ನಾಯಿ ವಿಚಾರಕ್ಕೆ ನಡೆದ ಜಗಳಕ್ಕೆ ಪ್ರತೀಕಾರ? ಡ್ರಗ್ಸ್ ಕೇಸ್‌ನಲ್ಲಿ ಬಾಲಿವುಡ್‌ ನಟಿನ ಶಾರ್ಜಾ ಜೈಲಿಗೆ ಕಳುಹಿಸಿದ ನೆರೆಮನೆಯಾತ!

ಬಾಲಿವುಡ್ ನಟಿ ಕ್ರಿಸನ್ ಪಿರೇರಾನ ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಯುಎಇ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆಕೆ ಶಾರ್ಜಾದ ಸೆಂಟ್ರೆಲ್‌ ಜೈಲ್‌ನಲ್ಲಿ ಇದ್ದಾರೆ. ಏಪ್ರಿಲ್ 1ರಂದು ಆಕೆಯನ್ನು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಕ್ರಿಸನ್ ಪಿರೇರಾ ಕೊಂಡೊಯ್ಯುತ್ತಿದ್ದ ಮೊಮೆಂಟೊ(ಟ್ರೋಫಿ)ದ ಅಡಿಯಲ್ಲಿ ಡ್ರಗ್ಸ್ ಇತ್ತು ಎಂದು ಅಧಿಕಾರಿಗಳು ತಪಾಸಣೆ ವೇಳೆ ಗಮನಿಸಿ ಆಕೆಯನ್ನು ಬಂಧಿಸಿದ್ದಾರೆ.

ಮುಂಬೈ ಪೊಲೀಸರು ನಟಿ ಕ್ರಿಸನ್ ಪಿರೇರಾ ವಿರುದ್ಧ ಬೇಕಂತಲೇ ಷಡ್ಯಂತ್ರ ರೂಪಿಸಿ ಆಕೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿರುವುದಾಗಿ ಹೇಳಿದ್ದಾರೆ. ಮುಂಬೈನಲ್ಲಿ ಆಕೆಯ ನಿವಾಸದ ಬಳಿ ಒಂದು ನಾಯಿಯ ವಿಚಾರಕ್ಕೆ ನಡೆದ ಗಲಾಟೆ ಕಾರಣಕ್ಕೆ ಆಕೆಯನ್ನು ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಸಿದ್ದಾರೆ ಎನ್ನಲಾಗ್ತಿದೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಬೇಕರಿ ಮಾಲೀಕ ಆಂಟೋನಿ ಪಾಲ್, ಒಬ್ಬ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾಜೇಜರ್ ರಾಜೇಶ್ ಬೋಭಟೆ ಎಂಬುವವರನ್ನು ಬಂಧಿಸಿದ್ದಾರೆ.

Chrisann Pereira drugs Case: Fight over pet dog leads to Sadak -2 Actress Jailed In UAE

ಆಂಟೋನಿ ಹಾಗೂ ನಟಿ ಕ್ರಿಸನ್ ಪಿರೇರಾ ಮುಂಬೈನಲ್ಲಿ ಒಂದೇ ಕಟ್ಟದಲ್ಲಿ ವಾಸವಾಗಿದ್ದಾರೆ.
ಇವರು ಮುಂಬೈ ಉಪನಗರ ಮೀರ ರಸ್ತೆಯ ಭಾಗದಲ್ಲಿ ನೆಲೆಸಿದ್ಧಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರಿಸನ್‌ಗಾಗಿ ಆಂಟೋನಿ ಶಾರ್ಜಾ ಟಿಕೆಟ್ ಹಾಗೂ ನಕಲಿ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದಾನೆ ಎಂದು ಕ್ರೈಂ ಬ್ರಾಂಚ್‌ ಇನ್ಸ್‌ಪೆಕ್ಟರ್ ದೀಪಕ್ ಸಾವಂತ್ ಮಾಹಿತಿ ನೀಡಿದ್ದಾರೆ. ಆಂಟೋನಿ ಸಹೋದರಿ ಹಾಗೂ ನಟಿ ಪಿರೇರಾ ಅವರ ತಾಯಿಯ ನಡುವೆ ಸಾಕು ನಾಯಿಯ ವಿಚಾರಕ್ಕೆ ಜಗಳವಾಗಿದೆ. ಇದೇ ವಿಚಾರದಲ್ಲಿ ಆಂಟೋನಿ ಕೂಡ ನಟಿಯ ತಾಯಿ ಜೊತೆ ಕಿರಿಕ್ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

Chrisann Pereira drugs Case: Fight over pet dog leads to Sadak -2 Actress Jailed In UAE

ರಾಜೇಶ್ ಎಂಬುವವನನ್ನು ಆಂಟೋನಿ, ನಟಿ ಕ್ರಿಸನ್ ಪಿರೇರಾ ಬಳಿ ಕಳುಹಿಸಿದ್ದಾನೆ. ಶಾರ್ಜಾದಲ್ಲಿ ವೆಬ್‌ ಸೀರಿಸ್ ಆಡಿಷನ್ ಇದೆ. ಅದಕ್ಕೆ ಈ ಮೊಮೆಂಟೋ ಕೂಡ ತೆಗೆದುಕೊಂಡು ಹೋಗು ಎಂದು ಹೇಳಿದ್ದಾನೆ. ಅದರಲ್ಲಿ ಗಾಂಜಾ, ಮತ್ತಿತ್ತರ ಮಾದಕದ್ರವ್ಯ ಇದ್ದಿದ್ದರಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಪಿರೇರಾ 'ಸಡಕ್ - 2' ಹಾಗೂ 'ಬಟ್ಲಾಹೌಸ್' ಸಿನಿಮಾಗಳಲ್ಲಿ ನಟಿಸಿದ್ಧಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು ಮುಂದೆ ಈ ಕೇಸ್ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

More from Filmibeat

English summary
Chrisann Pereira drugs Case: Fight over pet dog leads to Sadak -2 Actress Pereira Jailed In UAE. Did Mumbai bakery shop owner framed actress Chrisann Pereira in a drug case? know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X