Just In
Don't Miss!
- News
‘ನಕಲಿ ವ್ಯಾಕ್ಸಿನೇಷನ್’ ವಿಡಿಯೋ ವೈರಲ್: ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಸುಧಾಕರ್
- Education
Karnataka SSLC Exam 2021: ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾತಿ ಕಡ್ಡಾಯ ಇಲ್ಲ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Sports
ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!
- Automobiles
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- Lifestyle
ಶೇವಿಂಗ್ ಟಿಪ್ಸ್: ಹೀಗೆ ಮಾಡಿದರೆ ತ್ವಚೆ ಮೃದುವಾಗಿರುತ್ತೆ, ತುರಿಕೆ ಇರಲ್ಲ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್ ಖಾನ್ ಸಹಾಯವನ್ನು ನೆನೆದು ಭಾವುಕರಾದ ರೆಮೋ ಡಿಸೋಜಾ
ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ, ಸಿನಿಮಾ ನಿರ್ದೇಶಕ ರೆಮೊ ಡಿಸೋಜಾ ಇತ್ತೀಚೆಗಷ್ಟೆ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಸುಮಾರು ವಾರದ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೆಮೋ ಡಿಸೋಜಾ ಈಗ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ರೆಮೋ ಡಿಸೋಜಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸ್ನೇಹಿತರು ಮತ್ತು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ರೆಮೋ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. ಇದೀಗ ರೆಮೋ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ರೆಮೋ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಆಸ್ಪತ್ರೆಯ ದಿನಗಳನ್ನು ಮತ್ತು ಆ ಸಮಯದಲ್ಲಿ ಸಹಾಯ ಮಾಡಿದ ನಟ ಸಲ್ಮಾನ್ ಖಾನ್ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಸಲ್ಮಾನ್ ಖಾನ್ ಅನ್ನು ದೇವಮಾನವ ಎಂದ ರೆಮೊ ಡಿಸೋಜಾ ಪತ್ನಿ: ಕಾರಣ?
ಸಲ್ಮಾನ್ ಖಾನ್ ಖುದ್ದು ವೈದ್ಯರಿಗೆ ಕರೆ ಮಾಡಿ, ಅವರ ಜೊತೆ ಮಾತನಾಡಿದ್ದಾರೆ. ಎಲ್ಲವನ್ನು ನೋಡಿಕೊಳ್ಳುವುದಾಗಿ ಸಲ್ಮಾನ್ ಖಾನ್ ಹೇಳಿದ್ದರು ಎಂದಿದ್ದಾರೆ. 'ನನ್ನ ಪತ್ನಿ ಜೊತೆ ಸಲ್ಮಾನ್ ಖಾನ್ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ನನ್ನ ಪತ್ನಿ ಸಲ್ಮಾನ್ ಖಾನ್ ಗೆ ಕರೆ ಮಾಡಿದ್ದಾಳೆ. ನಿಜಕ್ಕು ಅವರು ಏಂಜಲ್, ಗೋಲ್ಡನ್ ಹಾರ್ಟ್ ವ್ಯಕ್ತಿ.' ಎಂದಿದ್ದಾರೆ.
'ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಎಷ್ಟು ಅದ್ಭುತ ವ್ಯಕ್ತಿ ಎನ್ನುವುದು ತಿಳಿದಿದೆ. ಆದರೆ ಹೆಚ್ಚು ಮಾತನಾಡುತ್ತಿರಲ್ಲ. ಹೌದು ಸರ್, ಸರಿ ಸರ್ ಎನ್ನುತ್ತಿದೆ ಅಷ್ಟೆ. ಆದರೆ ನನ್ನಪತ್ನಿಯ ಜೊತೆ ತುಂಬಾ ಚೆನ್ನಾಗಿದ್ದಾರೆ. ನಾನು ಆಸ್ಪತ್ರೆಯಲ್ಲಿದ್ದಾಗ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.' ಎಂದು ಸಲ್ನಮಾನ್ ಖಾನ್ ಅವರನ್ನು ಹಾಡಿಹೊಗಳಿದ್ದಾರೆ.
ಈ ಮೊದಲು ರೆಮೋ ಪತ್ನಿ ಲಿಜೆಲ್, ಸಲ್ಮಾನ್ ಖಾನ್ ಸಹಾಯದ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದರು. 'ನನ್ನ ಹೃದಯಾಂತರಾಳದಿಂದ ಸಲ್ಮಾನ್ ಖಾನ್ ಗೆ ಧನ್ಯವಾದಗಳು ಹೇಳುತ್ತೇನೆ. ನಮಗೆ ಭಾವನಾತ್ಮಕವಾಗಿ ಬಹಳ ದೊಡ್ಡ ಆಸರೆಯಾಗಿ ಸಲ್ಮಾನ್ ಖಾನ್ ನಿಂತರು, ನೀವೊಬ್ಬ ದೇವಮಾನವ ನಿಮಗೆ ಧನ್ಯವಾದಗಳು ಭಾಯ್, ಸದಾ ನಮ್ಮೊಂದಿಗೆ ಇದ್ದಿದ್ದಕ್ಕೆ' ಎಂದು ಹೇಳಿದ್ದರು.