಕೋಟಿ ಕೋಟಿ ಹಣವನ್ನೇ ಬಾಕ್ಸಾಫೀಸ್‌ನಲ್ಲಿ ದೋಚುತ್ತಿದೆ. ಒಂದು ತಿಂಗಳಾದರೂ ಕೂಡ ಛಾವಾ ಹವಾ ಕಡಿಮೆಯಾಗಿಲ್ಲ. ಚಿತ್ರವೊಂದು ತೆರೆಗೆ ಬಂದು ನಾಲ್ಕು ವಾರಕ್ಕೆ ಒಟಿಟಿಗೆ ಬರುವ ಈ ಕಾಲದಲ್ಲಿ ಛಾವಾ ಚಿತ್ರದ ಈ ಗಳಿಕೆ ಅಚ್ಚರಿಯೂ ಹೌದು. ವಿಶೇಷ ಕೂಡ ಹೌದು.

ಇನ್ನು ಈ ಒಂದು ತಿಂಗಳಿನಲ್ಲಿ ಬೇರೆ ಬೇರೆ ಭಾಷೆಯಲ್ಲಿ ಹಲವು ಚಿತ್ರಗಳು ಬಂದಿವೆ. ಆದರೂ ಕೂಡ ಛಾವಾ ಚಿತ್ರಮಂದಿರದಿಂದ ಕದಲಿಲ್ಲ. ಬದಲಿಗೆ ಭಾರೀ ಜನಾಭಿಪ್ರಾಯದ ಮೇರೆಗೆ ಚಿತ್ರ ತೆಲುಗು ಭಾಷೆಗೆ ಡಬ್ ಆಗಿದೆ. ಮೊನ್ನೆ ಮೊನ್ನೆಯಷ್ಟೇ ತೆಲುಗಿನಲ್ಲಿ ಬಿಡುಗಡೆಯಾಗಿದೆ. ನಿನ್ನೆಯಷ್ಟೇ ತೆರೆಗೆ ಬಂದ ಜಾನ್ ಅಬ್ರಾಹಿಂ ಅಭಿನಯದ ದಿ ಡಿಪ್ಲೊಮ್ಯಾಟ್ ಚಿತ್ರದಿಂದ ಕೂಡ ಛಾವಾದ ಸದ್ದನ್ನು ಅಡಗಿಸಲು ಸಾಧ್ಯವಾಗಲಿಲ್ಲ.
ಚಿತ್ರದ ಗಳಿಕೆಯ ಮೇಲೆ ಹದ್ದಿನ ಕಣ್ಣಿಡುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಛಾವಾ ಚಿತ್ರದ ಒಂದು ತಿಂಗಳ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ - ₹ 31 ಕೋಟಿ
ಎರಡನೇ ದಿನ - ₹ 37 ಕೋಟಿ
ಮೂರನೇ ದಿನ - ₹ 48.5 ಕೋಟಿ
ನಾಲ್ಕನೇ ದಿನ - ₹ 24 ಕೋಟಿ
ಐದನೇ ದಿನ - ₹ 25.25 ಕೋಟಿ
ಆರನೇ ದಿನ - ₹ 32 ಕೋಟಿ
ಏಳನೇ ದಿನ - ₹ 21.5 ಕೋಟಿ
ಮೊದಲ ವಾರದ ಒಟ್ಟು ಗಳಿಕೆ - ₹ 219.25 ಕೋಟಿ
ಎಂಟನೆ ದಿನ - ₹ 23.5 ಕೋಟಿ
ಒಂಬತ್ತನೇ ದಿನ - ₹ 44 ಕೋಟಿ
ಹತ್ತನೇ ದಿನ - ₹ 40 ಕೋಟಿ
ಹನ್ನೊಂದನೇ ದಿನ - ₹18 ಕೋಟಿ
ಹನ್ನೆರಡನೇ ದಿನ - ₹ 18.5 ಕೋಟಿ
ಹದಿಮೂರನೇ ದಿನ - ₹ 23 ಕೋಟಿ
ಹದಿನಾಲ್ಕನೇ ದಿನ - ₹ 13.25 ಕೋಟಿ
ಎರಡನೇ ವಾರದ ಒಟ್ಟು ಗಳಿಕೆ - ₹180.25 ಕೋಟಿ
ಹದಿನೈದನೇ ದಿನ - ₹13 ಕೋಟಿ
ಹದಿನಾರನೇ ದಿನ - ₹ 22 ಕೋಟಿ
ಹದಿನೇಳನೇ ದಿನ -₹ 24.25 ಕೋಟಿ
ಹದಿನೆಂಟನೇ ದಿನ - ₹ 7. 75 ಕೋಟಿ
ಹತ್ತೊಂಬತ್ತನೇ ದಿನ - ₹ 5.4 ಕೋಟಿ
ಇಪ್ಪತ್ತನೇ ದಿನ - ₹ 6..15 ಕೋಟಿ
ಇಪ್ಪತ್ತೊಂದನೆ ದಿನ - 5.5 ಕೋಟಿ
ಮೂರನೇ ವಾರದ ಒಟ್ಟು ಗಳಿಕೆ - ₹84.05 ಕೋಟಿ
ಇಪ್ಪತ್ತೆರಡನೇ ದಿನ - ₹8.75 ಕೋಟಿ
ಇಪ್ಪತ್ಮೂರನೇ ದಿನ - ₹ 16.75 ಕೋಟಿ
ಇಪ್ಪತ್ನಾಲ್ಕನೇ ದಿನ - ₹ 10.75 ಕೋಟಿ
ಇಪ್ಪತ್ತೈದನೇ ದಿನ - ₹ 6.25 ಕೋಟಿ
ಇಪ್ಪತ್ತಾರನೇ ದಿನ - ₹ 5. ಕೋಟಿ
ಇಪ್ಪತ್ತೇಳನೇ ದಿನ - ₹ 4.8 ಕೋಟಿ
ಇಪ್ಪತ್ತೆಂಟನೇ ದಿನ - ₹ 4.5 ಕೋಟಿ
ನಾಲ್ಕನೇ ವಾರದ ಒಟ್ಟು ಗಳಿಕೆ - ₹ 55.95 ಕೋಟಿ
ಇಪ್ಪತ್ತೊಂಬತ್ತನೇ ದಿನ -₹ 7.25ಕೋಟಿ
ಮೂವತ್ತನೇ ದಿನ - ₹8 ಕೋಟಿ


Click it and Unblock the Notifications











