ಐತಿಹಾಸಿಕ ಸಿನಿಮಾ 'ಚಾವ' ಟ್ರೈಲರ್ ಹೇಗಿದೆ? ಕುಂಟುತ್ತಲೇ ಕಾರ್ಯಕ್ರಮಕ್ಕೆ ಬಂದಿದ್ದ ರಶ್ಮಿಕಾ

ಬಾಲಿವುಡ್‌ನಲ್ಲಿ ಮತ್ತೊಂದು ಐತಿಹಾಸಿಕ ಕಥಾಹಂದರದ ಸಿನಿಮಾ ಸಿದ್ಧವಾಗಿದೆ. ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಚಾವ' ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ. ಸದ್ಯ ಚಿತ್ರದ ಪೋಸ್ಟರ್, ಟ್ರೈಲರ್ ಹೊರ ಬಂದು ಸದ್ದು ಮಾಡ್ತಿದೆ. ಚಿತ್ರದಲ್ಲಿ ಮರಾಠ ಚತ್ರಪತಿ ಶಿವಾಜಿ ಪುತ್ರ ಸಾಂಬಾಜಿ ಸಾಧನೆ ಕಥೆ ಹೇಳಲಾಗುತ್ತಿದೆ.

ಚಿತ್ರದಲ್ಲಿ ಸಾಂಬಾಜಿ ಆಗಿ ವಿಕ್ಕಿ ನಟಿಸಿದ್ದಾರೆ. ಆತನ ಪತ್ನಿ ಯೇನುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದ್ದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಾಂಬಾಜಿ ಪಾತ್ರದಲ್ಲಿ ವಿಕ್ಕಿ ಅಬ್ಬರಿಸಿ ಬೊಬ್ಬರಿದಿರುವಂತೆ ಕಾಣುತ್ತಿದೆ. ಮೊದಲ ನೋಟದಲ್ಲೇ ಟ್ರೈಲರ್ ಸಿನಿಮಾ ಬಗ್ಗೆ ಭರವಸೆ ಮೂಡುವಂತೆ ಮಾಡಿದೆ.

Chhaava trailer Released Rashmika Mandanna attended event despite her leg injury

ಭಾರತದ ಇತಿಹಾಸದಲ್ಲಿ ಮರಾಠ ಸಾಮ್ರಾಜ್ಯವನ್ನು ಮರೆಯುವಂತಿಲ್ಲ. ಮರಾಠ ಸಾಮ್ರಾಟರಲ್ಲಿ ಶಿವಾಜಿ ಹಾಗೂ ಹಿರಿಯ ಮಗ ಸಾಂಬಾಜಿ ಪ್ರಮುಖರು. ತಂದೆಯ ಬಳಿಕ ರಾಜ್ಯದ ಕಟ್ಟಿ ಬೆಳೆಸಿದ್ದು ಸಾಂಬಾಜಿ. ದೆಹಲಿ ಸುಲ್ತಾನರಿಂದ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು ಆತನ ಭಾರೀ ಹೋರಾಟ ಮಾಡಿದ್ದ. ಈ ಎಲ್ಲಾ ಸಂಗತಿಗಳನ್ನು 'ಚಾವ' ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಸಾಂಬಾಜಿ- ಯೇಸುಬಾಯಿ ನೃತ್ಯ ಮಾಡುವ ಸನ್ನಿವೇಶವೂ ಚಿತ್ರದಲ್ಲಿದೆ. ಇನ್ನು ಮೈ ಜುಮ್ ಎನಿಸುವ ಯುದ್ಧ ಸನ್ನಿವೇಶಗಳು, ಸಾಂಬಾಜಿ ಶೌರ್ಯ-ಪರಾಕ್ರಮ, ಎದುರಾಳಿಗಳ ವಿರುದ್ಧ ತನ್ನ ಸೈನಿಕರನ್ನು ಹುರಿದುಂಬಿಸುತ್ತಿದ್ದದ್ದು, ಮರಾಠ ಸಾಮ್ರಾಜ್ಯದ ವೈಭವ ಹೀಗೆ ಸಾಕಷ್ಟು ಹೈಲೆಟ್ಸ್ ಟ್ರೈಲರ್‌ನಲ್ಲಿ ನೋಡಬಹುದು. ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ, ಸರ್ಸೇನಾಪತಿ ಹಂಬಿರಾವ್ ಮೋಹಿತೆ ಆಗಿ ಅಶುತೋಷ್ ರಾಣಾ ಅಬ್ಬರಿಸಿದ್ದಾರೆ.

ಟ್ರೈಲರ್ ಕೊನೆಯಲ್ಲಿ ಸಿಂಹದೊಂದಿಗೆ ವಿಕ್ಕಿ ಕಾದಾಡುವ ದೃಶ್ಯವನ್ನು ನೋಡಬಹುದು. ಡಿಸೆಂಬರ್ ಮೊದಲ ವಾರದಲ್ಲೇ 'ಚಾವ' ಸಿನಿಮಾ ಬಿಡುಗಡೆಗೆ ಪ್ರಯತ್ನಿಸಲಾಗಿತ್ತು. ಆದರೆ ಆಗ 'ಪುಷ್ಪ'-2 ಬಂದಿದ್ದರಿಂದ ಈ ಚಿತ್ರವನ್ನು ಮುಂದೂಡಲಾಗಿತ್ತು. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. 'ಸ್ತ್ರೀ-2' ಸಿನಿಮಾ ಮಾಡಿ ಗೆದ್ದ ಮ್ಯಾಡಾಕ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ.

ಮುಂಬೈನಲ್ಲಿ 'ಚಾವ' ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ನಡೀತು. ಇತ್ತೀಚೆಗೆ ಜಿಮ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದರು. ಕಾಲಿಗೆ ಪೆಟ್ಟಾಗಿತ್ತು. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದರು. ಆದರೆ ಕಾಲಿಗೆ ಪೆಟ್ಟಾಗಿದ್ದರೂ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ವೀಲ್ಹ್ ಚೇರ್‌ನಲ್ಲಿ ಬಂದಿಳಿದ ರಶ್ಮಿಕಾ ಕುಂಟುತ್ತಲ್ಲೇ ವೇದಿಕೆ ಏರಿದರು. ಆ ವೀಡಿಯೋ ವೈರಲ್ ಆಗುತ್ತಿದೆ.

More from Filmibeat

English summary
Vicky Kaushal And Rashmika Mandanna starrer Chhaava trailer out now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X