'ಚಪಾಕ್ ಫ್ಲಾಪ್ ಆಗಿಲ್ಲ': ಸಕ್ಸಸ್ ಆಗಿದೆ ಅಂತಿದೆ ಲೆಕ್ಕಾಚಾರ

ಬಾಲಿವುಡ್ ದೀಪಿಕಾ ಪಡುಕೋಣೆ ನಟಿಸಿದ್ದ ಚಪಾಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ. ಇದು ಫ್ಲಾಪ್ ಚಿತ್ರ ಎಂದೆಲ್ಲ ಹೇಳಲಾಗುತ್ತಿದೆ. ದೊಡ್ಡ ಮಟ್ಟದ ಆದಾಯದ ನಿರೀಕ್ಷೆಯಲ್ಲಿದ್ದ ಚಿತ್ರ ಮೊದಲ ದಿನದಿಂದಲೂ ನಿರಸ ಗಳಿಕೆ ಕಂಡಿತ್ತು.

ಮೊದಲ ಕೇವಲ 4.7 ಕೋಟಿ ಮಾತ್ರ ಗಳಿಸಿತ್ತು. ಎರಡನೇ ದಿನ 6.5 ಕೋಟಿ ಹಾಗೂ ಮೂರನೇ 7 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ ಇದುವರೆಗೂ ಸುಮಾರು 35 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಇದು ಚಪಾಕ್ ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದ್ದು, ಸಿನಿಮಾ ಸೋತಿದೆ ಎಂದೇ ನಿರ್ಧರಿಸಲಾಗಿತ್ತು.

ಆದರೆ, ಚಪಾಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿಲ್ಲ. ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಮಾಡಿದೆ. ಲಾಭ ಮಾಡಿರುವ ಚಿತ್ರವನ್ನು ಹೇಗೆ ಸೋತಿದೆ ಎಂದು ಹೇಳಲಾಗುತ್ತೆ. ಹೌದು, ಚಪಾಕ್ ಸಿನಿಮಾದ ಬಜೆಟ್ 35 ಕೋಟಿ ಮಾತ್ರ. ಈ ಮೊತ್ತಕ್ಕಿಂತ ಹೆಚ್ಚು ಗಳಿಕೆ ಕಂಡಿದೆ ದೀಪಿಕಾ ಚಿತ್ರ.

Chhapaak Movie Success In Box Office

ಈ ಕುರಿತು ದಕ್ಷಿಣ ಭಾರತದ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿದ್ದು, ''ಚಿತ್ರದ ಒಟ್ಟು ಬಜೆಟ್ 35 ಕೋಟಿ, ಸ್ಯಾಟ್ ಲೈಟ್ ಹಕ್ಕು, ಡಿಜಿಟಲ್ ಹಕ್ಕು 23 ಕೋಟಿ, ಆಡಿಯೋ ಹಕ್ಕು 3 ಕೋಟಿ. ಬಿಡುಗಡೆಗೂ ಮುಂಚೆಯೇ 26 ಕೋಟಿ ಆದಾಯ ಬಂದಿತ್ತು.

''ಚಪಾಕ್ ಸಿನಿಮಾದ ಒಟ್ಟು ಗಳಿಕೆ 35 ಕೋಟಿ. ವಿದೇಶದಲ್ಲಿ ಸುಮಾರು 15 ಕೋಟಿವರೆಗೂ ಗಳಿಕೆ ಕಂಡಿದೆ. ಜೊತೆ ಕೆಲವು ಕಡೆ ಷೇರು ಇರುತ್ತೆ'' ಎಂಬ ಮಾಹಿತಿ ನೀಡಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಚಪಾಕ್ ಸಕ್ಸಸ್ ಆಗಿದೆ. ನಿರ್ಮಾಪಕರು ಲಾಭದಲ್ಲಿದ್ದಾರೆ.

Chhapaak Movie Success In Box Office

ಜೆ ಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು ಎಂಬ ಕಾರಣಕ್ಕೆ, ಕೆಲವು ರಾಜ್ಯಗಳಲ್ಲಿ ಚಪಾಕ್ ಸಿನಿಮಾ ವಿರೋಧ ಎದುರಿಸಬೇಕಾಯಿತು. ಇದರ ಪರಿಣಾಮ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿಲ್ಲ. ಹಾಗಾಗಿ, ಕಲೆಕ್ಷನ್ ಮೇಲೆ ಪ್ರಭಾವ ಬೀರಿತು ಎಂದು ವಿಶ್ಲೇಷಿಸಲಾಯಿತು. ಆದರೆ, ಈ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಚಪಾಕ್ ಗೆದ್ದು ಬೀಗಿದೆ.

More from Filmibeat

English summary
Bollywood actress Deepika Padukone starrer Chhapaak movie not a flop movie, its success movie. here is the details of chhapaak collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X