For Quick Alerts
  ALLOW NOTIFICATIONS  
  For Daily Alerts

  ಕಂಗನಾ ಜತೆ ಕೆಲಸ ಮಾಡಲು ಖ್ಯಾತ ಛಾಯಾಗ್ರಾಹಕ ಪಿ.ಸಿ ಶ್ರೀರಾಮ್ ಹಿಂದೇಟು

  |

  ನಟಿ ಕಂಗನಾ ರಣಾವತ್ ಸಿನಿಮಾಗಳಿಂದ ಹೆಚ್ಚಾಗಿ ಬೇರೆ ಬೇರೆ ವಿಚಾರಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಹೆಚ್ಚು ಚರ್ಚೆಯಲ್ಲಿರುವ ನಟಿ ಕಂಗನಾ ಸಾಕಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಇದೀಗ ಕಂಗನಾ ಜತೆ ಕೆಲಸ ಮಾಡಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ.

  ಕಂಗನಾ ಬಾಲಿವುಡ್ ನಲ್ಲಿ ಬಹುತೇಕರ ಜೊತೆ ಕಿತ್ತಾಡಿಕೊಂಡಿದ್ದಾರೆ. ನಿರ್ದೇಶಕರು, ಕಲಾವಿದರು ಮತ್ತು ನಿರ್ಮಾಪಕರು ಸೇರಿದಂತೆ ಅನೇಕರ ವಿರುದ್ಧ ಸುಖಾಸುಮ್ಮನೆ ಕಾಮೆಂಟ್ ಮಾಡುತ್ತಾ, ಕಾಲುಕೆರೆದುಕೊಂಡು ಜಗಳಕ್ಕೆ ಹೋಗುವ ಕಂಗನಾರನ್ನು ನೋಡಿ ಬೇಸತ್ತು ಹೋಗಿದ್ದಾರೆ. ಹಾಗಾಗಿ ಕಂಗನಾ ಜತೆ ಕೆಲಸ ಮಾಡದೇ ಇರುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಮುಂದೆ ಓದಿ...

  ಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ: ಉದ್ಧವ್ ಠಾಕ್ರೆಗೆ ವಿರುದ್ಧ ಕಂಗನಾ ಕಿಡಿ

  ಬಾಲಿವುಡ್ ವಿರುದ್ಧ ಸಿಡಿದು ನಿಂತಿರುವ ಕಂಗನಾ

  ಬಾಲಿವುಡ್ ವಿರುದ್ಧ ಸಿಡಿದು ನಿಂತಿರುವ ಕಂಗನಾ

  ಬಾಲಿವುಡ್ ಮಾಫಿಯಾ, ನೆಪೋಟಿಸಂ, ಡ್ರಗ್ಸ್ ಆರೋಪ ಹೀಗೆ ಚಿತ್ರರಂಗದ ವಿರುದ್ಧ ಕಿಡಿಕಾರುತ್ತಿರುವ ಕಂಗನಾ ನಿಧಾನವಾಗಿ ಸಿನಿಮಾಗಳನ್ನು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಕಂಗನಾ ಜತೆ ಕೆಲಸ ಮಾಡಲು ಖ್ಯಾತ ಛಾಯಾಗ್ರಾಹಕ ಪಿ.ಸಿ ಶ್ರೀರಾಮ್ ಸಹ ಹಿಂದೇಟು ಹಾಕಿದ್ದಾರೆ.

  'ವೈ ಪ್ಲಸ್' ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ 'ಕ್ವೀನ್' ಕಂಗನಾ

  ಕಂಗನಾ ಜೊತೆ ಕೆಲಸ ಮಾಡಲ್ಲ ಎಂದ ಖ್ಯಾತ ಛಾಯಾಗ್ರಾಹಕ

  ಕಂಗನಾ ಜೊತೆ ಕೆಲಸ ಮಾಡಲ್ಲ ಎಂದ ಖ್ಯಾತ ಛಾಯಾಗ್ರಾಹಕ

  ದಕ್ಷಿಣ ಭಾರತ ಮತ್ತು ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ಶ್ರೀರಾಮ್ ನಾಯಗನ್, ಇಷ್ಕ್, ಐ, ಶಮಿತಾಬ್, ಪ್ಯಾಡ್ ಮ್ಯಾನ್ ಸೇರಿದ್ದಂತೆ ಸೂಪರ್ ಹಿಟ್ ಸಿನಿಮಾಗಳಿಗೆ ಛಾಯಾಗ್ರಾಹಣ ಮಾಡಿರುವ ಶ್ರೀರಾಮ್ ಕಂಗನಾ ಅಭಿನಯದ ಮುಂದಿನ ಸಿನಿಮಾದಲ್ಲಿ ಕೆಲಸ ಮಾಡಬೇಕಿತ್ತು. ಆದರೀಗ ಸಿನಿಮಾದಿಂದ ಹೊರನಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಕಂಗನಾ ವರ್ತನೆ ನೋಡಿ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

  ಪಿ.ಸಿ ಶ್ರೀರಾಮ್ ಹೇಳಿದ್ದೇನು?

  ಪಿ.ಸಿ ಶ್ರೀರಾಮ್ ಹೇಳಿದ್ದೇನು?

  "ಕಂಗನಾ ಅಭಿನಯದ ಸಿನಿಮಾಗೆ ಛಾಯಾಗ್ರಾಹಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಾನು ಆತಂಕಕ್ಕೆ ಒಳಗಾಗಿದ್ದೇನೆ. ತಯಾರಕರಿಗೆ ನನ್ನ ನಿಲುವನ್ನು ವಿವರಿಸಿದೆ, ಅರ್ಥಮಾಡಿಕೊಂಡರು. ಚಿತ್ರಕ್ಕೆ ಒಳ್ಳೆಯದಾಗಲಿ" ಎಂದು ಟ್ವೀಟ್ ಮಾಡಿ ಸಿನಿಮಾದಿಂದ ಹೊರನಡೆದಿದ್ದಾರೆ.

  ShivSena ಕಾಟದಿಂದ ಹೊರ ಬರ್ತಾಳಾ Kangana? | Oneindia Kannada
  ನಟಿ ಕಂಗನಾ ಪ್ರತಿಕ್ರಿಯೆ

  ನಟಿ ಕಂಗನಾ ಪ್ರತಿಕ್ರಿಯೆ

  ಶ್ರೀರಾಮ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ "ನಿಮ್ಮಂತಹ ಲೆಜೆಂಡ್ ಜೊತೆ ಕೆಲಸ ಮಾಡುವ ಅವಕಾಶ ಕಳೆದುಕೊಂಡಿದ್ದೇನೆ. ಇದು ಸಂಪೂರ್ಣವಾಗಿ ನನಗೆ ನಷ್ಟ. ನನ್ನ ಜೊತೆ ಕೆಲಸ ಮಾಡಲು ನಿಮಗೆ ಏನು ಅನಾನುಕೂಲವಾಗಿದೆ ಎಂದು ನನಗೆ ನಿಖರವಾಗಿ ತಿಳಿದಿಲ್ಲ. ಆದರೆ ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಕ್ಕೆ ನನಗೆ ಖುಷಿಯಾಯಿತು. ನಿಮಗೆ ಶುಭವಾಗಲಿ" ಎಂದು ಹೇಳಿದ್ದಾರೆ.

  English summary
  Famous Cinematographer P.C Sreeram rejects film with Kangana Ranaut in lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X