twitter
    For Quick Alerts
    ALLOW NOTIFICATIONS  
    For Daily Alerts

    ಸಲ್ಮಾನ್ ಖಾನ್‌ಗೆ ಲಿಖಿತ ಮನವಿ ಸಲ್ಲಿಸಿದ ಬಹುರಾಜ್ಯ ಸಿನಿಮಾ ಸಂಘಗಳು

    |

    ಹೊಸ ಸಿನಿಮಾಗಳಿಲ್ಲದೆ, ಕೊರೊನಾ ಕಾರಣಕ್ಕೆ ಜನರಿಲ್ಲದೆ ಜಡವೆದ್ದಿರುವ ಚಿತ್ರಮಂದಿರಗಳಿಗೆ ಜೀವ ಕಳೆ ತುಂಬಲು ಸಾಧ್ಯವಿರುವುದು ಸಲ್ಮಾನ್ ಖಾನ್‌ಗೆ. ಇದೇ ಕಾರಣಕ್ಕೆ ವಿವಿಧ ರಾಜ್ಯಗಳ ಸಿನಿಮಾ ಪ್ರದರ್ಶಕರ, ವಿತರಕರ ಹಾಗೂ ಇನ್ನಿತರೆ ಸಿನಿಮಾ ಸಂಘಗಳು ಒಟ್ಟಾಗಿ ಸಲ್ಮಾನ್ ಖಾನ್‌ಗೆ ಲಿಖಿತ ಮನವಿಯೊಂದನ್ನು ಸಲ್ಲಿಸಿವೆ.

    ಸಲ್ಮಾನ್ ಖಾನ್ ನಟಿಸಿರುವ 'ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯ್' ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬಾರದು, ಬದಲಿಗೆ ನೇರವಾಗಿ ಸಿನಿಮಾ ಮಂದಿರಗಳಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಸಿನಿಮಾ ಸಂಘಗಳು ಸಲ್ಮಾನ್ ಖಾನ್ ಗೆ ಮನವಿ ಮಾಡಿವೆ.

    ಉತ್ತರಖಾಂಡ, ಗುಜರಾತ್, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ವಿದರ್ಭ, ತೆಲಂಗಾಣ ಇನ್ನೂ ಅನೇಕ ರಾಜ್ಯಗಳ ಪ್ರದರ್ಶಕರು, ವಿತರಕರು ಇತರೆ ಸಿನಿಮಾ ಸಂಘಗಳು ಒಟ್ಟಾಗಿ ಲಿಖಿತ ಮನವಿಯನ್ನು ಸಲ್ಮಾನ್ ಖಾನ್ ಗೆ ನೀಡಿವೆ.

    Cinema Associations Request Salman Khan To Release His Movie On Theater

    ಕೊರೊನಾ ದಿಂದಾಗಿ ಚಿತ್ರಮಂದಿರಗಳು ಸತತ ಹತ್ತು ತಿಂಗಳಿನಿಂದ ನಷ್ಟವನ್ನೇ ನೋಡಿದ್ದು, ಜನರನ್ನು ಚಿತ್ರಮಂದಿರಕ್ಕೆ ಸೆಳೆಯಬಲ್ಲಿ ಸಿನಿಮಾ 'ರಾಧೆ' ಹಾಗಾಗಿ ಆ ಸಿನಿಮಾವನ್ನು ಒಟಿಟಿಗೆ ನೀಡಬೇಡಿ ಬದಲಿಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಎಂದು ಮನವಿ ಮಾಡಲಾಗಿದೆ.

    ರಾಧೆ ಸಿನಿಮಾವನ್ನು ಪ್ರಭುದೇವಾ ನಿರ್ದೇಸಿದ್ದು, ಸಿನಿಮಾದಲ್ಲಿ ದಿಶಾ ಪಟಾನಿ ಹಾಗೂ ಮೇಘಾ ಆಕಾಶ್ ನಾಯಕಿಯರಾಗಿದ್ದಾರೆ. ಸಿನಿಮಾದಲ್ಲಿ ರಣದೀಪ್ ಹೂಡಾ, ಜಾಕಿ ಶ್ರಾಫ್ ಸಹ ಇದ್ದಾರೆ.

    'ರಾಧೆ' ಸಿನಿಮಾಕ್ಕೆ ಕೆಲವು ಒಟಿಟಿಗಳು ಭಾರಿ ಮೊತ್ತ ನೀಡುವುದಾಗಿ ಬೇಡಿಕೆ ಇಟ್ಟಿದ್ದವು ಆದರೆ ಈ ವರೆಗೆ ಸಲ್ಮಾನ್ ಖಾನ್ ಅವರು ರಾಧೆ ಸಿನಿಮಾವನನ್ನು ಒಟಿಟಿಗೆ ಮಾರಿಲ್ಲ. ಇತ್ತೀಚೆಗೆ ಝೀ ಸ್ಟುಡಿಯೋಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ಸಲ್ಮಾನ್ ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾದ ವಿತರಣೆ, ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕನ್ನು ಜೀ ಸ್ಟುಡಿಯೋಸ್ ಗೆ ಮಾರಿದ್ದಾರೆ.

    English summary
    Cinema associations from different states request Salman khan to release his next movie Radhe directly on theaters.
    Saturday, January 2, 2021, 18:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X