ಕಂಗನಾಗೆ ಮುಖಭಂಗ, ಅಮಾನತ್ತು ಆದೇಶ ವಾಪಸ್ ; ಕಪಾಳಮೋಕ್ಷ ಮಾಡಿದ್ದ ಕುಲ್ವಿಂದರ್ ಬೆಂಗಳೂರಿಗೆ ವರ್ಗಾವಣೆ..!
ಸಿನಿಮಾಗಳಿಗಿಂತ ವಿವಾದ ಹಾಗೂ ಹುಸಿ ಮುನಿಸುಗಳ ಮೂಲಕವೇ ಸದ್ದು ಮಾಡಿದವರು ಕಂಗನಾ ರಣಾವತ್. ಇಂಥ ಕಂಗನಾ ರಣಾವತ್ ಈಗ ಕೇವಲ ನಾಯಕಿ ನಿರ್ದೇಶಕಿ ಮಾತ್ರ ಅಲ್ಲ ಬಿಜೆಪಿ ಸಂಸದೆಯೂ ಹೌದು. ಸದ್ಯಕ್ಕೆ ಹಣಬಲದ ಜೊತೆ ಅಧಿಕಾರದ ಬಲವನ್ನೂ ಹೊಂದಿರುವ ಕಂಗನಾಗೆ ಮುಖಭಂಗವಾಯಿತಾ ಅನ್ನುವ ಚರ್ಚೆ ಈಗ ನಡೆಯುತ್ತಿದೆ.
ಹೌದು, ನಿಮಗೆ ನೆನಪಿದ್ದರೆ.. ಕೆಲ ದಿನದ ಹಿಂದೆ ಚಂಡೀಗಢದ ಶಹೀದ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಗನಾ ರಾವತ್ ಅವರ ಕೆನ್ನೆಗೆ ಸಿಐಎಸ್ಎಫ್ ಕುಲ್ವಿಂದರ್ ಕೌರ್, ಚಟೀರ್ ಎಂದು ಒಂದು ಬಾರಿಸಿದ್ದರು. ಆಗ ವಿವಾದವೂ ಆಗಿತ್ತು. ಕಪಾಳಮೋಕ್ಷ ಘಟನೆಯ ನಂತರ ಸಿಐಎಸ್ಎಫ್ ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿತ್ತು. ಅವರ ವಿರುದ್ಧ ಆಂತರಿಕ ವಿಚಾರಣೆ ಕೂಡ ಶುರುವಾಗಿತ್ತು.

ಇಷ್ಟೇ ಅಲ್ಲ ಈ ಘಟನೆಯ ನಂತರ ಕುಲ್ವಿಂದರ್ ಕೌರ್ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೂ ದಾಖಲಾಗಿತ್ತು. ಪೊಲೀಸರು ಐಪಿಸಿ ಸೆಕ್ಷನ್ 323 (ಹಲ್ಲೆ) ಮತ್ತು 341 (ರಸ್ತೆ ತಡೆ) ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದರು, ಆದರೆ ಇದನ್ನು ರೈತ ಸಂಘಟನೆಗಳು ವಿರೋಧಿಸಿದ್ದವು ಕೂಡ. ಕಂಗನಾ ರನೌತ್‌ಗೆ ಹೊಡೆದ ಆರೋಪದ ಮೇಲೆ ಅಮಾನತುಗೊಂಡ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸಿ ವಿವಿಧ ರೈತ ಸಂಘಗಳು ಭಾನುವಾರ ಮೊಹಾಲಿಯಲ್ಲಿ ಮೆರವಣಿಗೆ ನಡೆಸಿದ್ದವು. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ಹಲವಾರು ರೈತ ಸಂಘಟನೆಗಳು ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸಿ ಮೊಹಾಲಿಯಲ್ಲಿ ಮೆರವಣಿಗೆ ನಡೆಸಿದ್ದರು. ನ್ಯಾಯಯುತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರೈತ ಮುಖಂಡರು ಮಹಿಳಾ ಪೇದೆಗೆ ಅನ್ಯಾಯವಾಗಬಾರದು ಎಂದು ಆಗ್ರಹಿಸಿದ್ದರು.
ಹೀಗೆ ಅಂದಿನಿಂದ ಸದ್ದು ಮಾಡ್ತಾ ಬಂದ ಈ ಪ್ರಕರಣ ಈಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಯಾಕೆಂದರೆ.. ಕಂಗನಾ ಕೆನ್ನೆಗೆ ಹೊಡೆದಿದ್ದ ಸಿಐಎಸ್ಎಫ್ ಕುಲ್ವಿಂದರ್ ಕೌರ್ ಅವರ ಅಮಾನತು ಆದೇಶವನ್ನು ಈಗ ಹಿಂದಕ್ಕೆ ಪಡೆಯಲಾಗಿದ್ದು, ಸಿಐಎಸ್‌ಎಫ್‌ಗೆ ಮರಳಿ ಸೇರಿಸಲಾಗಿದೆ.ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವರ್ಗಾವಣೆ ಮಾಡಲಾಗಿದೆ.

ಇನ್ನೂ.. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುಲ್ವಿಂದರ್ ಕೌರ್ ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿ ಹೊರ ಬಂದ ಬೆನ್ನಲ್ಲಿಯೇ, ಆ ಕಡೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸೆಲೆಬ್ರೀಟಿಗಳ ಪ್ರಕರಣದಲ್ಲಿಯೇ ನ್ಯಾಯ ಸಿಗದೇ ಇದ್ದರೆ, ಜನ ಸಾಮಾನ್ಯರ ಕಥೆ ಏನು ಅನ್ನುವ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ. ವರ್ಗಾವಣೆ ಆದೇಶಕ್ಕೆ ಈಗ್ಲೇ ಬ್ರೇಕ್ ಹಾಕಬೇಕು ಎಂದು ಅಭಿಯಾನ ಕೂಡ ಮಾಡುತ್ತಿದ್ದಾರೆ.
ಅಂದ್ಹಾಗೇ ಪಂಜಾಬ್‌ನ ಸುಲ್ತಾನ್‌ಪುರ ಲೋಧಿ ಮೂಲದವರಾದ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್, ಕಳೆದ ಎರಡು ವರ್ಷಗಳಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತಿ ಕೂಡ ಸಿಐಎಸ್‌ಎಫ್ ಸಿಬ್ಬಂದಿ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಸಹೋದರ ಶೇರ್ ಸಿಂಗ್, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯಲ್ಲಿ ಸಂಘಟನಾ ಕಾರ್ಯದರ್ಶಿಯ ಹುದ್ದೆಯಲ್ಲಿದ್ದಾರೆ. ಹೀಗಾಗಿ ಕೌರ್‌ಗೆ ರೈತಾಪಿ ಜೀವನದ ನಂಟು ಇದೆ


Click it and Unblock the Notifications










