ಸೇಡಿಗಾಗಿ ಡ್ರಗ್ಸ್‌ ಕೇಸ್‌ನಲ್ಲಿ ನಟಿಯನ್ನು ಶಾರ್ಜಾ ಜೈಲಿಗೆ ಕಳಿಸಿದ್ದ ನೆರೆಮನೆಯಾತ; ಕ್ರಿಸನ್ ಫೆರೇರಾ ಬಿಡುಗಡೆ

ಬಾಲಿವುಡ್‌ ನಟಿ ಕ್ರಿಸನ್ ಫೆರೇರಾ ಅನ್ಯಾಯವಾಗಿ ಡ್ರಗ್ಸ್ ಪ್ರಕರಣದಲ್ಲಿ ಶಾರ್ಜಾ ಜೈಲು ಸೇರಿದ್ದರು. ತನ್ನದಲ್ಲದ ತಪ್ಪಿಗೆ ಆಕೆ ಹೊರ ದೇಶದಲ್ಲಿ ಸಂಕಷ್ಟ ಎದುರಿಸುವಂತಾಗಿತ್ತು. ಕ್ರಿಸನ್ ತಪ್ಪು ಮಾಡಲಿಲ್ಲ ಎಂದು ಸಾಬೀತಾಗುತ್ತಿದ್ದಂತೆ ಆಕೆಯನ್ನು ಬಿಡುಗಡೆ ಮಾಡಲಾಗಿದೆ. ಮನೆಗೆ ವಿಡಿಯೋ ಕಾಲ್ ಮಾಡಿ ನಟಿ ಕ್ರಿಸನ್ ಫೆರೇರಾ ಮಾತನಾಡಿದ್ದಾರೆ. ಈ ವಿಡಿಯೋವನ್ನು ಆಕೆಯ ಸಹೋದರ ಹಂಚಿಕೊಂಡಿದ್ದಾರೆ.

ಡ್ರಗ್ಸ್ ಸಾಗಾಟ ಆರೋಪ ಪ್ರಕರಣದಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಕ್ರಿಸನ್ ಫೆರೇರಾ ಅವರನ್ನು ಪೊಲೀಸರು ಬಂಧಿಸಿದ್ದರು. ಆಕೆಯದ್ದೇನು ತಪ್ಪಿಲ್ಲ, ಬೇಕು ಅಂತಲೇ ಆಕೆಯನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎನ್ನುವುದು ಸಾಬೀತಾಗಿದೆ. ಹಾಗಾಗಿ ನಟಿಯನ್ನು ಬಿಡುಗಡೆ ಮಾಡಲಾಗಿದೆ. ನಟಿ ಮನೆಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು ಈ ವೇಳೆ ಮಗಳನ್ನು ನೋಡಿ ತಾಯಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ನಟಿ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. 'ಸಡಕ್‌- 2' ಹಾಗೂ 'ಬಟ್ಲಾ ಹೌಸ್' ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.

Chrisann Pereira Framed in Drugs Case: Finally Actress Released From Sharjah Jail

"ಕ್ರಿಸನ್ ಫೆರೇರಾ ಈಗ ಬಿಡುಗಡೆ ಆಗಿದ್ದಾರೆ. ಇನ್ನು 48 ಗಂಟೆಗಳಲ್ಲಿ ಆಕೆ ಭಾರತಕ್ಕೆ ಬರುತ್ತಾರೆ" ಎಂದು ಆಕೆಯ ಸಹೋದರ ಕೆವಿನ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಏಪ್ರಿಲ್ 1ರಂದು ಶಾರ್ಜಾದಲ್ಲಿ ನಟಿ ಕ್ರಿಸನ್ ಫೆರೇರಾ ಬಂಧನವಾಗಿತ್ತು. ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು ತನಿಖೆ ಮಾಡಿ ಅಸಲಿ ವಿಚಾರ ಬಹಿರಂಗಪಡಿಸಿದ ಮೇಲೆ ಆಕೆಯನ್ನು ಚಾಣಾಕ್ಷತನದಿಂದ ಪ್ರಕರಣದಲ್ಲಿ ಸಿಲುಕಿಸಿದ್ದು ಗೊತ್ತಾಗಿತ್ತು. ಮುಂಬೈ ಪೊಲೀಸರು ದಾಖಲೆಗಳ ಸಮೇತ ಇದನ್ನು ಶಾರ್ಜಾ ಪೊಲೀಸರಿಗೆ ಮನದಟ್ಟು ಮಾಡಿಸಿದ್ದು ನಟಿ ಬಿಡುಗಡೆಯಾಗಿದ್ದಾರೆ.

