ಶಾಲಾ ಪರೀಕ್ಷೆಯಲ್ಲಿ ಕರೀನಾ ಕಪೂರ್ ಪುತ್ರನ ಬಗ್ಗೆ ಪ್ರಶ್ನೆ: ಇದೇನು ಪ್ರಶ್ನೆ ಕೇಳಿದ್ದಾರೆ?
ಸಿನಿಮಾ ಮತ್ತು ಶಿಕ್ಷಣ ನಾನೊಂದು ತೀರಾ, ನೀನೊಂದು ತೀರ ಎನ್ನುವಂತೆ ಇವೆ. ಅದರಲ್ಲೂ ಶಾಲೆ ಓದುವ ಮಕ್ಕಳನ್ನು ಸಿನಿಮಾ, ಟಿವಿಯಿಂದ ದೂರ ಇಡುತ್ತಾರೆ ಪೋಷಕರು. ಇಷ್ಟೋ ಮಂದಿ ಸಿನಿಮಾ ನೋಡಿ, ಟಿವಿ ನೋಡಿ ಮಕ್ಕಳು ಹಾಳುತ್ತಾರೆ, ಸರಿಯಾಗಿ ಓದುವುದಿಲ್ಲ ಎಂದು ಮಕ್ಕಳಿಗೆ ಬಯ್ಯುತ್ತಾರೆ.
ಶಾಲೆಯಲ್ಲಿ ಶಿಕ್ಷಕರು ಕೂಡ ಮಕ್ಕಳಿಗೆ ಸಿನಿಮಾ, ಟಿವಿಗಳಿಂದ ದೂರ ಇರಿ ಎಂದು ಹೇಳುತ್ತಿರುತ್ತಾರೆ. ಆದರೆ ಈಗ ಅದೆಲ್ಲವನ್ನೂ ತಲೆ ಕೆಳಗೆ ಮಾಡುವಂತಹ ಘಟನೆಯೊಂದು ನಡೆದಿದೆ. ಶಾಲಾ ಪರೀಕ್ಷೆ ಪತ್ರದಲ್ಲಿ ಸಿನಿಮಾ ಮಂದಿಯ ಕುರಿತು ಪ್ರಶ್ನೆ ಕೇಳಲಾಗಿದೆ.
ಪರೀಕ್ಷೆಯ ಬಳಿಕ ಈ ಪ್ರಶ್ನೆ ಪತ್ರಿಕೆ ಎಲ್ಲೆಡೆ ವೈರಲ್ ಆಗಿದೆ. ಈ ಪ್ರಶ್ನೆ ಓದಿದವರೆಲ್ಲಾ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆ ಪ್ರಶ್ನೆ ಏನು ಉತ್ತರಿಸಲು ಸುಲಭವಾಗಿತ್ತಾ ಎನ್ನುವ ಸುದ್ದಿ ಇಲ್ಲಿದೆ ಮುಂದೆ ಓದಿ...

ಸೈಫ್ ಅಲಿ ಖಾನ್, ಕರೀನಾ ಕಪೂರ್ ಪುತ್ರನ ಪೂರ್ತಿ ಹೆಸರೇನು:
ಮಧ್ಯಪ್ರದೇಶದ ಖಾಸಗಿ ಶಾಲೆಯಲ್ಲಿ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಪುತ್ರನ ಹೆಸರಿನ ಬಗ್ಗೆ ಎಂದು ಪ್ರಶ್ನೆ ಕೇಳಲಾಗಿದೆ. ಶಾಲೆಯ 6ನೇ ತರಗತಿ ಮಕ್ಕಳಿಗೆ 'ಸಾಮಾನ್ಯ ಜ್ಞಾನ' ವಿಷಯದ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಕೇಳಲಾದ ಪ್ರಶ್ನೆ ಈ ರೀತಿ ಇದೆ. ''ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪುತ್ರನ ಪೂರ್ತಿ ಹೆಸರು ಬರೆಯಿರಿ". ಪರೀಕ್ಷೆ ಬಳಿಕ ಈ ಪ್ರಶ್ನೆ ಪ್ರತಿಕೆಯ ಫೋಟೋ ಈಗ ವೈರಲ್ ಆಗಿದೆ.

