twitter
    For Quick Alerts
    ALLOW NOTIFICATIONS  
    For Daily Alerts

    'ಚಪಾಕ್' ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ತೀರಾ ಕಡಿಮೆ

    |

    ದೀಪಿಕಾ ಪಡುಕೋಣೆ ನಟನೆಯ 'ಚಪಾಕ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ದೇಶಾದ್ಯಂತ ಬಿಡುಗಡೆಯಾಗಿರುವ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

    ಸಿನಿಮಾ ನೋಡಿದ ಬಹುಪಾಲು ಮಂದಿ ಇಷ್ಟ ಪಟ್ಟಿದ್ದಾರೆ. ಆದರೆ, ಸಿನಿಮಾದ ಮೊದಲ ದಿನದ ಕಲೆಕ್ಷನ್ ತೀರಾ ಕಡಿಮೆ ಇದೆ. ಅದರ ಮೊತ್ತ ನೋಡಿದರೆ ಆಶ್ಚರ್ಯ ಆಗುತ್ತದೆ. ದೀಪಿಕಾ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಕಲೆಕ್ಷನ್ ಭಾರಿ ಇಳಿಮುಖವಾಗಿದೆ.

    Chhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆ Chhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆ

    'ಚಪಾಕ್' ಮೊದಲ ದಿನದ ಕಲೆಕ್ಷನ್ 6 ಕೋಟಿ ಮಾಡಬಹುದು ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು. ಒಂದು ಬಾಲಿವುಡ್ ಸಿನಿಮಾಗೆ 6 ಕೋಟಿ ಎನ್ನುವುದು ತೀರಾ ಕಡಿಮೆ. ಆದರೆ, ಈ ಹಂತಕ್ಕೆ ಕೂಡ 'ಚಪಾಕ್'ಗೆ ಹೋಗಲು ಆಗಲಿಲ್ಲ.

    'ಚಪಾಕ್' ಕಲೆಕ್ಷನ್ ಕೇವಲ 4.75 ಕೋಟಿ

    'ಚಪಾಕ್' ಕಲೆಕ್ಷನ್ ಕೇವಲ 4.75 ಕೋಟಿ

    'ಚಪಾಕ್' ಸಿನಿಮಾ ಮೊದಲ ದಿನ ಕೇವಲ 4.75 ಕೋಟಿ ಗಳಿಕೆ ಮಾಡಲು ಮಾತ್ರ ಸಾಧ್ಯವಾಗಿದೆ. ಸಿನಿಮಾಗೆ ಪಾಸಿಟಿವ್ ರಿವ್ಯೂ ಸಿಕ್ಕಿದೆ. ಜನರು, ವಿಮರ್ಶಕರು ಇಷ್ಟಪಟ್ಟಿದ್ದಾರೆ. ಹೀಗಿದ್ದರೂ, ಸಿನಿಮಾದ ಕಲೆಕ್ಷನ್ ತೀರಾ ಕಡಿಮೆಯಾಗಿದೆ. ಅಂದಹಾಗೆ, ದೀಪಿಕಾ ಹಿಂದಿನ ಸಿನಿಮಾ 'ಪದ್ಮಾವತಿ' ಮೊದಲ ದಿನ 18 ಕೋಟಿ ಗಳಿಕೆ ಮಾಡಿತ್ತು.

    ಈ ರಾಜ್ಯದಲ್ಲಿ ದೀಪಿಕಾ ಅಭಿನಯದ 'ಚಪಾಕ್' ಚಿತ್ರಕ್ಕೆ ಸಿಕ್ತು ತೆರಿಗೆ ವಿನಾಯಿತಿಈ ರಾಜ್ಯದಲ್ಲಿ ದೀಪಿಕಾ ಅಭಿನಯದ 'ಚಪಾಕ್' ಚಿತ್ರಕ್ಕೆ ಸಿಕ್ತು ತೆರಿಗೆ ವಿನಾಯಿತಿ

    ವಿವಾದವೇ ಕಾರಣವಾಯಿತೆ?

    ವಿವಾದವೇ ಕಾರಣವಾಯಿತೆ?

