twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವೈರಸ್ ಮೂಲ ಚೀನಾದಲ್ಲಿ ಚಿತ್ರಮಂದಿರ ಓಪನ್: ಮೊದಲ ದಿನವೇ ಭರ್ಜರಿ ಕಲೆಕ್ಷನ್

    |

    ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಇಡೀ ಜಗತ್ತು ತತ್ತರಿಸುತ್ತಿದ್ದರೆ, ವೈರಸ್‌ ಹರಡಿದ ಮೂಲ ದೇಶ ಚೀನಾದಲ್ಲಿ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಚಿತ್ರಮಂದಿರಗಳನ್ನು ತೆರೆದು ಸಿನಿಮಾ ಪ್ರದರ್ಶನ ಮಾಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

    Recommended Video

    Danish Sait ಬಡಿಸಲಿರುವ French Biryani ಹಿಂದಿನ ಕಥೆ ಕೇಳಿ | Filmibeat Kannada

    ಕಡಿಮೆ ಅಪಾಯದ ವಲಯಗಳೆಂದು ಗುರುತಿಸಿರುವ ಸ್ಥಳಗಳಲ್ಲಿ ಸೋಮವಾರದಿಂದಲೇ ಚಿತ್ರಮಂದಿರಗಳು ಪುನರಾರಂಭವಾಗಿವೆ. ಜನವರಿಯಿಂದ ಚೀನಾದಾದ್ಯಂತ ಎಲ್ಲ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದವು. ಅಂದಹಾಗೆ, ಚಿತ್ರಮಂದಿರಗಳ ಒಳಗೆ ಶೇ 30ರಷ್ಟು ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಹಾಗೆಯೇ ಚಿತ್ರಪ್ರದರ್ಶನದ ಸ್ಥಳಗಳನ್ನು ಶೇ 50ರಷ್ಟು ಇಳಿಸಲಾಗಿದೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ.

    ಮೈಸೂರಿಗರ ಭಾವುಕ ನಂಟು ಅಂತ್ಯ: 'ಶಾಂತಲಾ' ಚಿತ್ರಮಂದಿರ ಇನ್ನು ನೆನಪು ಮಾತ್ರಮೈಸೂರಿಗರ ಭಾವುಕ ನಂಟು ಅಂತ್ಯ: 'ಶಾಂತಲಾ' ಚಿತ್ರಮಂದಿರ ಇನ್ನು ನೆನಪು ಮಾತ್ರ

    ಸಿನಿಮಾ ಹಾಲ್‌ನಲ್ಲಿ ಆಹಾರ ಅಥವಾ ಪಾನೀಯಗಳ ಸೇವನೆಗೆ ಅವಕಾಶ ನೀಡಿಲ್ಲ. ಜಗತ್ತಿನ ಎರಡನೆಯ ಅತಿ ದೊಡ್ಡ ಸಿನಿಮಾ ಮಾರುಕಟ್ಟೆ ಎನಿಸಿರುವ ಚೀನಾದಲ್ಲಿ 2019ರಲ್ಲಿ 9.2 ಬಿಲಿಯನ್ ಡಾಲರ್‌ನಷ್ಟು ಸಿನಿಮಾ ವಹಿವಾಟು ನಡೆದಿತ್ತು.

     Cinemas In China Reopened Amid Coronavirus Crisis

    ಸೋಮವಾರದಿಂದ ಚೀನಾದಲ್ಲಿ 198 ಚಿತ್ರಮಂದಿರಗಳನ್ನು ತೆರೆಯಲಾಗಿದೆ. ಮೊದಲನೆಯ ದಿನವೇ ಸುಮಾರು ನಾಲ್ಕು ಕೋಟಿ ರೂ. ಮೊತ್ತದ ಟಿಕೆಟ್ ಮಾರಾಟವಾಗಿದೆ.

    English summary
    Cinemas in China reopened from Monday after shutdown since Janaury due to Coronavirus pandemic.
    Wednesday, July 22, 2020, 9:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X