ಏನಿದು ಕ್ರಿಸನ್ ಫೆರೇರಾ ಡ್ರಗ್ಸ್ ಸಾಗಾಟ ಪ್ರಕರಣ?

ನಟಿ ಕ್ರಿಸನ್ ಫೆರೇರಾ ವಾಸವಾಗಿರುವ ಕಟ್ಟಡದಲ್ಲೇ ಬೇಕರಿ ಮಾಲೀಕ ಆಂಟೋನಿ ಎಂಬಾತನು ವಾಸವಾಗಿದ್ದ. ನಾಯಿಯ ವಿಚಾರಕ್ಕೆ ಆಂಟೋನಿಯ ಸಹೋದರಿ ಹಾಗೂ ನಟಿ ಕ್ರಿಸನ್ ಫೆರೇರಾ ನಡುವೆ ಜಗಳವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆಂಟೋನಿ ಕೂಡ ನಟಿಯ ತಾಯಿ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ನಂತರ ಹೇಗಾದರೂ ಮಾಡಿ ಅವರ ವಿರುದ್ದ ಸೇಡು ತೀರಿಸಿಕೊಳ್ಳಬೇಕು ಎಂದು ಡ್ರಗ್ಸ್‌ ಪ್ರಕರಣದಲ್ಲಿ ನಟಿಯನ್ನು ಸಿಲುಕಿಸುವ ಉಪಾಯ ಮಾಡಿದ್ಧಾನೆ.

Chrisann Pereira Framed in Drugs Case: Finally Actress Released From Sharjah Jail

ರಾಜೇಶ್ ಬೋಭಟೆ ಎಂಬಾತನ ಸಹಾಯದಿಂದ ನಟಿ ಕ್ರಿಸನ್ ಫೆರೇರಾಳನ್ನು ಶಾರ್ಜಾದಲ್ಲಿ ಆಡಿಷನ್‌ಗಾಗಿ ಕಳುಹಿಸಿದ್ದಾನೆ. ವೆಬ್‌ ಸೀರಿಸ್‌ವೊಂದರ ಆಡಿಷನ್ ಇದೆ, ಅದಕ್ಕಾಗಿ ಈ ಮೊಮೆಂಟೊ ತೆಗೆದುಕೊಂಡು ಹೋಗು, ಇದು ಆಡಿಷನ್ ಪ್ರಾಪ್ ಎಂದು ಹೇಳಿದ್ದಾನೆ. ಆದರೆ ಆ ಮೊಮೆಂಟೊ ಅಡಿಯಲ್ಲಿ ಡ್ರಗ್ಸ್‌ ಇಡಲಾಗಿತ್ತು. ಇನ್ನು ನಟಿಗೆ ಶಾರ್ಟಾ ಫ್ಲೈಟ್‌ ಟಿಕೆಟ್ ಜೊತೆಗೆ ನಕಲಿ ರಿಟರ್ನ್ ಟಿಕೆಟ್ ಕೂಡ ಬುಕ್ ಮಾಡಿದ್ದ. ಇದು ತಿಳಿಯದೇ ಕ್ರಿಸನ್ ಫೆರೇರಾ ಮೊಮೆಂಟೊ ಸಮೇತ ಶಾರ್ಜಾ ವಿಮಾನ ನಿಲ್ದಾಣಕ್ಕೆ ಹೋಗಿ ಇಳಿದಿದ್ಧಾರೆ.

ಕ್ರಿಸನ್ ಫೆರೇರಾ ಶಾರ್ಜಾದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ರಾಜೇಶ್ ಅಲ್ಲಿನ ಪೊಲೀಸರಿಗೆ ಫೋನ್ ಮಾಡಿ ನಟಿಯ ಬಳಿ ಡ್ರಗ್ಸ್ ಇರುವುದಾಗಿ ಹೇಳಿದ್ದಾನೆ. ಕೂಡಲೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ಜೈಲಿಗೆ ಹೋಗುತ್ತಿದ್ದಂತೆ ಆಕೆಯನ್ನು ಬಿಡುಗಡೆ ಮಾಡಿಸಲು ಆರೋಪಿಗಳು ಕುಟುಂಬಸ್ಥರ ಬಳಿ 80 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇದೇ ಕೆಲವರನ್ನು ಬಲೆಗೆ ಬೀಳಿಸಲು ಆಂಟೋನಿ, ರಾಜೇಶ್ ಪ್ಲ್ಯಾನ್ ಮಾಡಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

More from Filmibeat

English summary
Chrisann Pereira Framed in Drugs Case: Finally she Released From Sharjah Jail. Actress's Brother shared video call chat video with sister. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X