    ಸಿನಿಮಾದ ಕಲೆಕ್ಷನ್ ಇಳಿಮುಖ ಆಗಲು ಕಾರಣ ಏನು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಬರುತ್ತದೆ. ಜೆ ಎನ್ ಯೂ ಪ್ರತಿಭಟನೆಗೆ ಬೆಂಬಲ ನೀಡಿದ್ದ ದೀಪಿಕಾ ಪಡುಕೋಣೆ ದೊಡ್ಡ ವಿವಾದ ಮಾಡಿಕೊಂಡಿದ್ದರು. ದೀಪಿಕಾ ನಡೆಯನ್ನು ಅನೇಕರು ವಿರೋಧಿಸಿದ್ದರು. ಟ್ವಿಟ್ಟರ್ ನಲ್ಲಿ #BoycottChhapaak ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು. ಸಿನಿಮಾದ ಮೇಲೆ ಇದು ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬಿದ್ದಿರಬಹುದು.

    ಪೈಪೋಟಿ ನೀಡುತ್ತಿದೆ 'ತಾನಾಜಿ'

    ಪೈಪೋಟಿ ನೀಡುತ್ತಿದೆ 'ತಾನಾಜಿ'

    ಅಜಯ್ ದೇವಗನ್ ನಟನೆಯ ನೂರನೇ ಸಿನಿಮಾ 'ತಾನಾಜಿ' ಕೂಡ ಕಳೆದ ಶುಕ್ರವಾರವೇ ಬಿಡುಗಡೆಯಾಗಿದೆ. ಈ ಸಿನಿಮಾ 'ಚಪಾಕ್'ಗೆ ದೊಡ್ಡ ಪೈಪೋಟಿ ನೀಡಿದೆ. ಈ ಸಿನಿಮಾ ಮೊದಲ ದಿನ 16 ಕೋಟಿ ಗಳಿಕೆ ಮಾಡಿದೆ. 'ಚಪಾಕ್' ಸಿನಿಮಾಗೆ ಪ್ರೇಕ್ಷಕರು ಕಡಿಮೆ ಆಗಲು ಈ ಸಿನಿಮಾ ಪ್ರಮುಖ ಕಾರಣವಾಗಿದೆ.

    'ಚಪಾಕ್' ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.!'ಚಪಾಕ್' ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.!

    ಸೌತ್ ನಲ್ಲಿ 'ದರ್ಬಾರ್' ಅಬ್ಬರ

    ಸೌತ್ ನಲ್ಲಿ 'ದರ್ಬಾರ್' ಅಬ್ಬರ

    ಇತ್ತ ಸೌತ್ ನಲ್ಲಿಯೂ 'ಚಪಾಕ್' ಸಿನಿಮಾಗೆ ಸಾಲು ಸಾಲು ಸಿನಿಮಾಗಳು ಸ್ಪರ್ಧೆ ನೀಡುತ್ತಿದೆ. ರಜನಿಕಾಂತ್ ನಟನೆಯ 'ದರ್ಬಾರ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ದರ್ಬಾರ್' ಮುಂದೆ 'ಚಪಾಕ್' ಮೌನವಾಗಿದೆ. ಇದರ ಜೊತೆಗೆ ಟಾಲಿವುಡ್ ಚಿತ್ರ ಪ್ರೇಮಿಗಳು ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಸಿನಿಮಾಗಾಗಿ ಕಾಯುತ್ತಿದ್ದಾರೆ.

    ಇದು ಕಮರ್ಷಿಯಲ್ ಸಿನಿಮಾವಲ್ಲ

    ಇದು ಕಮರ್ಷಿಯಲ್ ಸಿನಿಮಾವಲ್ಲ

    ಈ ಎಲ್ಲ ಕಾರಣಗಳನ್ನು ಬಿಟ್ಟು ನೋಡಿದರೆ, 'ಚಪಾಕ್' ಒಂದು ಕಮರ್ಷಿಯಲ್ ಸಿನಿಮಾ ಅಲ್ಲ. ಮಹಿಳಾ ಪ್ರಧಾನ ಸಿನಿಮಾಗಳು, ಸಾಮಾಜಿಕ ಸಂದೇಶದ ಸಿನಿಮಾಗಳು ದೊಡ್ಡ ಮಟ್ಟದ ಹಣ ಮಾಡಲು ಸಾಧ್ಯ ಆಗುವುದಿಲ್ಲ. ಅಲ್ಲದೆ, ಶುಕ್ರವಾರದ ಕಲೆಕ್ಷನ್ ಕಡಿಮೆ ಇದ್ದರೂ, ಶನಿವಾರ ಹಾಗೂ ಭಾನುವಾರದ ಕಲೆಕ್ಷನ್ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ.

    English summary
    Deepika Padukone'S 'Chhapaak' hindi movie 1st day box office collection.
    Saturday, January 11, 2020, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X