'ಅಂಥ ದುಡುಕಿನ ನಿರ್ಧಾರ ಯಾಕೆ ತೆಗೆದು ಕೊಂಡಿರಿ ಸುಶಾಂತ್' ಎಂದು ಸರೋಜ್ ಖಾನ್ ಕೊನೆಯದಾಗಿ ಕೇಳಿದ್ದರು

ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಅನಾರೋಗ್ಯದಿಂದ ಜುಲೈ 3 ಬೆಳಗ್ಗೆ ನಿಧನಹೊಂದಿದ್ದಾರೆ. ಬಾಲಿವುಡ್ ನ ಪ್ರಸಿದ್ಧ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಸರೋಜ್ ಖಾನ್ ಇನ್ನೂ ನೆನಪು ಮಾತ್ರ. ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಕರೀನಾ ಕಪೂರ್ ಸೇರಿದ್ದಂತೆ ಅನೇಕ ಸ್ಟಾರ್ ನಟಿಯಮಣಿಯರಿಗೆ ನೃತ್ಯ ಸಂಯೋಜನೆ ಮಾಡಿದ್ದ ಸರೋಜ ಖಾನ್ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ.

Recommended Video

Saroj Khan no more,ಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ|Bollywood|Filmibeat Kannada

ಸರೋಜ್ ಖಾನ್ ಕೊನೆಯದಾಗಿ ಸುಶಾಂತ್ ಸಿಂಗ್ ಬಗ್ಗೆ ಪೋಸ್ಟ್ ಮಾಡಿದ್ದರು. ಸುಶಾಂತ್ ಸಿಂಗ್ ಆತ್ಮಹತ್ಯೆಯ ವಿಷಯ ಕೇಳಿ ಸರೋಜ್ ಖಾನ್ ತುಂಬಾ ನೊಂದಿದ್ದರು. ಅಚ್ಚರಿಯೆಂದರೆ ಸುಶಾಂತ್ ಸಿಂಗ್ ಜೊತೆ ಸರೋಜ್ ಖಾನ್ ಕೆಲಸ ಮಾಡಿಲ್ಲ. ಅಲ್ಲದೆ ಅವರನ್ನು ಹೆಚ್ಚಾಗಿ ಎಲ್ಲಿಯೂ ಭೇಟಿಯೂ ಆಗಿಲ್ಲ. ಆದರೂ ಸುಶಾಂತ್ ಅವರನ್ನು ತುಂಬಾ ಇಷ್ಟಪಡುತ್ತಿದ್ದರಂತೆ. ಮುಂದೆ ಓದಿ..

ನಿನ್ನ ಈ ನಿರ್ಧಾರ ನನಗೆ ಆಘಾತವಾಗಿದೆ

ನಿನ್ನ ಈ ನಿರ್ಧಾರ ನನಗೆ ಆಘಾತವಾಗಿದೆ

"ನಾನು ಇದುವರೆಗೂ ನಿನ್ನ ಜೊತೆಗೆ ಕೆಲಸ ಮಾಡಿರಲಿಲ್ಲ ಸುಶಾಂತ್. ಆದರೆ, ನಿನ್ನ ಭೇಟಿ ಮಾಡುವ ಅವಕಾಶ ಕೆಲವೊಮ್ಮೆ ಸಿಕ್ಕಿತ್ತು. ನಿನ್ನ ಬದುಕಿನಲ್ಲಿ ಏನು ತೊಂದರೆ ಆಯಿತು? ನೀನು ಇಂಥ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಕ್ಕೆ ನನಗೆ ಆಘಾತವಾಗಿದೆ" ಎಂದು ಬರೆದು ಕೊಂಡಿದ್ದರು.

ನಿನ್ನ ಎಲ್ಲಾ ಸಿನಿಮಾಗಳು ನನಗೆ ತುಂಬಾ ಇಷ್ಟ

ನಿನ್ನ ಎಲ್ಲಾ ಸಿನಿಮಾಗಳು ನನಗೆ ತುಂಬಾ ಇಷ್ಟ

"ಯಾರಾದರೂ ಹಿರಿಯ ಜೊತೆ ಮಾತನಾಡಿದ್ದರೆ ನಿನಗೆ ಸಹಾಯ ಆಗುತ್ತಿತ್ತು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನ ತಂದೆ ಮತ್ತು ಸಹೋದರಿ ಎಷ್ಟು ನೋವು ಅನುಭವಿಸುತ್ತಿದ್ದಾರೋ ನನಗಂತೂ ತಿಳಿದಿಲ್ಲ. ನಿನ್ನ ಎಲ್ಲಾ ಸಿನಿಮಾಗಳನ್ನೂ ಇಷ್ಟಪಟ್ಟಿದ್ದೇನೆ. ನಿನ್ನನು ಸದಾ ಪ್ರೀತಿಸುತ್ತೇನೆ" ಎಂದು ಕೊನೆಯದಾಗಿ ಪೋಸ್ಟ್ ಮಾಡಿದ್ದರು.

ಕಂಬನಿ ಮಿಡಿದ ಬಾಲಿವುಡ್ ಸ್ಟಾರ್

ಕಂಬನಿ ಮಿಡಿದ ಬಾಲಿವುಡ್ ಸ್ಟಾರ್

ಸರೋಜ್ ಖಾನ್ ನಿಧನಕ್ಕೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ನಾಲ್ಕೂವರೆ ದಶಕಗಳ ಕಾಲ ಚಿತ್ರರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದರು. ಸರೋಜ್ ಖಾನ್ ನಿಧನಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿದಿದೆ. ಶಾರುಖ್ ಖಾನ್, ಅಕ್ಷಯ್ ಕುಮಾರ್, ಐಶ್ವರ್ಯ ರೈ, ಮಾಧುರಿ ದೀಕ್ಷಿತ್ ಸೇರಿದ್ದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್

ಉಸಿರಾಟದ ತೊಂದರೆಗೆ ಒಳಗಾಗಿದ್ದ ಸರೋಜ್ ಖಾನ್ ಅವರನ್ನು ಜೂನ್ 17ರಂದು ಮುಂಬೈನ ಬಾಂದ್ರಾದಲ್ಲಿನ ಗುರು ನಾನಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಸತತ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದರು. ಆದರೆ, ಶುಕ್ರವಾರ ರಾತ್ರಿ 1.52ರ ವೇಳೆಗೆ ಹೃದಯಾಘಾತಕ್ಕೆ ಒಳಗಾಗಿ ಅವರು ಕೊನೆಯುಸಿರೆಳೆದಿದ್ದಾರೆ. ತೀವ್ರ ಮಧುಮೇಹ ಮತ್ತು ಇತರೆ ಅನಾರೋಗ್ಯದ ಸಮಸ್ಯೆಗಳು ಅವರನ್ನು ಕಾಡುತ್ತಿದ್ದವು.

More from Filmibeat

English summary
Choreographer Saroj Khan last Instagram post was on Sushant Singh Rajput death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X