twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಸಿನಿಮಾ ನೀತಿ ಘೋಷಿಸಲಿರುವ ಚತ್ತೀಸ್‌ಘಡ: ವಿಶೇಷತೆಗಳೇನು?

    |

    ಚತ್ತೀಸ್‌ಘಡ ರಾಜ್ಯ ಸರ್ಕಾರವು ಹೊಸ ಸಿನಿಮಾ ನೀತಿಯನ್ನು ರೂಪಿಸುತ್ತಿದ್ದು, ಕೆಲವೇ ದಿನಗಳಲ್ಲಿ ಘೋಷಿಸಲಿದೆ.

    ರಾಜ್ಯದಲ್ಲಿ ಚಿತ್ರೀಕರಣ, ಚಿತ್ರ ನಿರ್ಮಾಣ ಹೆಚ್ಚು ಮಾಡುವ ಮೂಲಕ ಪ್ರವಾಸೋದ್ಯಮವನ್ನು ಹೆಚ್ಚಿಸುವ ಗುರಿಯೊಂದಿಗೆ ಹೊಸ ಸಿನಿಮಾ ನೀತಿ 2021ರ ಕರಡು ತಯಾರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಆಗಲಿದೆ.

    ಚತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಭಗೇಲ್ ನೇತೃತ್ವದಲ್ಲಿ ನಡೆದಿರುವ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ಹೊಸ ಸಿನಿಮಾ ನೀತಿ ಜಾರಿ ಮಾಡುವ ಬಗ್ಗೆ ಚರ್ಚೆ ನಡೆದು ಸಿಎಂ ಒಪ್ಪಿಗೆಯನ್ನೂ ಸೂಚಿಸಿದ್ದು, ಹೊಸ ನೀತಿಯ ಕರಡು ಸಿದ್ಧವಾಗುತ್ತಿದೆ.

    Chhattisgarh State Government To Formulate Film Policy 2021 To Facilitate Film Shooting

    ಚತ್ತಿಸ್‌ಘಡ ರಾಜ್ಯ ಸರ್ಕಾರವು ಬಾಲಿವುಡ್ ಹಾಗು ಒಟಿಟಿ ಕಂಟೆಂಟ್ ನಿರ್ಮಾಣ ಮಾಡುವವರನ್ನು ಸೆಳೆಯಲು ಉದ್ದೇಶಿಸಿದ್ದು, ರಾಜ್ಯದ ಶ್ರೀಮಂತ ನೈಸರ್ಗಿಕ ಸಂಪತ್ತು, ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆದು ರಾಜ್ಯದ ಗುರುತು ರಾಷ್ಟ್ರಮಟ್ಟದಲ್ಲಿ ಹೆಚ್ಚಾಗಲಿ ಆ ಮೂಲಕ ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿ ಎಂಬುದು ಸರ್ಕಾರದ ಗುರಿ.

    ಈ ಬಗ್ಗೆ ಮಾತನಾಡಿರುವ ಸರ್ಕಾರದ ಸಲಹೆಗಾರ ಗೌರವ್ ದ್ವಿವೇದಿ, ''ಚತ್ತೀಸ್‌ಘಡ ಸರ್ಕಾರದ ಹೊಸ ಸಿನಿಮಾ ಪಾಲಿಸಿಯು ರಾಜ್ಯದಲ್ಲಿ ಯುವಕರಿಗೆ ಸಿನಿಮಾ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ಉದ್ಯೋಗ ಒದಗಿಸಲಿದೆ. ರಾಜ್ಯ ಸರ್ಕಾರ ಹೊರಡಿಸಲಿರುವ ಹೊಸ ಸಿನಿಮಾ ಪಾಲಿಸಿಯು ಚಿತ್ರರಂಗಕ್ಕೆ ಸಹಕಾರಿಯಾಗುವ ಜೊತೆ-ಜೊತೆಗೆ ರಾಜ್ಯದ ಅಭಿವೃದ್ಧಿಗೂ ಸಹಕಾರಿಯಾಗಲಿದೆ'' ಎಂದಿದ್ದಾರೆ.

