For Quick Alerts
  ALLOW NOTIFICATIONS  
  For Daily Alerts

  ತೆಲುಗು 'ಬ್ರಹ್ಮಾಸ್ತ್ರ'ದಲ್ಲಿ ಚಿರಂಜೀವಿ ಧ್ವನಿ: ಕನ್ನಡದಲ್ಲಿ ಶಿವಣ್ಣ or ರವಿಚಂದ್ರನ್?

  |

  ಬಾಲಿವುಡ್ 'ಬ್ರಹ್ಮಾಸ್ತ್ರ' ಚಿತ್ರದ ಘರ್ಜನೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅದಾಗಲೇ ಚಿತ್ರತಂಡ ರಿಲೀಸ್ ದಿನಾಂಕವನ್ನು ಕೂಡ ಪ್ರಕಟ ಮಾಡಿದೆ ಚಿತ್ರತಂಡ. ಚಿತ್ರದ ಶೂಟಿಂಗ್ ಕೂಡ ಮುಗಿದಿದ್ದು, ಪ್ರಚಾರ ಕಾರ್ಯವನ್ನೂ ಕೂಡ ಆರಂಭಿಸಲಾಗಿದೆ.

  ಬರೋಬ್ಬರಿ 5 ವರ್ಷದ ಬಳಿಕ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಹಿಂದಿಯ ಜೊತೆಗೆ, ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿಯೂ ರಿಲೀಸ್ ಆಗಲಿದೆ. ಈಗಾಗಲೇ ಎಲ್ಲಾ ಭಾಷೆಗಳಲ್ಲೂ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಆಗಿದೆ.

  ವಿಶಾಖಪಟ್ಟಣದಲ್ಲಿ ರಣ್ಬೀರ್ ಜೊತೆ ರಾಜಮೌಳಿ: 'ಬ್ರಹ್ಮಾಸ್ತ್ರ'ದ ಭರ್ಜರಿ ಪ್ರಚಾರ!ವಿಶಾಖಪಟ್ಟಣದಲ್ಲಿ ರಣ್ಬೀರ್ ಜೊತೆ ರಾಜಮೌಳಿ: 'ಬ್ರಹ್ಮಾಸ್ತ್ರ'ದ ಭರ್ಜರಿ ಪ್ರಚಾರ!

  ಇದೀಗ ಚಿತ್ರತಂಡ ಮತ್ತೊಂದು ಹಂತ ತಲುಪಿದೆ. ಆಯಾ ಚಿತ್ರರಂಗದ ನಟರಿಂದ ಚಿತ್ರಕ್ಕೆ ಧ್ವನಿ ನೀಡುವ ಕಾರ್ಯ ಭರದಿಂದ ಸಾಗಿದೆ. 'ಬ್ರಹ್ಮಾಸ್ತ್ರ' ಮೆಗಾ ಸ್ಟಾರ್ ಚಿರಂಜೀವಿ ಧ್ವನಿ ನೀಡಿದ್ದಾರೆ. ಈ ವಿಚಾರವನ್ನು ವಿಡಿಯೋ ಮೂಲಕ ನಿರ್ಮಾಪಕ ಕರಣ್ ಜೋಹರ್ ಹಂಚಿಕೊಂಡಿದ್ದಾರೆ.

  'ಬ್ರಹ್ಮಾಸ್ತ್ರ' ಚಿತ್ರಕ್ಕೆ ನಟ ಚಿರಂಜೀವಿ ಧ್ವನಿ ನೀಡಿದ್ದಾರೆ. ಚಿತ್ರದ ಡೈಲಾಗ್ ಹೇಳುತ್ತಾ ಅಬ್ಬರಿಸಿದ್ದಾರೆ. ಚಿರಂಜೀವಿ ಪವರ್‌ಫುಲ್ ಧ್ವನಿಯಲ್ಲಿ'ಬ್ರಹ್ಮಾಸ್ತ್ರ' ಡೈಲಾಗ್ಸ್ ಮಸ್ತ್ ಎನಿಸುತ್ತೆ. ತೆಲುಗು ಅವತರಣಿಕೆಯ 'ಬ್ರಹ್ಮಾಸ್ತ್ರ'ದಲ್ಲಿ ಚಿರಂಜೀವಿ ಧ್ವನಿ ಇರಲಿದೆ.

