For Quick Alerts
  ALLOW NOTIFICATIONS  
  For Daily Alerts

  ಸಿನಿಮಾಕ್ಕೆ ಬಳಸುತ್ತಿದ್ದ ವ್ಯಾನಿಟಿ ವ್ಯಾನ್‌ಗಳು ಕೋವಿಡ್ ರೋಗಿಗಳ ಚಿಕಿತ್ಸೆಗೆ

  |

  ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿದ್ದು ಶಿಸ್ತಿನ ಕರ್ಫ್ಯೂ ವಿಧಿಸಲಾಗಿದೆ. ಹಾಗಾಗಿ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ಬಂದ್ ಆಗಿವೆ. ಸ್ಟಾರ್ ನಟ-ನಟಿಯರು ಸಹ ಮುಂಬೈ ಬಿಟ್ಟು ಹೊರದೇಶಗಳಿಗೆ ತೆರಳಿಬಿಟ್ಟಿದ್ದಾರೆ.

  ಚಿತ್ರೀಕರಣವೇ ಇಲ್ಲದಿರುವ ಕಾರಣ ಸಿನಿಮಾಕ್ಕೆ ಬಳಸುವ ವ್ಯಾನಿಟಿ ವ್ಯಾನ್‌ಗಳು ಇತರೆ ವಾಹನಗಳು ಖಾಲಿ ಇದ್ದು ಅವುಗಳನ್ನು ವ್ಯಾನಿಟಿ ವ್ಯಾನ್ ಮಾಲೀಕರು ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲು ನೀಡಿದ್ದಾರೆ.

  'ಗಂಗೂಭಾಯಿ ಕಾಠಿಯಾವಾಡಿ', 'ಸರ್ಕಸ್' ಹಾಗೂ 'ರಕ್ಷಾ ಬಂಧನ್' ಸಿನಿಮಾಕ್ಕೆ ಬಳಕೆ ಆಗುತ್ತಿದ್ದ ವ್ಯಾನಿಟಿ ವ್ಯಾನ್‌ಗಳನ್ನು ಮುಂಬೈನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲು ನೀಡಲಾಗಿದೆ.

  ವ್ಯಾನಿಟಿ ವ್ಯಾನ್‌ ಬಾಡಿಗೆಗೆ ನೀಡುವ ವ್ಯವಹಾರ ಮಾಡುವ ಕೇತನ್ ರವಾಲ್ ಹಲವು ಬಿಗ್ ಬಜೆಟ್ ಸಿನಿಮಾಗಳಿಗೆ ವ್ಯಾನಿಟಿ ವ್ಯಾನ್ ಅನ್ನು ಬಾಡಿಗೆಗೆ ನೀಡುತ್ತಾರೆ. 'ಗಂಗೂಭಾಯಿ ಕಾಠಿಯಾವಾಡಿ', 'ಸರ್ಕಸ್' ಹಾಗೂ 'ರಕ್ಷಾ ಬಂಧನ್' ಮೂರೂ ಸಿನಿಮಾಕ್ಕೆ ಅವರೇ ವ್ಯಾನಿಟಿ ವ್ಯಾನ್ ನೀಡಿದ್ದರು. ಇದೀಗ ಕೋವಿಡ್ ಕಾರಣ ಈ ಮೂರು ಸಿನಿಮಾಗಳ ಚಿತ್ರೀಕರಣ ಬಂದ್ ಆಗಿದ್ದು ಆ ವ್ಯಾನಿಟಿ ವ್ಯಾನ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಉಚಿತವಾಗಿ ನೀಡಿದ್ದಾರೆ ಕೇತನ್ ರವಾಲ್.

  'ನನ್ನ ಬಳಿ ಸಾಕಷ್ಟು ವ್ಯಾನಿಟಿ ವ್ಯಾನ್‌ಗಳು ಇವೆ ಅವುಗಳನ್ನು ನಾನು ಕೋವಿಡ್‌ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ, ಪೊಲಿಸರಿಗೆ ಬಳಸಿಕೊಳ್ಳಲು ಕೊಟ್ಟಿದ್ದೇನೆ. ವ್ಯಾನಿಟಿ ವ್ಯಾನ್‌ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ಸಹ ನೀಡುತ್ತಿದ್ದಾರೆ' ಎಂದಿದ್ದಾರೆ ಕೇತನ್ ರವಾಲ್.

  ಕೊರೊನಾ ಸೋಂಕಿತರಿಗೆ ಟಿಪ್ಸ್ ಕೊಟ್ಟ ಅನು ಪ್ರಭಾಕರ್ | Filmibeat Kannada

  ಕಳೆದ ವರ್ಷವೂ ಸಹ ಕೇತನ್ ರವಾಲ್ ಅವರು ವ್ಯಾನಿಟಿ ವ್ಯಾನ್‌ಗಳನ್ನು ಕೋವಿಡ್‌ ಸಿಬ್ಬಂದಿಯ ಬಳಕೆಗೆ ಉಚಿತವಾಗಿ ನೀಡಿದ್ದರು.

  English summary
  Vanity Vans owner Ketan Rawal gave his vanity vans to COVID 19 front line fighters and some vans to treat COVID patients.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X