For Quick Alerts
  ALLOW NOTIFICATIONS  
  For Daily Alerts

  ಏರ್ಪೋಟ್‌ನಲ್ಲಿ ಸಲ್ಮಾನ್ ಖಾನ್ ತಡೆದಿದ್ದ ಅಧಿಕಾರಿಗೆ ದಂಡ ವಿಧಿಸಿಲ್ಲ: CISF

  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಮುಂಬೈ ಏರ್ಪೋರ್ಟ್ ಅಧಿಕಾರಿಗಳು ತಡೆದು ನಿಲ್ಲಿಸಿ ದಾಖಲೆ ಪರಿಶೀಲನೆ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದಂತೆ ಅಧಿಕಾರಿ ಸೋಮನಾಥ್ ಮೊಹಂತಿ ಫುಲ್ ಫೇಮಸ್ ಆಗಿದ್ದರು. ಅಧಿಕಾರಿಯ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

  ಆದರೆ ಕೆಲವು ವರದಿಗಳ ಪ್ರಕಾರ ಈ ಘಟನೆ ಬಳಿಕ ಅಧಿಕಾರಿ ಸೋಮನಾಥ್ ಅವರ ಫೋನ್ ಅನ್ನು ಹಿರಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಮಾಧ್ಯಮದವರು ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸೋಮನಾಥ್ ಅವರನ್ನು ಸಂಪರ್ಕ ಮಾಡಿದ್ದರು. ಮಾಧ್ಯಮದ ಜೊತೆ ಮಾತನಾಡಿರುವುದು ಸೋಮನಾಥ್ ಅವರಿಗೆ ಮುಳುವಾಗಿದೆ ಎಂದು ವರದಿಯಾಗಿತ್ತು.

  ಗಡ್ಡದಾರಿಯಾಗಿ ರಷ್ಯಾ ಬೀದಿಯಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್: ಹೊಸ ಅವತಾರ ಸಖತ್ ವೈರಲ್ಗಡ್ಡದಾರಿಯಾಗಿ ರಷ್ಯಾ ಬೀದಿಯಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್: ಹೊಸ ಅವತಾರ ಸಖತ್ ವೈರಲ್

  CISF ಪ್ರೋಟೋಕಾಲ್ ಪ್ರಕಾರ ಮಾಧ್ಯಮಗಳ ಜೊತೆ ಈ ರೀತಿ ಮಾತುಕತೆ ನಡೆಸುವಂತಿಲ್ಲ, ಸೋಮನಾಥ್ ನಿಯಮ ಮೀರಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಅವರ ಫೋನ್ ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ CISF ಸ್ಪಷ್ಟನೆ ನೀಡಿದ್ದು ಸಲ್ಮಾನ್ ಖಾನ್ ತಡೆದ ಅಧಿಕಾರಿಗೆ ಯಾವುದೇ ದಂಡವಿದಿಸಿಲ್ಲ, ಬದಲಾಗಿದೆ ಅವರ ವೃತ್ತಿಪರತೆಗೆ ಸೂಕ್ತ ಬಹುಮಾನ ಸಿಕ್ಕಿದೆ ಎಂದು ಟ್ವೀಟ್ ಮಾಡಿದೆ.

  CISF ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. "ಹರಿದಾಡುತ್ತಿರುವ ಸುದ್ದಿ ಸುಳ್ಳು ಮತ್ತು ಆಧಾರ ರಹಿತವಾಗಿದೆ. ವಾಸ್ತವವಾಗಿ ಸಂಬಂಧಪಟ್ಟ ಅಧಿಕಾರಿಯ ವೃತಿಪರತೆಗಾಗಿ ಸೂಕ್ತ ಬಹುಮಾನ ನೀಡಲಾಗಿದೆ" ಎಂದು ಹೇಳಿದ್ದಾರೆ.