ಈ ಪ್ರಶ್ನೆ ಕೊಟ್ಟ ಶಾಲೆಗೆ ಹಲವರ ವಿರೋಧ!
ಮಕ್ಕಳು ಪುಸ್ತಕದಲ್ಲಿ ಇರುವುದನ್ನು ಓದಿಕೊಂಡು ಪರೀಕ್ಷೆಗೆ ಸಜ್ಜಾಗಿರುತ್ತಾರೆ. ಆದರೆ ಸಾಮಾನ್ಯ ಜ್ಞಾನ ಪರೀಕ್ಷೆ ಎನ್ನುವ ಕಾರಣಕ್ಕೆ ಈ ರೀತಿಯ ಪ್ರಶ್ನೆ ಕೇಳಲಾಗಿದೆ. ಈ ರೀತಿಯ ಪ್ರಶ್ನೆ ಕೊಟ್ಟ ಶಾಲಾ ಮಂಡಳಿ ವಿರುದ್ಧ ಪೋಷಕ ಬಣ ವಿರೋಧ ವ್ಯಕ್ತ ಪಡಿಸಿದೆ. ಮಕ್ಕಳಿಗೆ ಈ ರೀತಿ ಪ್ರಶ್ನೆ ಕೇಳಿರುವ ಶಾಲೆಯ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಪ್ಪ ಅಮ್ಮನಂತೆ ಫೇಮಸ್ ತೈಮೂರ್!
ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ದಂಪತಿಯ ಮೊದಲ ಪುತ್ರ ತೈಮೂರ್ ಅಲಿ ಖಾನ್ ಹೆಚ್ಚು ಫೇಮಸ್ ಆಗಿದ್ದಾನೆ. ಅಪ್ಪ ಅಮ್ಮನಂತೆ ತೈಮೂರ್ ಕೂಡ ಸಿಕ್ಕಾಪಟ್ಟೆ ಜನಪ್ರಿಯ. ಈ ಚಿಕ್ಕ ವಯಸ್ಸಿನಲ್ಲಿಯೇ ತೈಮೂರ್‌ಗೆ ಅಭಿಮಾನಿಗಳು ಕೂಡ ಇದ್ದಾರೆ. ಆತನ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ವೈರಲ್ ಆಗುತ್ತವೆ. ಸೈಫ್-ಕರೀನಾ ದಂಪತಿ ತಮ್ಮ ಮಗನ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತ ಇರುತ್ತಾರೆ. ಹಾಗಾಗಿ ಶಾಲೆಯೊಂದರ ಪರೀಕ್ಷೆಯಲ್ಲೂ ತೈಮೂರ್ ಅಲಿ ಖಾನ್ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ತೈಮೂರ್ ಬೊಂಬೆಗೆ ಇತ್ತು ಸಿಕ್ಕಾಪಟ್ಟೆ ಬೇಡಿಕೆ!
ತೈಮೂರ್ ಅಲಿ ಖಾನ್ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮೊದಲ ಪುತ್ರ. ಹಾಗಾಗಿ ಈ ಮಗು ಹುಟ್ಟಿದಾಗ ಅವರ ಅಭಿಮಾನಿಗಳು ಮಗುವನ್ನು ನೋಡಲು ಕಾತರರಾಗಿದ್ದಾರು. ಅಲ್ಲದೇ ಮಗುವಿನ ಮೊದಲ ಫೋಟೊ ಕೂಡ ವೈರಲ್ ಆಗಿತ್ತು. ಬಳಿಕ ಮಾರುಕಟ್ಟೆಯಲ್ಲಿ ತೈಮೂರ್‌ನನ್ನು ಹೋಲುವ ಬೊಂಬೆ ಮಾರುಕಟ್ಟೆಗೆ ಬಂದು. ತೈಮೂರ್ ರೀತಿಯ ಬೊಂಬೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಕೂಡ ಇತ್ತು.


Click it and Unblock the Notifications











