For Quick Alerts
  ALLOW NOTIFICATIONS  
  For Daily Alerts

  98 ಕೆಜಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ

  |

  ಹಿಂದಿಯ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಬರೋಬ್ಬರಿ 98 ಕೆಜಿ ತೂಕ ಇಳಿಸಿ ಅಚ್ಚರಿ ಮೂಡಿಸಿದ್ದಾರೆ. ಸೆಲೆಬ್ರಿಟಿಗಳು ಅದರಲ್ಲೂ ಸಿನಿಮಾ ಮಂದಿ ದಪ್ಪು ಆಗುವುದು ಮತ್ತು ತೂಕ ಇಳಿಸಿಕೊಳ್ಳಲು ಕಸರತ್ತು ಮಾಡುವುದು ಸಾಮಾನ್ಯ. ಆದರೆ ಗಣೇಶ್ ಆಚಾರ್ಯ ತೂಕ ಇಳಿಸಿಕೊಂಡ ಪರಿ ನೋಡಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ.

  ಇತ್ತೀಚಿಗೆ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನೋಡಿ ಅನೇಕರು ಆಶ್ಚರ್ಯಚಕಿತರಾದರು. ಆ ಮಟ್ಟಕ್ಕೆ ಗಣೇಶ್ ಆಚಾರ್ಯ ತೂಕ ಇಳಿಸಿಕೊಂಡಿದ್ದಾರೆ. ಗಣೇಶ್ ಆಚಾರ್ಯ ಜೊತೆಗೆ ಗೀತಾ ಕಪೂರ್ ಮತ್ತು ಟೆರೆನ್ಸ್ ಸಹ ಶೋನಲ್ಲಿ ಭಾಗಿಯಾಗಿದ್ದರು. ಮುಂದೆ ಓದಿ...

  200 ಕೆಜಿ ತೂಕ ಇದ್ದ ಗಣೇಶ್

  200 ಕೆಜಿ ತೂಕ ಇದ್ದ ಗಣೇಶ್

  ಸುಮಾರು 200 ಕೆಜಿ ತೂಕ ಇದ್ದ ಗಣೇಶ್ ಆಚಾರ್ಯ ಇದೀಗ 98 ಕೆಜಿ ತೂಕ ಇಳಿಸಿದ್ದಾರೆ. ಸುಮಾರು ಮೂರ್ನಾಲ್ಕು ವರ್ಷಗಳಿಂದ ಗಣೇಶ್ ಆಚಾರ್ಯ ತೂಕ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು, ವರ್ಕೌಟ್ ಮಾಡಿ ಸಣ್ಣಗಾಗಿದ್ದಾರೆ.

  ತೂಕ ಇಳಿಸುವುದು ಕಠಿಣ ಸವಾಲಾಗಿದೆ

  ತೂಕ ಇಳಿಸುವುದು ಕಠಿಣ ಸವಾಲಾಗಿದೆ

  ಈ ಬಗ್ಗೆ 2017ರ ಸಂದರ್ಶನವೊಂದರಲ್ಲಿ ಮಾತನಾಡಿದ್ ಗಣೇಶ್ ಆಚಾರ್ಯ ತೂಕ ಇಳಿಸಿಸುವುದು ಕಠಿಣ ಸವಾಲಾಗಿದೆ. ಒಂದೂವರೆ ವರ್ಷಗಳಿಂದ ಕಸರತ್ತು ಮಾಡುತ್ತಿದ್ದೇನೆ. ನನ್ನ ತೂಕ 200 ಕೆಜಿ ಇದೆ. ಇದೀಗ ಈ ತೂಕವನ್ನು ಇಳಿಸುತ್ತಿದ್ದೇನೆ' ಎಂದು ಹೇಳಿದ್ದರು.

  ಒಂದೂವರೆ ವರ್ಷದಲ್ಲಿ 85 ಕೆಜಿ ತೂಕ ಇಳಿಕೆ

  ಒಂದೂವರೆ ವರ್ಷದಲ್ಲಿ 85 ಕೆಜಿ ತೂಕ ಇಳಿಕೆ

  ಗಣೇಶ್ ಆಚಾರ್ಯ ವರ್ಕೌಟ್ ಗೆ ಅಜಯ್ ನಾಯ್ಡು ತರಬೇತಿ ನೀಡಿದ್ದಾರೆ. ಒಂದೂವರೆ ವರ್ಷದಲ್ಲಿ ಸುಮಾರು 85 ಕೆಜಿ ತೂಕ ಇಳಿಸಿರುವುದಾಗಿ ಗಣೇಶ್ ಆಚಾರ್ಯ ಹೇಳಿದ್ದಾರೆ. ಪ್ರತೀ ದಿನ ಜಿಮ್ ನಲ್ಲಿ ವರ್ಕೌಟ್ ಮಾಡುವ ಗಣೇಶ್ ಆಚಾರ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಬಟ್ಟೆಯ ಗಾತ್ರ ಕಡಿಮೆ ಆಗಿದೆ

  ಬಟ್ಟೆಯ ಗಾತ್ರ ಕಡಿಮೆ ಆಗಿದೆ

  ರಾಷ್ಟ್ರ ಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ತೂಕ ಇಳಿಕೆಯ ವ್ಯತ್ಯಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ತುಂಬಾ ತೂಕ ಇದ್ದಾಗಲು ನೃತ್ಯ ಮಾಡಿದ್ದೇನೆ. ಅವತ್ತಿಗಿಂತ ಈಗ ನನ್ನ ನೃತ್ಯದಲ್ಲಿ ಶಕ್ತಿ ದ್ವಿಗುಣವಾಗಿದೆ. ಮಾತ್ರವಲ್ಲ ನನ್ನ ಬಟ್ಟೆಯ ಗಾತ್ರ ಕಡಿಮೆ ಆಗಿದೆ ಎಂದು ಹೇಳಿದ್ದಾರೆ.

  English summary
  Choreographer Ganesh Acharya lost 98 kgs. He reveals weight loss journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X