  ನಟ ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ಅಂದರೆ ಆಗಸ್ಟ್ 20ರಂದು ಟೈಗರ್-3 ಚಿತ್ರೀಕರಣಕ್ಕೆಂದು ರಷ್ಯಾಗೆ ತೆರಳಿದ್ದರು. ಈ ಸಮಯದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಲ್ಮಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿರು. ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿ ನಿಲ್ದಾಣದ ಟರ್ಮಿನಲ್ ಕಡೆಗೆ ನಡೆಯುತ್ತಿದ್ದಾಗ CISF ಅಧಿಕಾರಿ ಸಲ್ಮಾನ್ ಖಾನ್ ಅವರನ್ನು ತಡೆದು ನಿಲ್ಲಿಸಿ ಮೊದಲು ಭದ್ರತಾ ಚೆಕ್ ಪಾಯಿಂಟ್ ನಿಂದ ಅನುಮತಿ ಪಡೆಯುವಂತೆ ಸೂಚಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  ಟೈಗರ್ -3 ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್

  ಸಲ್ಮಾನ್ ಖಾನ್ ರಷ್ಯಾಗೆ ಭೇಟಿ ನೀಡಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಚಿತ್ರೀಕರಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಲ್ಮಾನ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಟೈಗರ್ -3 ಚಿತ್ರಕ್ಕಾಗಿ ಸಲ್ಮಾನ್ ಖಾನ್ ಗಡ್ಡದಾರಿಯಾಗಿ ಕಾಣಿಸಿಕೊಂಡಿದ್ದಾರೆ.

  CISF clarified about officer who stopped Salman Khan at Airport, rewarded for exemplary professionalism

  ಉದ್ದ ಕೂದಲು ಮತ್ತು ದಾಡಿ ಬಿಟ್ಟಿರುವ ಸಲ್ಮಾನ್ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಚಿತ್ರೀಕರಣ ಸೆಟ್ ನಿಂದ ಫೋಟೋ ಲೀಕ್ ಆಗಿದ್ದು ಸಲ್ಮಾನ್ ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ಜೋಡಿಯಾಗಿ ಕತ್ರಿನಾ ಕೈಫ್ ಕಾಣಿಸಿಕೊಳ್ಳುತ್ತಿದ್ದಾರೆ. ಕತ್ರಿನಾ ಕೂಡ ರಷ್ಯಾದಿಂದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.

  ಟೈಗರ್ ಪ್ರಾಂಚೈಸಿಯ ಮೂರನೆ ಸರಣಿ ಇದಾಗಿದೆ. ಏಕ್ತಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾದ ಮುಂದುವರೆದ ಭಾಗ ಟೈಗರ್-3. ಈ ಚಿತ್ರಕ್ಕೆ ಮನೀಶ್ ಮಲ್ಹೋತ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟೈಗರ್-3ನಲ್ಲಿ ಸಲ್ಮಾನ್ ರಾ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಲೀಕ್ ಆಗಿರುವ ಫೋಟೋಗಳಲ್ಲಿ ಸಲ್ಮಾನ್ ಖಾನ್ ಜೊತೆ ಸಹೋದರ ಸೊಹೈಲ್ ಖಾನ್ ಪುತ್ರ ನಿರ್ವಾನ್ ಖಾನ್ ಸಹ ಕಾಣಿಸಿಕೊಂಡಿದ್ದಾರೆ.

  ಇನ್ನು ವಿಶೇಷ ಎಂದರೆ ಟೈಗರ್-3 ಚಿತ್ರದಲ್ಲಿ ಇಮ್ರಾನ್ ಹಶ್ಮಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಸಲ್ಮಾನ್ ಜೊತೆ ಕೆಲಸ ಮಾಡುವುದು ಅವರ ಕನಸಾಗಿದೆ ಎಂದು ಈ ಹಿಂದೆ ಇಮ್ರಾನ್ ಹೇಳಿದ್ದರು. ಇದೀಗ ಅವರ ಕನಸು ನನಸಾಗಿದೆ. ಸಲ್ಮಾನ್ ಖಾನ್ ಕೊನೆಯದಾಗಿ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಬಾಯ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ.

  English summary
  CISF clarified about officer who stopped Salman Khan at Airport, rewarded for exemplary professionalism, not penalised.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X