    ಚತ್ತೀಸ್‌ಘಡವು ಹೆಚ್ಚು ನೈಸರ್ಗಿಕ ಸಂಪತ್ತನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಹಲವು ಜಲಪಾತಗಳು ಸಹ ರಾಜ್ಯದಲ್ಲಿವೆ. ರಾಜ್ಯದಲ್ಲಿ ಪುರಾತನ ದೇವಾಲಯಗಳು, ಸುಂದರ ಕೋಟೆಗಳು ಸಹ ಇವೆ. ಸಿನಿಮಾ ಚಿತ್ರೀಕರಣಕ್ಕೆ ಬೇಕಾದ ಹಲವು ಸುಂದರ ಸ್ಥಳಗಳು ಚತ್ತೀಸ್‌ಘಡದಲ್ಲಿವೆ.

    ಎಮ್ಮಿ ಎಂಟರ್ಟೈನ್‌ಮೆಂಟ್ ಸೇರಿದಂತೆ ಇನ್ನೂ ಕೆಲವು ನಿರ್ಮಾಣ ಸಂಸ್ಥೆಗಳು ಚತ್ತೀಸ್‌ಘಡ ಸರ್ಕಾರದ ಹೊಸ ಸಿನಿಮಾ ನೀತಿ ಜಾರಿ ಮಾಡುವ ಉದ್ದೇಶವನ್ನು ಸ್ವಾಗತಿಸಿವೆ.

    ಕೆಲವು ದಿನಗಳ ಹಿಂದಷ್ಟೆ ಜಮ್ಮು ಕಾಶ್ಮೀರವು ಹೊಸ ಸಿನಿಮಾ ನೀತಿಯನ್ನು ಘೋಷಿಸಿತು. ಬಾಲಿವುಡ್ ನಟ ಅಮೀರ್ ಖಾನ್, ರಾಜ್ ಕುಮಾರ್ ಹಿರಾನಿ, ಜಮ್ಮು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಹೊಸ ಸಿನಿಮಾ ನೀತಿಯನ್ನು ಬಿಡುಗಡೆಗೊಳಿಸಿದರು.

    ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲು ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ರಾಜ್ಯಪಾಲ ಮನೋಜ್ ಸಿನ್ಹಾ ಹೇಳಿದ್ದಾರೆ. ಜೊತೆಗೆ ಜಮ್ಮು ಕಾಶ್ಮೀರಕ್ಕೆ ಬರುವ ಸಿನಿಮಾ ಕರ್ಮಿಗಳಿಗೆ ವಿಶೇಷ ಭತ್ಯೆಯನ್ನು ಸಹ ಘೋಷಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಸ್ಥಳೀಯವಾಗಿ ಸಿನಿಮಾ ನಿರ್ಮಾಣವನ್ನು ಸಹ ಹೊಸ ನೀತಿಯು ಬೆಂಬಲಿಸಿದೆ. ಸದ್ಯಕ್ಕೆ ಮುಚ್ಚಿರುವ ಚಿತ್ರಮಂದಿರಗಳನ್ನು ತೆರೆಯಲು, ಹಾಳಾಗಿರುವ ಚಿತ್ರಮಂದಿರಗಳನ್ನು ಅಭಿವೃದ್ಧಿಪಡಿಸುವ, ಮಲ್ಟಿಫ್ಲೆಕ್ಸ್‌ಗಳು ಕಣಿವೆ ರಾಜ್ಯದಲ್ಲಿ ಕಾರ್ಯಾರಂಭ ಮಾಡಲು ಸೂಕ್ತ ಅವಕಾಶವನ್ನು ಮಾಡಿಕೊಡುವುದಾಗಿ ಹೊಸ ಸಿನಿಮಾ ನೀತಿಯನ್ನು ಹೇಳಲಾಗಿದೆ. ಇಡೀ ಜಮ್ಮು ಕಾಶ್ಮೀರದಲ್ಲಿ ಕೇವಲ ಒಂದು ಪಿವಿಆರ್ ಅಷ್ಟೆ ಇದೆ. ಶ್ರೀನಗರದಲ್ಲಿ 10 ಚಿತ್ರಮಂದಿರಗಳು ಇವೆಯಾದರೂ ಎಲ್ಲವೂ ಬಂದ್ ಆಗಿವೆ ಕೆಲವನ್ನು ಆಸ್ಪತ್ರೆಗಳಾಗಿ ಬದಲಾಯಿಸಲಾಗಿದೆ.

    English summary
    Chhattisgarh government to formulate film policy 2021 to facilitate film shooting. Government says it would be helpful to movie industry and development of Chhattisgarh state.
    Friday, September 10, 2021, 17:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X