  ಎನ್‌ಟಿಆರ್‌ಗೆ ಕೈ ಕೊಟ್ಟ ಆಲಿಯಾ, ದೀಪಿಕಾ: ಸಾಯಿ ಪಲ್ಲವಿ, ರಶ್ಮಿಕಾ ಇಬ್ಬರಲ್ಯಾರು ಹೀರೊಯಿನ್?ಎನ್‌ಟಿಆರ್‌ಗೆ ಕೈ ಕೊಟ್ಟ ಆಲಿಯಾ, ದೀಪಿಕಾ: ಸಾಯಿ ಪಲ್ಲವಿ, ರಶ್ಮಿಕಾ ಇಬ್ಬರಲ್ಯಾರು ಹೀರೊಯಿನ್?

  ಇನ್ನು ಕನ್ನಡದಲ್ಲಿ ಈ ಚಿತ್ರಕ್ಕೆ ಧ್ವನಿ ನೀಡೋದು ಯಾರು ಎನ್ನುವ ಕುತೂಹಲ ಮೂಡಿದೆ. 'ಬ್ರಹ್ಮಾಸ್ತ್ರ' ಚಿತ್ರತಂಡದ ಕನ್ನಡದ ಯಾವ ಸ್ಟಾರ್ ನಟನನ್ನು ಹುಡುಕಿ ಬರಲಿದೆ ಎನ್ನುವುದನ್ನು ನೋಡಬೇಕಿದೆ. ಆದರೆ, ಕನ್ನಡಕ್ಕೆ ಬಂದರೆ ನಟ ಶಿವರಾಜ್‌ಕುಮಾರ್ ಮತ್ತು ರವಿಚಂದ್ರನ್ ಧ್ವನಿ ನೀಡಿದರೆ ಉತ್ತಮ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾಗಿ ಕನ್ನಡದ 'ಬ್ರಹ್ಮಾಸ್ತ್ರ'ದಲ್ಲಿ ಯಾವ ನಟನ ಧ್ವನಿ ಇರಲಿದೆ ಎನ್ನುವುದನ್ನು ನೋಡಬೇಕಿದೆ.

  'ಡಾರ್ಲಿಂಗ್ ಪ್ರಭಾಸ್ ನನ್ನ ಫೇವರಿಟ್ ಆಕ್ಟರ್' ಎಂದ ರಣ್‌ಬೀರ್ ಕಪೂರ್'ಡಾರ್ಲಿಂಗ್ ಪ್ರಭಾಸ್ ನನ್ನ ಫೇವರಿಟ್ ಆಕ್ಟರ್' ಎಂದ ರಣ್‌ಬೀರ್ ಕಪೂರ್

  ವಾರಣಾಸಿಯಲ್ಲಿ 'ಬ್ರಹ್ಮಾಸ್ತ್ರ' ಕೊನೆಯ ಹಂತದ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಅಲ್ಲಿನ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಂಡು ನಟಿ ಆಲಿಯಾ, ರಣ್ಬೀರ್ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಚಿತ್ರೀಕರಣ ಮುಗಿಸಿದ ವಿಚಾರ ಹಂಚಿಕೊಂಡಿದ್ದರು. ಈ ಚಿತ್ರ ಇದೇ ವರ್ಷ ಸೆಪ್ಟೆಂಬರ್ 9ಕ್ಕೆ ರಿಲೀಸ್ ಆಗಲಿದೆ.

  English summary
  Chiranjeevi Voice Over To Ranbir kapoor, Alia Bhatt's Brahmstra For Telugu Version, Who Will Give Kannada Version.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X